ಅನುಷ್ಕಾ ಶೆಟ್ಟಿ ಅಭಿನಯದ "ಘಾಟಿ" ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ "ಕೊತ್ತಲವಾಡಿ" ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್..
ಅನುಷ್ಕಾ ಶೆಟ್ಟಿ ಅಭಿನಯದ "ಘಾಟಿ" ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ "ಕೊತ್ತಲವಾಡಿ" ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್..
ಇತ್ತೀಚೆಗೆ ತೆರೆಕಂಡ "ಕೊತ್ತಲವಾಡಿ" ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, ಈಗ ವಿತರಣಾ ವಲಯಕ್ಕೆ ಅಡಿಯಿಟ್ಟಿದ್ದಾರೆ. PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ "ಘಾಟಿ" ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
"ಫಾಟಿ" ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕೂಡ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ಚಿತ್ರ ನಿರ್ಮಾಣಕ್ಕೆ ಬಂದಾಗ ತಾವು ತೋರಿದ ಪ್ರೀತಿಗೆ ಅನಂತ ಧನ್ಯವಾದ. ಈಗ ವಿತರಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.
Comments
Post a Comment