Skip to main content

Posts

Showing posts from February, 2026

ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ.. ಇದು 12 ಇಂಡಸ್ಟ್ರಿ ಒಟ್ಟುಗೂಡಿಸುವ ಪ್ಯಾನ್ ಇಂಡಿಯಾ ವೇದಿಕೆ..

ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ..  ಇದು 12 ಇಂಡಸ್ಟ್ರಿ ಒಟ್ಟುಗೂಡಿಸುವ ಪ್ಯಾನ್ ಇಂಡಿಯಾ ವೇದಿಕೆ.. 12 ಚಲನಚಿತ್ರೋದ್ಯಮಗಳನ್ನು ಒಂದುಗೂಡಿಸುವ ಪ್ಯಾನ್-ಇಂಡಿಯಾ ವೇದಿಕೆ...  ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಘೋಷಣೆ.. ಇಡೀ ಚಿತ್ರೋದ್ಯಮನ್ನು ಒಂದುಗೂಡಿಸುವ ಪ್ಯಾನ್ ಇಂಡಿಯಾ ವೇದಿಕೆಯೊಂದನ್ನು ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಸೃಷ್ಟಿಸಿದೆ. ಇದರಲ್ಲಿ 12 ಚಿತ್ರೋದ್ಯಮಗಳು ಭಾಗಿಯಾಗುತ್ತಿವೆ.  12 ಇಂಡಸ್ಟ್ರಿ ಯಾವುವು? 1.ಹಿಂದಿ 2.ತಮಿಳು 3.ತೆಲುಗು 4.ಮಲಯಾಳಂ 5.ಕನ್ನಡ 6.ಬಂಗಾಳಿ 7.ಮರಾಠಿ 8.ಗುಜರಾತಿ 9.ಪಂಜಾಬಿ 10.ಭೋಜ್‌ಪುರಿ,  11.ಅಸ್ಸಾಮಿ  12.ಒಡಿಯಾ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ- INCA ತನ್ನ ಚೊಚ್ಚಲ ಪ್ರಶಸ್ತಿ ದಿನಾಂಕ ಪ್ರಕಟಿಸಿದೆ. ಏಪ್ರಿಲ್ 15 ಮತ್ತು 16 ರಂದು ಮುಂಬೈನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಇದು ಭಾರತೀಯ ಸಿನಿಮಾಕ್ಕೆ ಐತಿಹಾಸಿಕ ಮತ್ತು ಪರಿವರ್ತನಾ ಕ್ಷಣವಾಗಿದೆ. INCA ಅನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಮತ್ತು SIIMA ಸಂಸ್ಥಾಪಕರಾದ ವಿಷ್ಣು ವರ್ಧನ್ ಇಂದೂರಿ ನೇತೃತ್ವದಲ್ಲಿ‌ ನಡೆಯಲಿದೆ. ಕಲ್ಯಾಣ್ ಜ್ಯುವೆಲ್ಲರ್ಸ್  ಮೊದಲ INCA ಪ್ರಶಸ್ತಿಗಳ ಪ್ರಸ್ತುತ ಪ್ರಾಯೋಜಕರಾಗಿ ಸಾಥ್ ಕೊಡುತ್ತಿದ್ದಾರೆ.‌ ಪ್ರಶಸ್ತಿ ಪ್ರವೇಶಕ್ಕಾಗಿ ಕರೆ ಮಾಡಿ.. 2025 ರ ಕ್ಯಾಲೆಂಡರ್ ವರ್ಷದಲ್ಲಿ ...

ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಸಿಯೋನ್ ಟೈಟಲ್ ಫಿಕ್ಸ್..

ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಸಿಯೋನ್ ಟೈಟಲ್ ಫಿಕ್ಸ್.. ಕಮಲ್ ಹಾಸನ್ ನಿರ್ಮಾಣದಲ್ಲಿ ಶಿವಕಾರ್ತಿಕೇಯನ್ ಹೊಸ ಸಿನಿಮಾದ ಟೈಟಲ್ ರಿವೀಲ್... ಸಿಯೋನ್ ಆಗಿ ಬಂದ ಅಮರನ್ ಹೀರೋ.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಾಗೂ ಶಿವಕಾರ್ತಿಯೇನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಹಿಂದೆ ಕಮಲ್ ನಿರ್ಮಿಸಿದ್ದ ಅಮರನ್ ಸೂಪರ್ ಹಿಟ್ ಕಂಡಿತ್ತು. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದರು. ಇದೀಗ ಈ ಜೋಡಿ ಸಿಯೋನ್ ಎಂಬ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ರಾಜ್ ಕಮಲ್ ಇಂಟರ್ನ್ಯಾಷನಲ್   ಹಾಗೂ ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿಯೋನ್ ಸಿನಿಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ. ಥಾಯ್ ಕಿಝವಿ ಸಿನಿಮಾ ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ ಸಿಯೋನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಸಂತೋಷ್ ನಾರಾಯಣ್ ಸಂಗೀತ, ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆ ಮಾಡಲು ಸಿನಿಮಾ ಟೀಂ ಯೋಜನೆ ಹಾಕಿಕೊಂಡಿದೆ.

ದಿ ರೈಸ್ ಆಫ್ ಅಶೋಕ ಟ್ರೇಲರ್ ಅನಾವರಣ...ಸತೀಶ್ ನೀನಾಸಂ ಸಿನಿಮಾಗೆ ಚಂದನವನದ ತಾರೆಯರು ಸಾಥ್..

ದಿ ರೈಸ್ ಆಫ್ ಅಶೋಕ ಟ್ರೇಲರ್ ಅನಾವರಣ... ಸತೀಶ್ ನೀನಾಸಂ ಸಿನಿಮಾಗೆ ಚಂದನವನದ ತಾರೆಯರು ಸಾಥ್.. ದಿ ರೈಸ್ ಆಫ್ ಅಶೋಕ ಟ್ರೇಲರ್ ಬಿಡುಗಡೆ... ಸತೀಶ್ ನೀನಾಸಂ ಚಿತ್ರಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಬೆಂಬಲ.. ಟ್ರೇಲರ್ ನಲ್ಲಿ ಕಿಚ್ಚು ಹಚ್ಚಿದ ಅಶೋಕ.. ಇದೇ ತಿಂಗಳ 27ಕ್ಕೆ ಸತೀಶ್ ನೀನಾಸಂ ಸಿನಿಮಾ ರಿಲೀಸ್.. ಸತೀಶ್ ನೀನಾಸಂ ಅಭಿನಯ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 27ರಂದು ಬಹು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಿ ರೈಸ್ ಆಫ್ ಅಶೋಕ ಟ್ರೇಲರ್ ಲಾಂಚ್ ಈವೆಂಟ್​​ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಾಥ್ ಕೊಟ್ಟರು. ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್ ಮತ್ತು ಶಿವರಾಜ್ ಕೆ ಆರ್ ಪೇಟೆ ಮೊದಲಾದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಸತೀಶ್ ಚಿತ್ರದ ಟ್ರೇಲರ್, ಹಾಡು ಯಾವುದು ಕಾಣಿಸಲಿಲ್ಲ. ನಿನ್ನ ಕಣ್ಣಲ್ಲಿ ನೀರು ಕಾಣಿಸಿತು. ಅದು ಹೊರಗಡೆ ಬರಲಿಲ್ಲ. ನೀನು ಅಲ್ಲೇ ಅರ್ಧ ಗೆದ್ದಾಯ್ತು. ಗಂಡ್ಸು ಕಣ್ಣೀರು ಹಾಕಬಾರದು...

ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್, ಮಾರ್ಚ್ ತಿಂಗಳಲ್ಲಿ ತೆರೆಗೆ..

ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್, ಮಾರ್ಚ್ ತಿಂಗಳಲ್ಲಿ ತೆರೆಗೆ..   ಮೆಜೆಸ್ಟಿಕ್, 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಂಡ ಚಿತ್ರ. ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ನಿರ್ಮಾಣವಾಗಿದ್ದು, ಆ ಚಿತ್ರದಲ್ಲೂ ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ವ್ಯವಹಾರಗಳು, ದಂದೆಗಳು ನಡೆಯುತ್ತವೆ ಎಂಬುದನ್ನು ರಿಯಲ್ಲಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರಕ್ಕೆ ಮೆಜೆಸ್ಟಿಕ್- -2 ಎಂಬ ಟೈಟಲ್ ಇಡಲಾಗಿದ್ದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಬುಧವಾರ ನೆರವೇರಿದೆ.   ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಆ ಚಿತ್ರದಲ್ಲಿ ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಕದೆ ಮತ್ತೊಬ್ಬ ನಟಿ ಮಾಲಾಶ್ರೀ ಅವರು ಕೂಡ ಚಿತ್ರದಲ್ಲಿದ್ದಾರೆ. ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ಕಾಣಿಸಿಕೊಂಡಿದ್ದಾರೆ, ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ವ್ಯವಹಾರಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶರು ಚಿತ್ರದಲ್ಲಿ ಹೇಳಿದ್...

ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ ರಾಕ್ಷಸ ಪ್ರೀಮಿಯರ್ ಶೋ..

ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ ರಾಕ್ಷಸ ಪ್ರೀಮಿಯರ್ ಶೋ..  ಕ್ರೈಮ್ ಸೈಕಲಾಜಿಕಲ್ ಸರಣಿ ಯಾವಾಗ, ಎಲ್ಲಿ ಸ್ಟ್ರೀಮಿಂಗ್?.. ನಾಳೆಯಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಸ್ಟ್ರೀಮಿಂಗ್... ಪ್ರತಿಷ್ಟಿತ ಒಟಿಟಿಗಳಲ್ಲಿ ಒಂದಾದ zee5 ಕನ್ನಡದಲ್ಲಿ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ.‌ ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಇದೀಗ ಇದೇ ತಿಂಗಳ 20ರಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಪ್ರಸಾರವಾಗಲಿದೆ. ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ ಇದಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ರಾಕ್ಷಸ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ  Zee5 ಬ್ಯುಸಿನೆಸ್ ಹೆಡ್ ದೀಪಕ್ ತಿಮ್ಮಯ್ಯ ಮಾತನಾಡಿ, zee5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ‌ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಷ್ಟು ಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿ...

"ಪಬ್ಬಾರ್"ಗೋಸ್ಕರ ಲುಕ್ ಚೇಂಜ್.. ಹಳೇ ಅಯ್ಯಪ್ಪ ಈಗ ಸ್ಪೆಷಲ್..

"ಪಬ್ಬಾರ್"ಗೋಸ್ಕರ ಲುಕ್ ಚೇಂಜ್..  ಹಳೇ ಅಯ್ಯಪ್ಪ ಈಗ ಸ್ಪೆಷಲ್.. ಪಬ್ಬಾರ್ ಸಿನಿಮಾಗೆ ಗೆಟಪ್ ಬದಲಿಸಿದ ಅಯ್ಯಪ್ಪ.. ಹೊಸ ಗೆಟಪ್ನಲ್ಲಿ ಮಿಂಚ್ತಿದ್ದಾರೆ ಸ್ಪೆಷಲ್.. 'ಪಬ್ಬಾರ್'ಗಾಗಿ 14 ವರ್ಷದ ಬಳಿಕ ಕ್ಲೀನ್ ಶೇವ್... ಖದರ್ ಲುಕ್ ನಲ್ಲಿ ಅಯ್ಯಪ್ಪ ಶರ್ಮ.. 14ವರ್ಷಗಳ ಬಳಿಕ ಪೋಲೀಸ್ ಪಾತ್ರದಲ್ಲಿ ಅಯ್ಯಪ್ಪ..ಪಬ್ಬಾರ್ ಗಾಗಿ ಗೆಟಪ್ ಚೇಂಜ್.. 'ಪಬ್ಬಾರ್'ಗಾಗಿ ಹೊಸ ಲುಕ್.. ಸ್ಮಾರ್ಟ್ SP ಆಗಿ ಕಾಣಿಸ್ತಾರೆ ಅಯ್ಯಪ್ಪ.. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪಬ್ಬಾರ್. ಚಿತ್ರದಲ್ಲಿ ಧೀರೇನ್ ರಾಮ್ ಕುಮಾರ್ ನಾಯಕನಾಗಿ, ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಪಬ್ಬಾರ್ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಕಲಾವಿದ ಅಯ್ಯಪ್ಪ ಎಂಟ್ರಿ ಕೊಟ್ಟಿದ್ದಾರೆ. ಅಯ್ಯಪ್ಪ ಪಿ ಶರ್ಮ ಪಬ್ಬಾರ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಹೊಸ ಅವತಾರ ತಾಳಿದ್ದಾರೆ. ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಪಬ್ಬಾರ್ ಸಿನಿಮಾದ SP ಪಾತ್ರಕ್ಕಾಗಿ ಗ...

ಈ ವಾರ ತೆರೆಗೆ ಅಜೇಯ್ ರಾವ್ ಅಭಿನಯದ ಸುಂದರ ಕೌಟುಂಬಿಕ ಕಥಾನಕ "ಸರಳ ಸುಬ್ಬರಾವ್"..

ಈ ವಾರ ತೆರೆಗೆ ಅಜೇಯ್ ರಾವ್ ಅಭಿನಯದ ಸುಂದರ ಕೌಟುಂಬಿಕ ಕಥಾನಕ "ಸರಳ ಸುಬ್ಬರಾವ್".. 1971 ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಹಾಗೂ ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿಸಿರುವ ಚಿತ್ರ "ಸರಳ ಸುಬ್ಬರಾವ್". ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಹಲವು ಸದಭಿರುಚಿ ಚಿತ್ರಗಳ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ "ಸರಳ ಸುಬ್ಬರಾವ್" ಚಿತ್ರ ಈ ವಾರ ಫೆಬ್ರವರಿ 20 ರಂದು ತೆರೆಗೆ ಬರುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಅವರ ಛಾಯಾಗ್ರಹಣವಿದೆ. ಬಸವರಾಜ ಅರಸ್ ಸಂಕಲನ,‌ ಅಮರ್ ಕಲಾ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್, ವಿಜಯ್ ಚಂಡೂರ್, ರಘು ರಾಮನಕೊಪ್ಪ ಮುಂತಾದವರು "ಸರಳ ಸುಬ್ಬರಾವ್" ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ವಾರ ತೆರೆಗೆ "ಆಲ್ಫಾ" #men love vengeance"...

ಈ ವಾರ ತೆರೆಗೆ "ಆಲ್ಫಾ" #men love vengeance"... L A ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಹೇಮಂತ್ ಕುಮಾರ್ ನಾಯಕ..  ಒಂದೊಳ್ಳೆ ಕಂಟೆಂಟ್ ವುಳ್ಳ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ "ಆಲ್ಫಾ #men love vengeance" ಚಿತ್ರ ಈ ವಾರ(ಫೆಬ್ರವರಿ 20)ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ " ಗೀತಾ" ಹಾಗೂ ಧನಂಜಯ್ ನಟನೆಯ "ಗುರುದೇವ ಹೊಯ್ಸಳ" ಚಿತ್ರಗಳ ನಂತರ ವಿಜಯ್ ಅವರು ನಿರ್ದೇಶಿಸಿರುವ ಮೂರನೇ ಚಿತ್ರ "ಆಲ್ಫಾ"#men love vengeance". ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ಈ ಚಿತ್ರದ ನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಾಯಕನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಗೋಪಿಕಾ ಸುರೇಶ್ ಹಾಗೂ ಅಯನಾ ನಟಿಸಿದ್ದಾರೆ. " ಬಿಗ್ ಬಾಸ್" ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ಹೀಗೆ ಅನುಭವಿ ಕಲಾವಿದರ ದೊಡ್ಡ...

'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್‌ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ!..

