Skip to main content

Posts

Showing posts from January, 2025

'ವಿದ್ಯಾಪತಿ'ಗೆ ಸಿಕ್ಕರು ಖಡಕ್ ವಿಲನ್... ನಾಗಭೂಷಣ್ ಎದುರು ಗರುಡ ರಾಮ್ ಅಬ್ಬರ

 'ವಿದ್ಯಾಪತಿ'ಗೆ ಸಿಕ್ಕರು ಖಡಕ್ ವಿಲನ್... ನಾಗಭೂಷಣ್ ಎದುರು ಗರುಡ ರಾಮ್ ಅಬ್ಬರ ನಾಗಭೂಷಣ್  'ವಿದ್ಯಾಪತಿ'ಗೆ ಖಡಕ್ ವಿಲನ್ ಗರುಡ ರಾಮ್ ಎಂಟ್ರಿ ಡಾಲಿ ನಿರ್ಮಾಣದ 'ವಿದ್ಯಾಪತಿ'ಗೆ ಕೆಜಿಎಫ್  ವಿಲನ್ ಎಂಟ್ರಿ..ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್ ಡಾಲಿ ಪಿಕ್ಚರ್ಸ್ ನಿರ್ಮಾಣದಡಿ ಮೂಡಿ ಬರ್ತಿರುವ ವಿದ್ಯಾಪತಿ ಸಿನಿಮಾಗೀಗ ಬಹುಬೇಡಿಕೆಯ ಖಳನಾಯಕ ಗರುಡ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್, ಸಲಾರ್, ಬಘೀರ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಖಡಕ್ ವಿಲನ್ ಗರುಡ ರಾಮ್ ನಾಗಭೂಷಣ್ ಎದುರು ತೊಡೆ ತಟ್ಟಿದ್ದಾರೆ.   ರಾಮಚಂದ್ರ ರಾಜು ಹೆಸರಿಗಿಂತ ಗರುಡ ಅಂತಾನೆ ಖ್ಯಾತಿಗಳಿಸಿರುವ ಅವರು ವಿದ್ಯಾಪತಿ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಗರುಡ ರಾಮ್ ಎಂಟ್ರಿಯ ಮೇಕಿಂಗ್ ವಿಡಿಯೋ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ರಾಮಚಂದ್ರ ರಾಜು ಕಾಣಿಸಿಕೊಂಡಿದ್ದಾರೆ. ಗರುಡ ರಾಮ್ ಹಾಗೂ ನಾಗಭೂಷಣ್ ಇವರಿಬ್ಬರ ಜುಲಗ್ಬಂಧಿ ಹೇಗಿರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗ...

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ? ಅಖಾಡದಲ್ಲಿ ಸೆಣೆಸಾಡಲು ಕರ್ನಾಟಕ ಬುಲ್ಡೋಜರ್ಸ್ ರೆಡಿ..ತಂಡದಲ್ಲಿ ಯಾರಿದ್ದಾರೆ?

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ? ಅಖಾಡದಲ್ಲಿ ಸೆಣೆಸಾಡಲು ಕರ್ನಾಟಕ ಬುಲ್ಡೋಜರ್ಸ್ ರೆಡಿ..ತಂಡದಲ್ಲಿ ಯಾರಿದ್ದಾರೆ? ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ಸಿಸಿಎಲ್ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ರಂಗೇರುತ್ತಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಸಾಥ್ ಕೊಡುತ್ತಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ. ಈ ಬಾರಿಯ ವಿಶೇಷ ಅಂದ್ರೆ ಕಳೆದ ಬಾರಿ ಮಿಸ್ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಸೇರ್ಪಡೆಯಾಗಿದ್ದಾರೆ. ಸಿಸಿಎಲ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿನ್ನೆ ಸುದ್ದಿ ಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಕಿಚ್ಚ ಸುದೀಪ್, ಸಿಸಿಎಲ್ ಆಯೋಜಕರಾದ ವಿಷ್ಣು ಇಂದೋರಿ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಅಶೋಕ್ ಖೇಣಿ ಉಪಸ್ಥಿತರಿದ್ದರು.  ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಮಾತನಾಡಿ, ಸಿಸಿಎಲ್ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ...

ಬೆಂಗಳೂರಿನಲ್ಲಿ "ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ" ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ

ಬೆಂಗಳೂರಿನಲ್ಲಿ "ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ" ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ... ಟೆಕಿಯಾನ್ ಮತ್ತು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥೆಗಳು ಒಡಗೂಡಿ ಬೆಂಗಳೂರಿನಲ್ಲಿ "ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ" ತೆರೆದಿವೆ. ಬೆಂಗಳೂರು, ಭಾರತ - 30.01.2025 ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಟೆಕಿಯಾನ್ ಬೆಂಗಳೂರಿನಲ್ಲಿ "ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ" ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ. ಈ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವು ಟೆಕಿಯಾನ್ ಸಂಸ್ಥೆಯ ಮುಂದುವರೆಸುತ್ತಿರುವ ಬದ್ಧತೆಯ ಭಾಗವಾಗಿದೆ.   ಕನಕಪುರ ರಸ್ತೆಯಲ್ಲಿರುವ ಈ ಕೇಂದ್ರವು ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ದಿಕ್ಕುದೆಸೆಯಿಲ್ಲದ ಬೆಕ್ಕುಗಳಿಗೆ ಸಮಗ್ರ ಆರೈಕೆ ನೀಡುತ್ತದೆ. ಈ ಸೇವೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಆಶ್ರಯ ಮತ್ತು ದತ್ತು ಪಡೆಯುವ ಕ್ರಿಯೆಗಳು ಸೇರಿವೆ. ಕೇಂದ್ರದ ಸೇವಾ ಸೌಲಭ್ಯಗಳ ಕುರಿತು ಟೆಕಿಯಾನ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್ ಮಾತನಾಡುತ್ತಾ " ಬೆಂಗಳೂರಿನ ದುರ್ಬಲ ಬೆಕ್ಕುಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಪ್ರಾಣಾ ಅನಿಮಲ್ ಫೌಂಡೇಶನ್‌ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಕೇಂದ್ರವು ಅಗತ್ಯ ಆರೈಕೆ ಮಾತ್ರವಲ್ಲದೆ...

'S/O ಮುತ್ತಣ್ಣ' ಚಿತ್ರದ ನಾಯಕ ಪ್ರಣಮ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ...

'S/O ಮುತ್ತಣ್ಣ' ಚಿತ್ರದ ನಾಯಕ ಪ್ರಣಮ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ... ಮಾರ್ಚ್ ನಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿದೆ ತಂದೆ - ಮಗನ ಬಾಂಧವ್ಯ ಸಾರುವ ಈ ಚಿತ್ರ....  ಇದೇ ಚಿತ್ರತಂಡದ ಜೊತೆಗೆ ನೂತನ ಚಿತ್ರದಲ್ಲೂ ನಾಯಕನಾಗಿ ನಟಿಸಲಿದ್ದಾರೆ ಪ್ರಣಮ್ ದೇವರಾಜ್... ಜನವರಿ 29, ಡೈನಾಮಿಕ್ ಹೀರೊ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ಅವರ ಹುಟ್ಟುಹಬ್ಬ. ಪ್ರಸ್ತುತ ಪ್ರಣಮ್ ಅವರು ನಾಯಕನಾಗಿ ನಟಿಸಿರುವ *'S/O ಮುತ್ತಣ್ಣ' ಚಿತ್ರತಂಡ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.  ನಾಯಕ ಪ್ರಣಮ್ ದೇವರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೊಂದು ಸಂತೋಷದ ವಿಷಯ ಹೊರಬಂದಿದೆ. S/O ಮುತ್ತಣ್ಣ' ಚಿತ್ರತಂಡ ಹಾಗೂ ಪ್ರಣಮ್ ಅವರ ಕಾಂಬಿನೇಶನ್ ನಲ್ಲಿ ಸದ್ಯದಲ್ಲೇ ಮತ್ತೊಂದು ನೂತನ ಚಿತ್ರ ಸೆಟೇರಲಿದೆ. ಈಗಾಗಲೇ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿರುವ, ತಂದೆ - ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ "S/O ಮುತ್ತಣ್ಣ'' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ಚಿತ್ರದ ಟೀಸರ್ ಕರುನಾಡ ಚಕ್ರವರ್ತಿ ರಿಯಲ್ "S/O ಮುತ್ತಣ್ಣ'' ಶಿವರಾಜಕುಮಾರ್ ಅವರಿಂದ ಅನಾವರಣಗೊಂಡಿತ್ತು. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಲಿದೆ. ಮಾರ್ಚ್ ವೇಳ...

