ಜನವರಿ 2 ರಂದು ರೂಪ ಅಯ್ಯರ್ ನಿರ್ದೇಶನದ 'ಆಜಾದ್ ಭಾರತ್' ಚಿತ್ರ ದೇಶದಾದ್ಯಂತ ಬಿಡುಗಡೆ... ಇದು ಕನ್ನಡಗರಿಂದ ನಿರ್ಮಾಣವಾಗಿರುವ ದೇಶಪ್ರೇಮ ಸಾರುವ ಹಿಂದಿ ಚಿತ್ರ.. ನಟಿಯಾಗಿ, ನಿರ್ದೇಶಕಿಯಾಗಿ ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರೂಪ ಅಯ್ಯರ್ ನಿರ್ದೇಶನದ "ಆಜಾದ್ ಭಾರತ್" ಹಿಂದಿ ಚಿತ್ರ ಜನವರಿ 2 ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. 'ನೀರಾ ಆರ್ಯ' ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆಯನ್ನು "ಆಜಾದ್ ಭಾರತ್" ಎಂದು ಬದಲಿಸಲಾಗಿದೆ. ಈ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದೆ. ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ 'ಆಜಾದ್ ಭಾರತ್' ಚಿತ್ರದಲ್ಲಿದೆ. ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಮೂರು ಮಹಿಳಾ ಮುಖ್ಯ ಪಾತ್ರಗಳಿದ್ದು, ನಾನು ನೀರಾ ಆರ್ಯ ಪಾತ್ರದಲ್ಲಿ, ಹಿತ ಚಂದ್ರಶೇಖರ್ ದುರ್ಗಾ ಪಾತ್ರದಲ್ಲಿ ನಟಿಸಿದ್ದೇವೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯ...