📰 ಇತ್ತೀಚಿನ ಸುದ್ದಿ
SWARUPASANDARSHAN NEWS

ರಂಗ ಜಂಗಮ ಬಿ. ವಿ. ಕಾರಂತ ಅವರ ಸ್ಮರಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಯೋಜಿಸುವ "ಕಾರಂತ ಮಾಸ"ದ ಕಾರ್ಯಕ್ರಮಗಳ ಭವ್ಯ ಉದ್ಘಾಟನೆ ಭಾನುವಾರ 30 ಆಗಸ್ಟ್ 2026ರಂದು ಜರುಗಿತು.

ರಂಗ ಜಂಗಮ ಬಿ. ವಿ. ಕಾರಂತ ಅವರ ಸ್ಮರಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಯೋಜಿಸುವ "ಕಾರಂತ ಮಾಸ"ದ ಕಾರ್ಯಕ್ರಮಗಳ ಭವ್ಯ ಉದ್ಘಾಟನೆ ಭಾನುವಾರ 30 ಆಗಸ್ಟ್ 2026ರಂದು ಜರುಗಿತು.
ಭಾರತೀಯ ರಂಗಭೂಮಿಗೆ ಅನನ್ಯ ಕೊಡುಗೆಯನ್ನಿತ್ತ ಬಿ.ವಿ.ಕಾರಂತ ಅವರ ರಂಗ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ದಿಸೆಯಲ್ಲಿ ತೊಡಗಿಸಿಕೊಂಡಿರುವ 'ಬೆನಕ' ರಂಗ ತಂಡದೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಟೆಕ್ ಸಂಸ್ಥೆ 'ಟೆಕಿಯಾನ್' ಕೈಜೋಡಿಸಿದೆ. ಕರ್ನಾಟಕದ ಶ್ರೀಮಂತ ರಂಗ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಬೆನಕ ರಂಗ ತಂಡ ಮತ್ತು ಟೆಕ್ಕಿಯಾನ್ ಸಂಸ್ಥೆಯ ನಡುವಿನ ಪಾಲುದಾರಿಕೆಯಲ್ಲಿ "ಕಾರಂತ ಮಾಸ" ರಂಗೋತ್ಸವವನ್ನು ಆಯೋಜಿಸಲಾಗುತ್ತಿದೆ. 
ಈ ಸಂದರ್ಭದಲ್ಲಿ ಬೆನಕ ತಂಡವು ತನ್ನ ಕಲಾವಿದರು ಮತ್ತು ಸ್ನೇಹಿತರೊಂದಿಗೆ ಟೌನ್ ಹಾಲ್ ನಿಂದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದವರೆಗೆ 'ರಂಗಯಾತ್ರೆ'ಯನ್ನು ಹಮ್ಮಿಕೊಂಡಿತ್ತು. ಕಾರಂತರು ನಿರ್ದೇಶಿಸಿದ ನಾಟಕಗಳ ವಿವಿಧ ಪಾತ್ರಗಳ ವೇಷ ತೊಟ್ಟ ಕಲಾವಿದರ 'ರಂಗ ಯಾತ್ರೆ'ಯನ್ನು ಚಂಡೆ ವಾದ್ಯ ಮತ್ತು ಡೊಳ್ಳು ಕುಣಿತದೊಡನೆ ನಡೆಸಿ ಕಾರಂತ ಮಾಸದ ಧ್ವಜಗಳ ಭವ್ಯ ಅನಾವರಣ ಜರುಗಿತು. ಜೊತೆಗೆ "ಕಾರಂತ ರಂಗ ಸಂಗೀತ ಸ್ಪರ್ಧೆ"ಯ ಘೋಷಣೆಯೂ ನಡೆಯಿತು.
ಸಮಾರಂಭದಲ್ಲಿ ಬೆನಕ ಸಂಸ್ಥೆಯ ಅಧ್ಯಕ್ಷರಾದ ಡಾ. ಟಿ. ಎಸ್. ನಾಗಾಭರಣ, ಹಿರಿಯ ಕಲಾವಿದರಾದ ಸುಂದರ್ ರಾಜ್ ಅವರು ಮತ್ತು ಟೆಕಿಯಾನ್ ಸಂಸ್ಥೆಯ ಹಿರಿಯ ಅಧಿಕಾರಿ ಅವರು ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನ 'ಕಾರಂತ ಮಾಸ' ಆಚರಣೆಯಲ್ಲಿ ಹಮ್ಮಿಕೊಳ್ಳುವ ನಾಟಕ ಪ್ರದರ್ಶನಗಳು, ರಂಗ ಕಾರ್ಯಗಾರಗಳು, ಸಂಗೀತ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳ ವಿವರವನ್ನು ನೀಡಲಾಯಿತು.