Skip to main content

Posts

Showing posts from December, 2024

ಪ್ರೇಮಿಗಳ ದಿನದಂದು(ಫೆಬ್ರವರಿ 14) ಬಿಡುಗಡೆಯಾಗಲಿದೆ ಗುರುನಂದನ್ ಅಭಿನಯದ "ರಾಜು ಜೇಮ್ಸ್ ಬಾಂಡ್"

ಪ್ರೇಮಿಗಳ ದಿನದಂದು(ಫೆಬ್ರವರಿ 14) ಬಿಡುಗಡೆಯಾಗಲಿದೆ ಗುರುನಂದನ್ ಅಭಿನಯದ "ರಾಜು ಜೇಮ್ಸ್ ಬಾಂಡ್" ನೂತನ ವರ್ಷದ ಮೊದಲ ದಿನದಂದು ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕನಾಗಿ ನಟಿಸಿರುವ, ಅತ್ಯಂತ ನಿರೀಕ್ಷಿತ ಸಿನಿಮಾ “ರಾಜು ಜೇಮ್ಸ್ ಬಾಂಡ್ " ಚಿತ್ರದ ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ. ನಗುವೇ ಪ್ರಾಧಾನವಾಗಿರುವ ಈ ಚಿತ್ರ ಫೆಬ್ರವರಿ 14, ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರದ ಮನಮೋಹಕ ಹಾಡೊಂದು ಸಹ ಅನಾವರಣವಾಗಲಿದೆ. ಮೊದಲು ಹೇಳಿದಂತೆ ಡಿಸೆಂಬರ್ 27 ರಂದು ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ "UI" ಹಾಗೂ "ಮ್ಯಾಕ್ಸ್" ಚಿತ್ರಗಳು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾದ ಕಾರಣ ನಮ್ಮ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೆ ಹಾಕಿರುವುದಾಗಿ ತಿಳಿಸಿದ್ದ ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ಫೆಬ್ರವರಿ 14 ರಂದು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.  ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತ ಚಿತ್ರದ ಹೈಲೆಟ್ ಆಗಿದ್ದು, ಪ್ರೇಕ್ಷಕರನ್ನು ಆಕರ್ಷಿಸುವ...

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ “ಮ್ಯಾಕ್ಸ್” ಚಿತ್ರತಂಡದಿಂದ ಆಯೋಜಿಸಲಾಗಿದ್ದ “ಥ್ಯಾಂಕ್ಸ್ ಗಿವಿಂಗ್” ಸಮಾರಂಭದಲ್ಲಿ ಕಿಚ್ಚ ಸುದೀಪ್ ಹೇಳಿಕೆ ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಾಯಕರಾಗಿ ನಟಿಸಿರುವ "ಮ್ಯಾಕ್ಸ್" ಚಿತ್ರ ಡಿಸೆಂಬರ್ 25ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷವನ್ನು ಸಂಭ್ರಮಿಸಲು ಥ್ಯಾಂಕ್ಸ್ ಗಿವಿಂಗ್ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಎರಡೂವರೆ ವರ್ಷದ ಬಳಿಕ ನನ್ನ ಚಿತ್ರ ಬಿಡುಗಡೆಯಾಗಿದೆ. ಮ್ಯಾಕ್ಸ್ ಚಿತ್ರ ಯಶಸ್ಸು ಕಂಡಿದೆ. ಅಭಿಮಾನಿಗಳ ಹಾಗೂ ಚಿತ್ರತಂಡದವರ ಮುಖದಲ್ಲಿ ಗೆಲುವಿನ ನಗು ಮೂಡಿದೆ. ಆ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ. ನಾನು ಸದ್ಯ ಈ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದೇನೆ. ಪ್ರೀಕ್ವೆಲ್, ಸೀಕ್ವೆಲ್ ಯಾವುದರ ಬಗ್ಗೆ ಸದ್ಯಕ್ಕೆ ಗಮನ ಹರಿಸಿಲ್ಲ.ನಿರ್ದೇಶಕ ರಾಜಮೌಳಿ ಅವರು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಅದು ಇನ್ನಷ್ಟು ಖುಷಿಯ ಸಂಗತಿ. ತಮಿಳಿನಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು,ನಿರ್ದೇಶಕರು ಅಲ್ಲಿಯವರೆ ಆಗಿರುವುದರಿಂದ ಅವರ ಮುಖದಲ್ಲಿ ಖುಷಿ ಕಾಣುತ್ತಿದೆ. ನಟನಾಗಿ ನನಗೂ ಹೆಮ್ಮೆ ಇದೆ. ತಮ...