ಪ್ರಜ್ವಲ್ ದೇವರಾಜ್ ಗೆ ಸೋನಲ್ ಮೊಂಥೆರೋ ನಾಯಕಿ..ಶಿವರಾತ್ರಿ ಹಬ್ಬಕ್ಕೆ 'ರಾಕ್ಷಸ' ದರ್ಶನ...

ಪ್ರಜ್ವಲ್ ದೇವರಾಜ್ ಗೆ ಸೋನಲ್ ಮೊಂಥೆರೋ ನಾಯಕಿ..ಶಿವರಾತ್ರಿ ಹಬ್ಬಕ್ಕೆ 'ರಾಕ್ಷಸ' ದರ್ಶನ ರಾಕ್ಷಸ ಸಿನಿಮಾಗೆ ಸೋನಲ್ ಮೊಂಥೆರೋ ನಾಯಕಿ...ಶಿವರಾತ್ರಿಗೆ ಪ್ರಜ್ವಲ್ ದೇವರಾಜ್ ಚಿತ್ರ ರಿಲೀಸ್... ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಇದೆ. ಆ ಪೈಕಿ ‘ರಾಕ್ಷಸ’ ಸಿನಿಮಾ ಕೂಡ ಕುತೂಹಲ ಮೂಡಿಸಿದೆ.‌ಇದೀಗ ರಾಕ್ಷಸ ಸಿನಿಮಾ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಶಿವರಾತ್ರಿಗೆ ದರ್ಶನ ಕೊಡುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕರಾವಳಿ ಸುಂದ್ರಿ ಸೋನಲ್ ಮೊಂಥೆರೋ ಅಭಿನಯಿಸಿದ್ದಾರೆ. ನಿರ್ದೇಶಕ ಹೆಚ್ ಲೋಹಿತ್ ಸಿನಿಮಾಗಳಲ್ಲಿ ನಾಯಕಿಯರಿಗೆ ಪ್ರಾಧಾನ್ಯತೆ ಇದ್ದೇ ಇರಲಿದೆ. ಅದರಂತೆ ಗಮನಸೆಳೆಯುವ ಪಾತ್ರದಲ್ಲಿ ಸೋನಲ್ ನಟಿಸಿದ್ದು, ಶೂಟಿಂಗ್ ನಲ್ಲಿ ತಾವು ಭಾಗಿಯಾಗುತ್ತಿರುವ ಕುತೂಹಲ ಅವರಲ್ಲಿದೆ. ಟೈಮ್ ಲೂಪ್ ಜೊತೆಗೆ ಹಾರರ್ ಕಥೆಯನ್ನು ಒಳಗೊಂಡಿರುವ ರಾಕ್ಷಸನಿಗೆ ಮಮ್ಮಿ, ದೇವಕಿ ಚಿತ್ರಗಳನ್ನ ಡೈರೆಕ್ಟರ್ ಮಾಡಿರುವ ಹೆಚ್ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಫೆಬ್ರವರಿ 26ರಂದು ಬಿಡುಗಡೆಯಾಗ್ತಿರುವ ರಾಕ್ಷಸ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ...

ಪೋರ್ಚುಗಲ್‌ನಲ್ಲಿ 'ಗತವೈಭವ' ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ... ಈ ವರ್ಷವೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನಿಮಾ

ಪೋರ್ಚುಗಲ್‌ನಲ್ಲಿ 'ಗತವೈಭವ' ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ... ಈ ವರ್ಷವೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನಿಮಾ... ಸಿಂಪಲ್ ಸುನಿ ಸಾರಥ್ಯದ 'ಗತವೈಭವ' ಚಿತ್ರೀಕರಣ ಮುಕ್ತಾಯ..ದುಷ್ಯಂತ್-ಆಶಿಕಾ ಜೋಡಿ ಸಿನಿಮಾ ಯಾವಾಗ ರಿಲೀಸ್? ದುಷ್ಯಂತ್-ಆಶಿಕಾ ನಟನೆಯ 'ಗತವೈಭವ' ಶೂಟಿಂಗ್ ಮುಕ್ತಾಯ..ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗ್ತಿದೆ ಸಿಂಪಲ್ ಸುನಿ ಸಿನಿಮಾ ಸ್ಯಾಂಡಲ್ ವುಡ್ ಬೆಳ್ಳಿಪರದೆಯಲ್ಲಿ ಗತವೈಭವ ಕಥೆಯನ್ನು ಹರವಿಡೋದಿಕ್ಕೆ ಟ್ಯಾಲೆಂಡ್ ಡೈರೆಕ್ಟರ್ ಸಿಂಪಲ್ ಸುನಿ ರೆಡಿಯಾಗಿದ್ದಾರೆ. ಸುನಿ ಭತ್ತಳಿಕೆಯಿಂದ ಬರ್ತಿರುವ ಬಹುನಿರೀಕ್ಷಿತ ಚಿತ್ರ ಗತವೈಭವ ಚಿತ್ರೀಕರಣ ಮುಕ್ತಾಯಗೊಂಡಿದೆ. ಪೋರ್ಚುಗಲ್ ನಲ್ಲಿ ಹಾಗು ಮುಂತಾದೆಡೆ ಯಶಸ್ವಿಯಾಗಿ 100 ಕಾಲ್ ಶೀಟ್ ಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ. ನಾಯಕ ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಚಿತ್ರೀಕರಣ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೇ ವರ್ಷದ ಮೊದಲಾರ್ಧದಲ್ಲಿ ಗತವೈಭವ ಸಿನಿಮಾವನ್ನು ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ. ಸಿಂಪಲ್ ಸುನಿ ಎಲ್ಲಾ ಪ್ರಕಾರದ ಸಿನಿಮಾಗೂ ಕೈ ಹಾಕಿದ್ದಾರೆ. ಕಾಮಿಡಿ, ಸಿರೀಯಸ್, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತುತಂದಿದ್ದಾರೆ. ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಗತವೈಭವ ಚಿತ್ರದ ಮೂಲಕ ಯುವ ಪ್ರತಿಭೆ ದುಷ್ಯಂತ್...

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣವಾಗಲಿದೆ ಗುರುನಂದನ್ ಅಭಿನಯದ "ರಾಜು ಜೇಮ್ಸ್ ಬಾಂಡ್" ಚಿತ್ರದ ಟ್ರೇಲರ್..

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣವಾಗಲಿದೆ ಗುರುನಂದನ್ ಅಭಿನಯದ "ರಾಜು ಜೇಮ್ಸ್ ಬಾಂಡ್" ಚಿತ್ರದ ಟ್ರೇಲರ್..   ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ " ಚಿತ್ರದ "ಕಣ್ಮಣಿ" ಹಾಗೂ ಶೀರ್ಷಿಕೆ ಗೀತೆ ಕನ್ನಡಿಗರ ಮನ‌ ಗೆದ್ದಿದೆ. ಲಂಡನ್ ಚಿತ್ರೀಕರಣದ ಸನ್ನಿವೇಶಗಳು ಹಾಗೂ ಟೀಸರ್ ಸಹ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರದ ಟ್ರೇಲರ್ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕುತೂಹಲ ಅಭಿಮಾನಿಗಳ ಮನದಲ್ಲಿ ಮನೆ ಮಾಡಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಜನವರಿ 31ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣವಾಗಲಿದೆ.  ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ಫೆಬ್ರವರಿ 14 ರಂದು ಅದ್ದೂರಿಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ.  ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತ ಚಿತ್ರದ ಹೈಲೆಟ್ ಆಗಿದ್ದು, ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.  ಗುರುನಂದನ್ ಅವರಿಗೆ ನಾಯಕಿಯಾಗಿ ಮೃದುಲಾ ನಟಿಸಿದ್ದಾರೆ. ಸಾಧು ಕೋಕಿಲ, ಅಚ್ಯುತ್ ಕ...

ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಅವರಿಂದ ಅನಾವರಣವಾಯಿತು "ನಾಗವಲ್ಲಿ ಬಂಗಲೆ" ಚಿತ್ರದ ಟೀಸರ್ ಹಾಗೂ ಪೋಸ್ಟರ್...

ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಅವರಿಂದ ಅನಾವರಣವಾಯಿತು "ನಾಗವಲ್ಲಿ ಬಂಗಲೆ" ಚಿತ್ರದ ಟೀಸರ್ ಹಾಗೂ ಪೋಸ್ಟರ್... ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿ 28 ರಂದು ತೆರೆಗೆ.. ಕನ್ನಡದಲ್ಲಿ ಈಗ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳದೇ ಕಾರುಬಾರು. ಅಂತಹ ವಿಭಿನ್ನ ಕಂಟೆಂಟ್ ಹೊಂದಿರುವ ಹಾರಾರ್ ಜಾನರ್ ಚಿತ್ರ "ನಾಗವಲ್ಲಿ ಬಂಗಲೆ". ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಯಾಯಿತು. ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಟೀಸರ್ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರಕ್ಕೆ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ‌ ಶುಭ ಹಾರೈಸಿದರು. ಮಾಜಿ ಉಪ ಮಹಾಪೌರರಾದ ಪುಟ್ಟರಾಜು ಅವರು ಸಹ ಈ ಸಂದರ್ಭದಲ್ಲಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  "ನಾಗವಲ್ಲಿ ಬಂಗಲೆ" ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳಿರುತ್ತದೆ. ಆರು ಜನ ಹುಡುಗಿಯರು ಈ ಆರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆರು ಪಾತ್ರಗಳು "ನಾಗವಲ್ಲಿ ಬಂಗಲೆ" ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎಂಬುದೆ ಚಿತ್ರದ ಕಥಾ ಹಂದರ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ತಿಳಿಸಿದರು.‌ ನಮ್ಮ ಆಫೀಸ್ ನ...

"ರುದ್ರ ಗರುಡ ಪುರಾಣ" ಚಿತ್ರದ ಯಶಸ್ಸಿನ ಖುಷಿ. ಮಾಧ್ಯಮದ ಮುಂದೆ ಹಂಚಿಕೊಂಡ ರಿಷಿ..

"ರುದ್ರ ಗರುಡ ಪುರಾಣ" ಚಿತ್ರದ ಯಶಸ್ಸಿನ ಖುಷಿ. ಮಾಧ್ಯಮದ ಮುಂದೆ ಹಂಚಿಕೊಂಡ ರಿಷಿ..  2025 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ, ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರ ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ಮ ಚಿತ್ರಕ್ಕೆ ಜನರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು ಎಂದು ಮಾತನಾಡಿದ ನಟ ರಿಷಿ, ಈ ಸಂದರ್ಭದಲ್ಲಿ ನಾನು ಮೊದಲು ಮಾಧ್ಯಮದವರನ್ನು ಅಭಿನಂದಿಸುತ್ತೇನೆ. ಅವರು ನಮ್ಮ ಚಿತ್ರದ ಬಗ್ಗೆ ಬರೆದ ಅದ್ಭುತ ವಿಮರ್ಶೆಗಳನ್ನು ನೋಡಿ ನಮ್ಮ ಚಿತ್ರಕ್ಕೆ ಹೆಚ್ಚು ಜನರು ಬರುತ್ತಿದ್ದಾರೆ. ಚಿತ್ರವನ್ನು ನೋಡುತ್ತಿರುವ ಪ್ರತಿಯೊಬ್ಬರು ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳನ್ನಾಡುತ್ತಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ. ಐದು ದಿನಗಳಲ್ಲಿ ಥಿಯೇಟರ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿಗೆ ಆಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಇನ್ನೂ ಹೆಚ್ಚಿನ ಜನರು ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಎಂದು ಮನವಿ ಮಾಡಿದರು. ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್ ಸಹ ಚಿತ್ರತಂಡದ ಸದಸ್ಯರಿಗೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು. ...

ಆಕ್ಷನ್ ಪ್ಯಾಕ್ಡ್ 'ಗಜರಾಮ' ಟ್ರೇಲರ್ ರಿಲೀಸ್...

ಆಕ್ಷನ್ ಪ್ಯಾಕ್ಡ್ 'ಗಜರಾಮ' ಟ್ರೇಲರ್ ರಿಲೀಸ್... ಪೈಲ್ವಾನ್ ಅವತಾರದಲ್ಲಿ ಖದರ್ ತೋರಿಸಿದ ರಾಜವರ್ಧನ್.. ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅಭಿನಯದ ಬಹು ನಿರೀಕ್ಷಿತ ಗಜರಾಮ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 2 ನಿಮಿಷ 46 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಆಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಅಂಶಗಳೇ ಹೈಲೆಟ್ಸ್.. ರಾಜವರ್ಧನ್ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ಖದರ್ ತೋರಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿರುವ ಸಾರಾಯಿ ಶಾಂತಮ್ಮ ಹಾಡು ಈಗಾಗಲೇ ಹಿಟ್ ಲೀಸ್ಟ್ ಸೇರಿದೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ , ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಮೆಲೋಡಿ ಮಾಂತ್ರಿಕ ಮನೋಮೂರ್ತಿ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ.  ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್‌ ಅವರೀಗ 'ಗಜರಾಮ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. 'ಬಾಂಡ್ ರವಿ' ಸಿನಿಮಾವನ್ನು ನಿರ್ಮಾಣ...

