Skip to main content

ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ ‘ಶ್ರೀ ಗಂಧದ ಗುಡಿ’

ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ 
‘ಶ್ರೀ ಗಂಧದ ಗುಡಿ’
ಮನೆಗೆ ಬಂದ ಸೊಸೆ ಮನಸ್ಥಿತಿ-ಮನೆಸ್ಥಿತಿ ಬದಲಾಯಿಸ್ತಾಳಾ?
ಕರ್ನಾಟಕದಲ್ಲಿ ಸೌಂದರ್ಯವಿದೆ, ಸೌಕರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔದಾರ್ಯವಿದೆ. 
ಕರುನಾಡು ಎಲ್ಲರನ್ನ ಪ್ರೀತಿಯಿಂದ ಸ್ವೀಕಾರ ಮಾಡುತ್ತೆ. ಕರುನಾಡ ತಾಯಿ ಎಲ್ಲರನ್ನ ತನ್ನ ಮಕ್ಕಳಂತೆ ನೋಡ್ತಾಳೆ, ಕಾಪಾಡ್ತಾಳೆ. ಕರುಳ ಕುಡಿಗಳ ಸುಖಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳೋ ಮಿಡಿವ ತಾಯಿ ಅವಳು. 
ಅವಳು ಪ್ರೀತಿಯ ಕುಡಿ, ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ. 
——
‘ಶ್ರೀ ಗಂಧದ ಗುಡಿ’ ನಮ್ಮ ಕನ್ನಡ ಮಣ್ಣಿನ ಸುಗಂಧ ಹೊಂದಿದ ಅಂದದ ಚೆಂದದ ಪದ. ಅಪ್ಪಟ ಕನ್ನಡತನವನ್ನ ಹೊರ ಹೊಮ್ಮಿಸೋ ಪದ. ಇಂತಹ
ಅಪ್ಪಟ ಕನ್ನಡತನದಿಂದ ಮನೆ ಮಾತಾಗಿರೋದು ಕಲರ್ಸ್ ಕನ್ನಡ ಚಾನೆಲ್. ಮನ ಮುಟ್ಟೋ ಕತೆಗಳನ್ನ ಕನ್ನಡಿಗರ ಮನೆ ಮನಗಳಿಗೆ ಮುಟ್ಟಿಸ್ತೀರೋ ಕಲರ್ಸ್ ಕನ್ನಡ ಚಾನೆಲ್ ಇದೀಗ ‘ಶ್ರೀ ಗಂಧದ ಗುಡಿ, ಪ್ರೀತಿಯ ಕುಡಿ’ ಅನ್ನೋ ವಿನೂತನ ಧಾರಾವಾಹಿಯನ್ನ ಪ್ರೇಕ್ಷಕರಿಗೆ ತಲುಪಿಸ್ತಿದೆ. ‘ಶ್ರೀಗಂಧದ ಗುಡಿ’ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ 
ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?” ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ.
ಅಪರೂಪದ ಕತೆ:
ನಟ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರೋ ಅಪ್ಪ ನಟರಾಜ ತನ್ನ ಮಕ್ಕಳಿಗೆ ಮುತ್ತುರಾಜ, ಸತ್ಯ ಹರಿಶ್ಚಂದ್ರ, ಕಂಠೀರವ, ಮಯೂರ ಎಂದು ಹೆಸರಿಟ್ಟಿದ್ದಾನೆ.
ಈ ನಾಲ್ಕು ಗಂಡು ಮಕ್ಕಳೋ ನಾಲ್ಕು ದಿಕ್ಕುಗಳು. ಒಬ್ಬೊಬ್ರದ್ದು ಒಂದೊಂದು ಹಾದಿ.
ತಂದೆ ನಟರಾಜ ಕುಡುಕ, ಗೊತ್ತು ಗುರಿಯಿಲ್ಲದ ಬೇಜವಾಬ್ದಾರಿಯ ಮನುಷ್ಯ. ಅವನು ಸಂಪಾದಿಸಿರೋದು ಕೆಟ್ಟ ಹೆಸರು ಮಾತ್ರ. ಅವನಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು. ಇಂಥ ಮನೆಗೆ ಯಾವ ಹೆಣ್ಣೂ ಬರೋಕೆ ಸಾಧ್ಯವಿಲ್ಲ, ಬಂದರೂ ಬದುಕೋಕೆ ಅಸಾಧ್ಯ ಅಂತ ಊರಿನ ಜನ ಮಾತಾಡ್ಕೋತಾರೆ. 
ಈ ಮನೆಗೆ ಹುಡುಗಿಯೊಬ್ಬಳು ಬರ್ತಾಳೆ. ಅವಳು ಯಾಕೆ ಬರ್ತಾಳೆ?ಯಾವ ಕಾರಣಕ್ಕೆ? ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳೀತಾಳೆ? ಉಳಿದ ಮೇಲೆ ಯಾವ ಕಾರಣಕ್ಕಾಗಿ ಆ ಮನೆಯನ್ನ ಸರಿ ಮಾಡ್ತಾಳೆ? ಹೇಗೆ ಸರಿ ಮಾಡ್ತಾಳೆ?
ಅನ್ನೋ ಕತೆಯನ್ನ ಇದು ಹೇಳುತ್ತೆ. 
  ಒಂದು ಹೆಣ್ಣು ಮನೆಗೆ ಬಂದಾಗ ಅಲ್ಲಿ ಆ ಮನೆಗೆ ತಾಯಿ, ತಂಗಿ, ಅಕ್ಕ, ಅತ್ತಿಗೆ, ಸೊಸೆ, ಮಡದಿಯೊಬ್ಬಳು ಸಿಗ್ತಾಳೆ. ಅವಳು ಇಡೀ ಮನೆಯನ್ನ ಮಮತೆಯ ಮಡಿಲಿನಲ್ಲಿ ತೂಗಿಸಿಕೊಂಡು ಹೋಗ್ತಾಳೆ; ನಮ್ಮ ಕನ್ನಡ ತಾಯಿ ತನ್ನ ಮಕ್ಕಳನ್ನು ಸಲಹೋ ಹಾಗೆ. 
‘ಶ್ರೀಗಂಧದ ಗುಡಿ’ ಗೆ ಬರುವ ‘ಪ್ರೀತಿಯ ಕುಡಿ’ -ಮಮತೆ, ಕರುಣೆಯ ಪ್ರತಿಬಿಂಬವಾಗಿ ಹೇಗೆಲ್ಲಾ ತನ್ನ ಮನೆಯ ಮಕ್ಕಳನ್ನು ಕಾಪಾಡ್ತಾಳೆ ಅನ್ನೋದನ್ನ ನೋಡಿ, ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8 ಕ್ಕೆ ಕಲರ್ಸ್ ಕನ್ನಡದಲ್ಲಿ. 
‘ಕಥಾ ಕ್ರಿಯೇಷನ್ಸ್ ‘ ಬ್ಯಾನರ್ ನಲ್ಲಿ ಪರೀಕ್ಷಿತ್ ಎಂ ಎಸ್ - ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು-
ಪ್ರಕಾಶ್ ಮುಚ್ಚಳಗುಡ್ಡ. 
ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.