ಸ್ಟಾರ್ಟಪ್ ಉದ್ಯಮಿ ಅನಿಲ್ ಶೆಟ್ಟಿ ಅವರ ಮೊದಲ ಚಿತ್ರ ಲಂಬೋದರ 2.0.. “ಟೈಟಲ್ ಬಿಡುಗಡೆ...
ಗಣೇಶ ಚತುರ್ಥಿಯ ದಿನದಂದು ವಿಭಿನ್ನ ವಿಡಿಯೋ ಟೀಸರ್ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೈಟಲ್ ಹಂಚಿಕೊಂಡ ಅನಿಲ್ ಶೆಟ್ಟಿ.
ಗಣೇಶನ ಹೆಸರಿನಲ್ಲಿ ಸಿನೆಮಾಗಳು ಬರದೆ ಕೆಲವು ವರ್ಷ ಆಯಿತು ನೀವು ಮತ್ತೆ ಯಾವಾಗ ಬರುತ್ತೀಯ ಎನ್ನುವ ಭಕ್ತರ ಪ್ರಶ್ನೆಗೆ ಉತ್ತರಿಸುವ ಗಣೇಶ “ ನಾನು ಹೈ ಟೆಕ್ ಆಗಿ ಅಪ್ಡೇಟ್ ಆಗಿದ್ದೀನಿ. ನಿಮ್ಮ ಬಳಿ ಒಬ್ಬನ್ನು ಕಳುಹಿಸುತ್ತಿದ್ದೇನೆ ಆದರೆ ನಿಮ್ಮ ಮೊಬೈಲ್ ಪಾಸ್ವರ್ಡ್ ಗೆ ನೀವೇ ಜವಾಬ್ದಾರರು “ ಎಂದು ಭಕ್ತರನ್ನು ಎಚ್ಚರಿಸುವ ಟೈಟಲ್ ಟೀಸರ್ ಇದೀಗ ವೈರಲ್ ಆಗಿದೆ.
ಅನಿಲ್ ಶೆಟ್ಟಿ ಅವರ ಹೋಂ ಬ್ಯಾನರ್ ಮಾಸ್ ಪ್ರೊಡಕ್ಷನ್ ಕಂಪನಿ ನಿರ್ಮಾಣ ಮಾಡುತ್ತಿರುವ ಸಿನಿಮಾ “ ಲಂಬೋಧರ 2.0 “ ದಲ್ಲಿ ಅನಿಲ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಒಂದು ಒಳ್ಳೆ ಸಿನಿಮಾ ಮಾಡಲು ಸೃಜನಶೀಲ ತಾಂತ್ರಿಕ ತಂಡವನ್ನು ಕಟ್ಟುತ್ತಿದ್ದಾರೆ. “ ಬ್ಯಾಚುಲರ್ ಪಾರ್ಟಿ “ ಚಿತ್ರ ನಿರ್ದೇಶಕ ಅಭಿಜಿತ್ ಮಹೇಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು ಸದ್ಯದಲ್ಲೇ ಇಡಿ ಚಿತ್ರ ತಂಡ ಘೋಷಣೆಯಾಗಲಿದೆ.
ಲಂಬೋಧರ 2.0, ಹ್ಯಾಪಿನೆಸ್ ಲೋಡಿಂಗ್ …
Comments
Post a Comment