ತಿಮ್ಮನ ಮೊಟ್ಟೆಗಳು ಪ್ರೀಮಿಯರ್ ಶೋ ಅಮೇರಿಕಾದ ಡಾಲಸ್ ನಲ್ಲಿ...

ತಿಮ್ಮನ ಮೊಟ್ಟೆಗಳು ಪ್ರೀಮಿಯರ್ ಶೋ ಅಮೇರಿಕಾದ ಡಾಲಸ್ ನಲ್ಲಿ   ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ “ತಿಮ್ಮನ ಮೊಟ್ಟೆಗಳು” ಚಿತ್ರ ಅಮೇರಿಕಾದ ಡಾಲಸ್ ನಲ್ಲಿ ಅದ್ದೂರಿ ಪ್ರೀಮಿಯರ್ ಶೋನೊಂದಿಗೆ ಬಿಡುಗಡೆಯಾಗಿದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಸುಂದರ ಕೌಟುಂಬಿಕ ಕಥಾನಕವನ್ನ ಹೊಂದಿರುವ ಚಿತ್ರ ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಹಾಗೂ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಸನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.  ರಕ್ಷಿತ್ ತೀರ್ಥಹಳ್ಳಿಯವರೇ ಬರೆದ “ಕಾಡಿನ ನೆಂಟರು” ಕಥಾ ಸಂಕಲನದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಅವರ ಸಂಕಲನ ಹಾಗೂ ಹೇಮಂತ್ ಜೋಯಿ ಅವರ ಸುಮಧುರ ಸಂಗೀತ ಚಿತ್ರಕ್ಕಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ಹಾಡಿರುವ ಹಾಡುಗಳು ಇಂಪಾಗಿದ್ದು ಕಥೆಗೆ ಪೂರಕವಾಗಿವೆ. ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಕರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ...

ಮಲಯಾಳಂ ಸಿನಿ ಇಂಡಸ್ಟ್ರೀಯತ್ತ ಲೈಕಾ ಪ್ರೊಡಕ್ಷನ್... ಹೈ ಆಕ್ಷನ್ ಪ್ಯಾಕ್ಡ್ 'ಎಲ್-2:ಎಂಪುರಾನ್' ಟೀಸರ್ ರಿಲೀಸ್

ಮಲಯಾಳಂ ಸಿನಿ ಇಂಡಸ್ಟ್ರೀಯತ್ತ ಲೈಕಾ ಪ್ರೊಡಕ್ಷನ್... ಹೈ ಆಕ್ಷನ್ ಪ್ಯಾಕ್ಡ್ 'ಎಲ್-2:ಎಂಪುರಾನ್' ಟೀಸರ್ ರಿಲೀಸ್ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಈ ಕ್ರೇಜಿ ಕಾಂಬಿನೇಷನ್ ಬಹುನಿರೀಕ್ಷಿತ ಸಿನಿಮಾ ಎಲ್-2:ಎಂಪುರಾನ್. ಲೂಸಿಫರ್ ಮೊದಲ ಭಾಗದ ಮುಂದುವರೆದ ಅಧ್ಯಾಯವಾಗಿರುವ ಎಲ್-2:ಎಂಪುರಾನ್ ಚಿತ್ರದ ಆಕ್ಷನ್ ಪ್ಯಾಕ್ಡ್ ಟೀಸರ್ ಅನಾವರಣಗೊಂಡಿದೆ.  ಕೊಚ್ಚಿಯಲ್ಲಿ ನಿನ್ನೆ ಎಲ್-2:ಎಂಪುರಾನ್ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಾಲಿವುಡ್ ಮತ್ತೊಬ್ಬ ಸೂಪರ್ ಸ್ಟಾರ್ ಮಮ್ಮುಟ್ಟಿ ಟೀಸರ್ ಲಾಂಚ್ ಇವೆಂಟ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿ ಟೀಸರ್ ಅನಾವರಣ ಮಾಡಿದರು. ಕಾಲಿವುಡ್ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಈ ಚಿತ್ರದ ಮೂಲಕ ಮಾಲಿವುಡ್ ಗೆ ಎಂಟ್ರಿಯಾಗಿದೆ. ಬಹಳ ಅದ್ಧೂರಿಯಾಗಿ ಲೂಸಿಫರ್ ಪಾರ್ಟ್ 2 ಸಿನಿಮಾವನ್ನು ನಿರ್ಮಾಪಕ ಸುಭಾಸ್ಕರನ್ ಹಾಗೂ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ. ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ಅಬ್ಬರಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ.  L2E: ಎಂಪುರಾನ್ ಚಿತ...

