ಕಾಂತಾರ 1 ಜೊತೆಗೆ ನಿಮ್ಮ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್.. ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ಕುಮಾರ್.. ಕುತೂಹಲ ಹೆಚ್ಚಿಸಿದ ಕೋಣ ಚಿತ್ರದ ಟ್ರೇಲರ್.. ಕೋಮಲ್ ಹೊಸ ಅವತಾರ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರೋದಿಕ್ಕೆ ಮೂರೇ ದಿನ ಬಾಕಿ. ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಅದೇನಪ್ಪ ಅಂತೀರಾ..? ಕಾಂತಾರ 1 ಸಿನಿಮಾ ಬಿಡುಗಡೆಯಾಗುವ ಥಿಯೇಟರ್ ನಲ್ಲಿ ಕೋಣ ಚಿತ್ರದ ಟ್ರೇಲರ್ ಬಿಡುಗಡೆ.. ಸಹಜಾಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ ಇದೀಗ ಕೋಣ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ. ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್...