ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ರೂಬಿ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಅನಾವರಣ...
ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ರೂಬಿ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಅನಾವರಣ... ಇದು ರಘು ಕೋವಿ ಚೊಚ್ಚಲ ಪ್ರಯತ್ನ .. ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ರಘು ಕೋವಿ ಅವರು 'ರೂಬಿ' ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಚೊಚ್ಚಲ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಬರಹಗಾರ ಹಾಗೂ ನಿರ್ದೇಶಕ ಚಂದ್ರಚೂಡ್ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು. ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಬಳಿಕ ಬರಹಗಾರ ಹಾಗೂ ನಿರ್ದೇಶಕ ಚಂದ್ರಚೂಡ್ ಮಾತನಾಡಿ, ರೂಬಿ ಕಥೆ ಹಾಗೂ ಚಿತ್ರತಂಡ ಚೆನ್ನಾಗಿದೆ. ಒಳ್ಳೊಳ್ಳೆ ಸಿನಿಮಾ ಬರಬೇಕು. ಈ ಹಿಂದೆ ಹಾಡು ಕೇಳಿಸಿದ. ಆ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತದೆ. ಲಿರಿಕ್ಸ್ ಹಾಗೂ ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ನಟ ರಾಮ್ ಗೌಡ ಮಾತನಾಡಿ, ರಘು ಅವರು ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು. ನನ್ನ ಪಾತ್ರ ಹಾಗೂ ಇಡೀ ತಂಡ ಚೆನ್ನಾಗಿದೆ. ಆರ್ ಪಿ ಸರ್ ಮ್ಯೂಸಿಕ್ ಮಾಡ್ತಾ ಇರುವುದು ನನಗೆ ಖುಷಿಯಾಯ್ತು. ನಿರ್ಮಾಪಕರು ತುಂಬಾ ಫ್ಯಾಷನೇಟ್ ಆಗಿದ್ದಾರೆ. ಚಿತ್ರಕ್ಕೆ ಏನೂ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ ಎಂದರು. ನಿರ್ದೇಶಕ ರಘು ಕೋವಿ ಮಾತನಾಡಿ, ನನ್ನ ಕನಸಿಗೆ...