ಮತ್ತೆ ಬಾಲಿವುಡ್ಗೆ ಇಂದ್ರಜಿತ್ ಲಂಕೇಶ್..'ಜೈ ಹಿಂದ್ ಜೈ ಸಿಂಧ್' ಚಿತ್ರದ ನಿರ್ದೇಶನ ; ಉತ್ತರಾಖಂಡದಲ್ಲಿ ಬಿರುಸಿನ ಚಿತ್ರೀಕರಣ..
ಮತ್ತೆ ಬಾಲಿವುಡ್ಗೆ ಇಂದ್ರಜಿತ್ ಲಂಕೇಶ್.. 'ಜೈ ಹಿಂದ್ ಜೈ ಸಿಂಧ್' ಚಿತ್ರದ ನಿರ್ದೇಶನ ; ಉತ್ತರಾಖಂಡದಲ್ಲಿ ಬಿರುಸಿನ ಚಿತ್ರೀಕರಣ.. ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿಟ್ಟಿದ್ದಾರೆ. ಅವರು ಇದೀಗ 'ಜೈ ಹಿಂದ್ ಜೈ ಸಿಂಧ್' ಎಂಬ ಹಿಂದಿ ಚಿತ್ರವನ್ನು ಸದ್ದಿಲ್ಲದೆ ನಿರ್ದೇಶಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಉತ್ತರಾಖಂಡದಲ್ಲಿ ಭರದಿಂದ ಸಾಗಿದೆ. ಶನಿವಾರ, ಡೆಹ್ರಾಡೂನ್ ನಲ್ಲಿ 'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭದ ಜೊತೆಗೆ, ಚಿತ್ರದ ಮೊದಲ ಪತ್ರಿಕಾಗೋಷ್ಠಿ ಅದ್ದೂರಿಯಾಗಿ ನಡೆಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮೂಲೆಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಪತ್ರಕರ್ತರು ಹಾಜರಿದ್ದರು. ಈ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶಾ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಹಾಜರಿದ್ದರು. 'ಜೈ ಹಿಂದ್ ಜೈ ಸಿಂಧ್'' ಚಿತ್ರವನ್ನು ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಸ್ಯಾಮಿ ನನ್ವಾನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದ, ಉಪಾಸನಾ ಸಿಂಗ್, ಅಮಿತ...