ಜೋಗಿ ನಿರ್ಮಾಪಕನ ಹೊಸ ಹೆಜ್ಜೆ.. ಸುವರ್ಣ ಸಂಕಲ್ಪ ಅಮೃತಘಳಿಗೆ ನೇತೃತ್ವ ವಹಿಸಿಕೊಂಡ ಜೋಗಿ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್.. ಕಳೆದ ೪೦ ವರ್ಷಗಳಿಂದ ಅಶ್ವಿನಿ ಆಡಿಯೋ ಕಂಪನಿ ನಡೆಸಿಕೊಂಡು ಬರುತ್ತಿರುವ ಅಶ್ವಿನಿ ರಾಮಪ್ರಸಾದ್ ಅವರೀಗ ಕಿರುತೆರೆ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ದಶಕಗಳ ಹಿಂದೆ ಸಾವಿರಾರು ಜಾನಪದ, ಭಕ್ತಿಗೀತೆಗಳನ್ನು ತಮ್ಮ ಆಡಿಯೋ ಕಂಪನಿ ಮೂಲಕ ಜನರಿಗೆ ಕೇಳಿಸಿದ ರಾಮ್ ಪ್ರಸಾದ್ ಅವರಿಗೆ ಮೊದಲಿಂದಲೂ ಕಿರುತೆರೆ ಬಗ್ಗೆ ಆಸಕ್ತಿಯಿತ್ತು. ಆದಕ್ಕೆ ಸುವರ್ಣ ವಾಹಿನಿ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಶಿವಣ್ಣ, ಪ್ರೇಮ್ ಕಾಂಬಿನೇಶನ್ ನ ಜೋಗಿ ಚಿತ್ರ ನಿರ್ಮಿಸುವ ಮೂಲಕ ದಾಖಲೆ ಬರೆದ ಅಶ್ವಿನಿ ರಾಮ್ ಪ್ರಸಾದ್ ಆನಂತರವೂ ಹಲವಾರು ಯಶಸ್ವೀ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಘಾರ್ಗ ಚಿತ್ರದ ಮೂಲಕ ತಮ್ಮ ಪುತ್ರನನ್ನೂ ಹೀರೋ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಧಾರ್ಮಿಕ ಹಾಗೂ ವಾಸ್ತುಶಾಸ್ತ್ರದ ಹಿನ್ನೆಲೆಯ "ಸುವರ್ಣ ಸಂಕಲ್ಪ ಅಮೃತಘಳಿಗೆ" ಕಾರ್ಯಕ್ರಮ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಯೋತಿಷ್ಯರತ್ನ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಭಾಗವತ ಗುರೂಜಿಯವರು ನಡೆಸಿಕೊಡಲಿದ್ದಾರೆ. ಗಾಯಕಿಯೂ ಆದ ಅಖಿಲಾ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 4 ರಿಂದ ಪ್ರ...