ಲೇಟ್‌ ಆಗಿ ಬಂದ್ರೂ ಲೇಟೆಸ್ಟ್‌ ಆಗಿ ಬರ್ತಿದ್ದಾನೆ ಗಣ: ಸೀಟ್‌ ಎಡ್ಜ್‌ ಟ್ರೈಮ್‌ ಟ್ರಾವೆಲ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದ ಪ್ರಜ್ವಲ್‌ ದೇವರಾಜ್‌...

ಲೇಟ್‌ ಆಗಿ ಬಂದ್ರೂ ಲೇಟೆಸ್ಟ್‌ ಆಗಿ ಬರ್ತಿದ್ದಾನೆ ಗಣ: ಸೀಟ್‌ ಎಡ್ಜ್‌ ಟ್ರೈಮ್‌ ಟ್ರಾವೆಲ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದ ಪ್ರಜ್ವಲ್‌ ದೇವರಾಜ್‌ ... ಜನವರಿ 31ರ ಶುಕ್ರವಾರ ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗಣ ಬಿಡುಗಡೆ... ಗಣ ಸಿನಿಮಾ ಎಂಬುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್‌ ಫೋನ್.‌ ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತತೆಗೆ ಹೊರಳುತ್ತದೆ. ಹೀಗೆ ಟೈಮ್‌ ಟ್ರಾವೆಲಿಂಗ್‌ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಈ ಗಣ. ಲೇಟ್‌ ಆದರೂ ಲೇಟೆಸ್ಟ್‌ ಆಗಿಯೇ ಈ ಚಿತ್ರ ತೆರೆಗೆ ಬರುತ್ತಿದೆ. ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರೆ, ಯಶಾ ಶಿವಕುಮಾರ್‌, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ. ಇದೀಗ ಇದೇ ಚಿತ್ರ ಜನವರಿ 31ರಂದು ಚಿತ್ರಮಂದಿರಗಳಿಗೆ ಗ್ರ್ಯಾಂಡ್‌ ಆಗಿ ಲಗ್ಗೆ ಇಡುತ್ತಿದೆ. ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್‌ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇವರಷ್ಟೇ ಅಲ್ಲ, ಗಣ ಸಿನಿಮಾದ ನಿರ್ದೇಶಕರೂ ಕೂಡ ತೆಲುಗು ಮೂಲದವರೇ. ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಹಿಟ್‌ ಆದ ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್‌ ಅವರ ಜತೆಗೆ ಕ...

ಸೆನ್ಸಾರ್ ಮುಗಿಸಿದ "ಆಪರೇಷನ್ ಡಿ" ತೆರೆಗೆ ಬರಲು ಸಿದ್ದ...

ಸೆನ್ಸಾರ್ ಮುಗಿಸಿದ "ಆಪರೇಷನ್ ಡಿ" ತೆರೆಗೆ ಬರಲು ಸಿದ್ದ... ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ ಹಾಗೂ ತಿರುಮಲೇಶ್ ವಿ ನಿರ್ದೇಶನದ *"ಆಪರೇಶನ್ ಡಿ"* ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.   "ಆಪರೇಷನ್ ಡಿ" ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಒಂದು ಕಡೆ ರಕ್ತ ಕಾಣುವುದಿಲ್ಲ ಹಾಗೂ ಆಕ್ಷನ್ ಸನ್ನಿವೇಶಗಳಿಲ್ಲ. 2018 - 19 ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022 ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಕಾರಿಯಾದರು. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ತಿರುಮಲೇಶ್ ವಿ ತಿಳಿಸಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ವೇದಿಕ ಕಾರ್ಯ ನಿರ್ವಹಿಸಿದ್ದಾರೆ. ವೇದಿಕ, ಕೆಂಪಗಿರಿ ಹಾಗೂ ತಿರುಮಲೇಶ್ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಶ್ರೀಧರ್ ಸಂಕಲನ, ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ಜೈಹರಿಪ್ರಸಾದ್ ನೃತ್ಯ ನಿರ್ದೇಶನ ಹಾಗೂ ತರ್ಮಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ BGM ಮತ್...

