Skip to main content

Posts

Showing posts from June, 2025

ಯುವರಾಜ್ ಕುಮಾರ್ ಚಿತ್ರದ ಹಾಡಿಗೆ 10 ಮಿಲಿಯನ್ ವೀಕ್ಷಣೆ..ರೆಕಾರ್ಡ್ ಬರೆದ ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು..

ರೆಕಾರ್ಡ್ ಬರೆದ ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು.. ಯುವರಾಜ್ ಕುಮಾರ್ ಚಿತ್ರದ ಹಾಡಿಗೆ 10 ಮಿಲಿಯನ್ ವೀಕ್ಷಣೆ.. ಬ್ಯಾಂಗಲ್ ಬಂಗಾರಿ ಹಾಡಿಗೆ 10 ಮಿಲಿಯನ್ ವೀವ್ಸ್... ದಾಖಲೆ ಬರೆದ ಯುವರಾಜ್ ಕುಮಾರ್ ಎಕ್ಕ ಸಿನಿಮಾ ಹಾಡು.. 'ಬ್ಯಾಂಗಲ್ ಬಂಗಾರಿ'ಗೆ ಭರ್ಜರಿ ರೆಸ್ಪಾನ್ಸ್... ಎಕ್ಕ ಸಿನಿಮಾದ ಲವ್ ನಂಬರ್ ಗೆ 10 ಮಿಲಿಯನ್ ವೀವ್ಸ್.. ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ. ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದ...

ಅನಂತ ಕಾಲಂ : ಮೈನಡುಗಿಸುತ್ತಿದೆ ಟೀಸರ್.. ಕಥೆಯನ್ನ ನೀವೊಮ್ಮೆ ಊಹಿಸಬಹುದಾ..?

ಅನಂತ ಕಾಲಂ : ಮೈನಡುಗಿಸುತ್ತಿದೆ ಟೀಸರ್.. ಕಥೆಯನ್ನ ನೀವೊಮ್ಮೆ ಊಹಿಸಬಹುದಾ..? ಟೀಸರ್, ಟ್ರೇಲರ್ ಸಿನಿ ಪ್ರೇಮಿಗಳಿಗೆ ಥಿಯೇಟರ್ ಆಹ್ವಾನ ಕೊಡುವ ಪತ್ರಿಕೆ ಇದ್ದಂತೆ. ಅಲ್ಲಿ ಸಿನಿಮಾ ತಂಡದವರಿಂದ ಮೃಷ್ಟಾನ್ನ ಭೋಜನದ ಸಿಹಿಯ ಸೂಕ್ಷ್ಮತೆ ಸಿಕ್ಕರೆ ಖಂಡಿತ ಥಿಯೇಟರ್ ಗೆ ಜನ ಮಿಸ್ ಮಾಡದೆ ಹೋಗ್ತಾರೆ. ಈ ಮಾತನ್ನ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಅನಂತ ಕಾಲಂ ಟೀಸರ್ ನೋಡಿದ ಕಾರಣಕ್ಕೆ.  ಸಿನಿಮಾ ವಿಚಾರದಲ್ಲಿ ಒಂದಷ್ಟು ಜಾನರ್ ಗಳು ಇದಾವೆ ಅದರಲ್ಲಿ ಒಂದೊಂದು ಜಾನರ್ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಅದರಲ್ಲೂ ಹಾರಾರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಇಷ್ಟ ಪಡುವವರು ಹೆಚ್ಚಾಗಿದ್ದಾರೆ. ಅನಂತ ಕಾಲಂ ಸಿನಿಮಾ ಹಾರಾರ್ ಅಂತ ಹೇಳೋದಕ್ಕೆ ಆಗಲ್ಲ. ಆದ್ರೆ ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಅನ್ನೋದನ್ನ ಊಹೆ ಮಾಡಬಹುದು. ಹಾಗಂತ ಅಂತಿಥ ಸಸ್ಪೆನ್ಸ್, ಥ್ರಿಲ್ಲರ್ ಅಲ್ಲ, ನಿಜಕ್ಕೂ ಥ್ರಿಲ್ಲಿಂಗ್ ಆಗಿನೆ ಇದೆ. ಒಮ್ಮೆ ಈ ಟೀಸರ್ ಅನ್ನ ನೀವೂ ನೋಡಿದ್ರೆ ನಿಮ್ಮ ಎದೆ ನಡುಗದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮನಸ್ಸೊಳಗೆ ಆ ದೃಶ್ಯಗಳೇ ಕೆಲ ಸೆಕೆಂಡ್ ಗಳು ಆವರಿಸಿ ಬಿಡುತ್ತವೆ. ಟೀಸರ್ ಶುರುವಾಗುವುದು ಒಂದು ಸಿಗರೇಟ್ ಮ್ಯಾಟರ್ ನಿಂದ. ಪೊಲೀಸ್ ಬಂದ್ರು ಅಂತ ಎಲ್ಲ ಓಡುವಾಗ, ಅವನೊಬ್ಬ ಮೆಸ್ ಒಳಗಡೆ ನೋಡುತ್ತಾ ಸಿಗರೇಟ್ ಸೇದುತ್ತಾ ಇರುತ್ತಾನೆ. ಆದರೆ ಹಿಂದೆ ಯಾವುದೋ ಫೋಟೋ ಒಂದು ಸುಟ್ಟು ಕರಕಲಾಗುತ್ತಿರುತ್ತದ...

ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ "ತಪಸ್ಸಿ"

ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ "ತಪಸ್ಸಿ" ಮಹಿಳಾ ಪ್ರಧಾನ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನ.. ಬೆಂಗಳೂರು ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ , ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ "ತಪಸ್ಸಿ" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.           "ತಪಸ್ಸಿ" ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ಭಾಸ್ಕರ್, ಅನುಶಾ ಕಿಣಿ, ರಥರ್ವ, ಸಚ್ಚಿನ್, ಗುಬ್ಬಿ ನಟರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರೆ ಛಾಯಾಗ್ರಹಣ ಹಾಗೂ ಕಲಾ ನಿರ್ದೇಶನವನ್ನೂ ಮಾಡಿರುವ ಬಹು ನಿರೀಕ್ಷಿತ "ತಪಸ್ಸಿ" ಚಿತ್ರಕ್ಕೆ ಅರುಣ್ ಪಿ ಥಾಮಸ್ ಸಂಕಲನವಿದೆ. ಆರವ್ ರಾಶಿಕ್ ಅವರ ಹಿನ್ನೆಲೆ ಸಂಗೀತ ನೀಡಿದ್ದಾರೆ.