Skip to main content

ಮೂಷಿಕವಾಹನನ ಸನ್ನಿಧಿಯಲ್ಲಿ ಆರಂಭವಾಯಿತು "ಮುಜುಗರ"...

ಮೂಷಿಕವಾಹನನ ಸನ್ನಿಧಿಯಲ್ಲಿ ಆರಂಭವಾಯಿತು "ಮುಜುಗರ"...
ಈ ಚಿತ್ರದ ಮೂಲಕ ಕಲಾತಪಸ್ವಿ ರಾಜೇಶ್ ಅವರ ಮೊಮ್ಮಗ ಸಾಯಿನಂದ್ ನಾಯಕನಾಗಿ ಪದಾರ್ಪಣೆ...
 ‌ತಮ್ಮ ಜನಪ್ರಿಯ ನಟನೆಯ ಮೂಲಕ ಕನ್ನಡಿಗರ ಜನಮನಸೂರೆಗೊಂಡಿದ್ದ ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರ ಮೊಮ್ಮಗ ಸಾಯಿನಂದ್ "ಮುಜುಗರ" ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಅಡಿಯಿಟ್ಟಿದ್ದಾರೆ. ಶಾಂತ ಶ್ರೀನಿವಾಸ್ ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆಟ್ಟಕಲ್ಲಪ್ಪ ಸರ್ಕಲ್ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಟ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೂ, ಚಿತ್ರರಂಗಕ್ಕೂ 20 ವರ್ಷಗಳ ನಂಟು. ನಾಗಾಭರಣ, ಅನಂತರಾಜು, ಅಮರ್ ಹಾಗೂ "ಕಂಠಿ" ಭರತ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. "ಮುಜುಗರ" ಕಾಫಿತೋಟದ ಸುತ್ತ ನಡೆಯುವ ಪ್ರೇಮ ಕಥೆ. ರಾಜೇಶ್ ಅವರ ಮೊಮ್ಮಗ ಸಾಯಿನಂದ್ ನಾಯಕನಾಗಿ, ನಿಮಿಷ್ಕ ಹಾಗೂ ತನು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಎರಡನೇ ನಾಯಕನಾಗಿ ಸುಭಾಷ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 15 ರಿಂದ ಸಕಲೇಶಪುರ, ಚಿಕ್ಕಮಗಳೂರು, ಹೊರನಾಡು, ಕಳಸ, ಮಡಿಕೇರಿ ಮುಂತಾದ ಕಡೆಯ ಚಿತ್ರೀಕರಣ ನಡೆಯಲಿದೆ. ಜೈ ಆನಂದ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ತರುಣ್ ಎನ್ (ಜ್ಯೋತಿಪ್ರಿಯ) ತಿಳಿಸಿದರು.
ನಮ್ಮ ಸಂಸ್ಥೆಯಿಂದ "ಎಲ್ಲಿ ಆಡೋದು ನಾವು ಎಲ್ಲಿ ಆಡೋದು" ಎಂಬ ಮಕ್ಕಳ ಚಿತ್ರ ನಿರ್ಮಾಣ ಮಾಡಿದ್ದೆವು. ಆ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದೆ. ಇದು ಎರಡನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ‌ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಶ್ರೀನಿವಾಸ್.  
ನಾನು ನಟನಾಗಲು ನನ್ನ ತಾತ ರಾಜೇಶ್ ಅವರೆ ಸ್ಪೂರ್ತಿ. ಇಂದು ಅವರಿದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ಅಭಿನಯದ ಕೋರ್ಸ್ ಕಲಿತಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ.ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನಾಯಕ ಸಾಯಿನಂದ್ ಧನ್ಯವಾದ ಹೇಳಿದರು. 
ನಾನು ಚಿತ್ರದಲ್ಲಿ ನಾನು ಎರಡನೇ ನಾಯಕ ಎಂದರು ಸುಭಾಷ್. ನಾಯಕಿಯರಾದ ನಿಮಿಷ್ಕ, ತನು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ಐದು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ತಿಳಿಸಿದರು. ಛಾಯಾಗ್ರಹಣದ ಕುರಿತು ಜೈ ಆನಂದ್ ಮಾತನಾಡಿದರು‌.

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.