ಹೇಮಂತ್ ಹೆಗ್ಡೆ ನಿರ್ದೇಶನದ "ನಾ ನಿನ್ನ ಬಿಡಲಾರೆ GHOST -2.0" ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ...

ಹೇಮಂತ್ ಹೆಗ್ಡೆ ನಿರ್ದೇಶನದ "ನಾ ನಿನ್ನ ಬಿಡಲಾರೆ GHOST -2.0" ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ... ಹೇಮಂತ್ ಹೆಗ್ಡೆ ನಿರ್ದೇಶನದ ಬಹು ನಿರೀಕ್ಷಿತ "ನಾ ನಿನ್ನ ಬಿಡಲಾರೆ ಘೋಸ್ಟ್ 2.0" ಹಾರಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತಿಚೆಗಷ್ಟೇ ಸಕಲೇಶಪುರ ದ ಸುತ್ತ ಮುತ್ತ ಮುಕ್ತಾಯಗೊಂಡಿತು. ಸುಮಾರು ಹತ್ತು ದಿನಗಳ ಈ ಶೆಡ್ಯೂಲ್ ನಲ್ಲಿ ಅಪೂರ್ವ ಮತ್ತು ಹೇಮಂತ್ ಬಾಗವಹಿಸಿದ್ದ ಹಲವು ರೋಚಕ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಇದಲ್ಲದೆ ಶಂಕರ್ ಅಶ್ವಥ್ ಹಾಗೂ ಸುಚೇಂದ್ರ ಪ್ರಸಾದ್ ಭಾಗವಹಿಸಿದ ಹಲವು ಸನ್ನಿವೇಶಗಳ ಚಿತ್ರೀಕರಣ ಸಹ ನಡೆಯಿತು..  ಹೇಮಂತ್ ಹೆಗ್ಡೆ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಪೂರ್ವ, ಕಿಶೋರ್, ಶರತ್ ಲೋಹಿತಾಶ್ವ , ಭಾವನ ನಾಜರ್ ಮುಂತಾದ ಕಲಾವಿದರ ದಂಡೇ ಇದೆ ..ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಗ್ರಾಫಿಕ್ಸ್ ಸಿಂಗಾಪುರದ ಸ್ಟುಡಿಯೋ ಒಂದರಲ್ಲಿ ತಯಾರಾಗಲಿದೆ. ಚಿತ್ರದ ಮೂರನೇ ಹಂತದ ಚಿತ್ರೀಕರಣ ಫೆಬ್ರವರಿ ಯಲ್ಲಿ ಶುರುವಾಗಲಿದೆ. ಚಿತ್ರ ಜೂನ್ ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ ..

ಹಲವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ಪ್ರಶಸ್ತಿ ಪ್ರದಾನ ಸಮಾರಂಭ..

ಹಲವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿಷ್ಠಿತ ಪ್ರಚಾರ ಸಂಸ್ಥೆಗೆ ಮುಂದಿನ ವರ್ಷ ಸುವರ್ಣ ಮಹೋತ್ಸವ... ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ10ಕ್ಕೇರಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ MMB legacy ಯಲ್ಲಿ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ನರಸಿಂಹಲು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ಇಂದ್ರಜಿತ್ ಲಂಕೇಶ್, ಪತ್ರಕರ್ತ ಸದಾಶಿವ ಶೆಣೈ, ನಟಿ ರಾಗಿಣಿ ದ್ವಿವೇದಿ ಹಾಗೂ ರಾಜಕೀಯ ಮುಖಂಡರಾದ ಸಂಜಯ್ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಂದಿನ ವರ್ಷ ದಿ.ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಆರಂಭವಾಗಿ 50ವರ್ಷಗಳಾಗಲಿದೆ....