'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್‌ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ!.. ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ 'ನಾಗಬಂಧಂ' ಚಿತ್ರದ ಭವ್ಯ ಟೀಸರ್ ಅನ್ನು ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ಅನಾವರಣಗೊಳಿಸಿದ್ದಾರೆ. ಮಹಾ ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಟೀಸರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯುವ ಭರವಸೆ ನೀಡಿದೆ. ನಿರ್ದೇಶಕ ಅಭಿಷೇಕ್ ನಾಮಾ ಅವರ ಮಹತ್ವಾಕಾಂಕ್ಷೆಯ ಈ ಚಿತ್ರವನ್ನು ನಿರ್ಮಾಪಕರುಗಳಾದ ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದಾರೆ. ವಿಶ್ವದರ್ಜೆಯ ತಾಂತ್ರಿಕ ಮೌಲ್ಯಗಳು ಮತ್ತು ಅದ್ಧೂರಿ ನಿರ್ಮಾಣದೊಂದಿಗೆ 'ನಾಗಬಂಧಂ' ಮೂಡಿಬಂದಿದೆ. ಆಧ್ಯಾತ್ಮಿಕ ಆಳ ಮತ್ತು ದೃಶ್ಯ ವೈಭವದ ಸಂಗಮವಾಗಿ ಪ್ರತಿ ಫ್ರೇಮ್ ಕೂಡ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ. ಹಿಮಾಲಯದ ನಿಗೂಢ ಲೋಕ.. ಹಿಮಾಲಯದ ಹಿಮಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿ ಟೀಸರ್ ಆರಂಭವಾಗುತ್ತದೆ. ಕಾಲಕ್ಕಿಂತಲೂ ಹಳೆಯದಾದ ಮತ್ತು ಗುಪ್ತವಾಗಿರುವ ರಹಸ್ಯವೊಂದರ ಕಾವಲುಗಾರನಾಗಿ ಕಥೆ ಸಾಗುತ್ತದೆ. ಅಬ್ದಾಲಿ ನೇತೃತ್ವದ ಐತಿಹಾಸಿಕ ಅಫ್ಘಾನ್ ಆಕ್ರಮಣದಿಂದ ಪ್ರೇರಿತವಾದ ಈ ಕಥೆಯು ಪುರಾಣ, ಇತಿಹಾಸ ಮತ್ತು ಆಧ್ಯಾತ್ಮಿಕ ಯುದ್ಧವನ...

ಉತ್ತರ ಕರ್ನಾಟಕದಲ್ಲಿ "ಕನಕರಾಜ"ನ ಸಂಚಾರ...ಅನೂಪ್ ರೇವಣ್ಣ ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಸಿ.ಎಂ ಅಭಿಮಾನಿಯ ಕಥೆ..

ಉತ್ತರ ಕರ್ನಾಟಕದಲ್ಲಿ "ಕನಕರಾಜ"ನ ಸಂಚಾರ... ಅನೂಪ್ ರೇವಣ್ಣ ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಸಿ.ಎಂ ಅಭಿಮಾನಿಯ ಕಥೆ.. ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸುತ್ತಿರುವ, ಡಾ||ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನು ಮಾಡುತ್ತಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ "ಕನಕರಾಜ" ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಳಗಾವಿ, ಗೋಕಾಕ್ ಮುಂತಾದ ಕಡೆ ಬಿರುಸಿನಿಂದ ಸಾಗಿದೆ. ಹದಿನೈದು ದಿನಗಳ ಕಾಲ ಮಾತಿನ ಭಾಗ, ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ನಡೆಯಲಿದೆ‌. ನಾಯಕ ಅನೂಪ್ ರೇವಣ್ಣ, ನಾಯಕಿ ನಿಮಿಷ, ಖಳನಟ ಮಂಜುನಾಥ್ ಅರಸ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೊದಲ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.  "ಕನಕರಾಜ" ಇದು ಮುಖ್ಯಮಂತ್ರಿಗಳ ಅಭಿಮಾನಿಯ ಕಥೆ. "FAN OF CM" ಎಂಬ ಅಡಿಬರಹ ಕೂಡ ಇದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಕೆ‌.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ‌.  ಅನೂಪ್ ರೇವಣ್ಣ, ನಿಮಿಷ, ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಗಿರೀಶ್ ಜತ್ತಿ, ಯಮುನಾ ಶ್ರೀನಿಧಿ, ಮಂಜುನಾಥ್ ಅರಸ್, ಮಿಮಿಕ್ರಿ ಗೋಪಿ ಮುಂತಾದವರು ...

ಮಹಾ ಶಿವರಾತ್ರಿ ಸಂದರ್ಭದಲ್ಲಿ "ಸರ್ವಾಂತರ್ಯಾಮಿ”ಚಿತ್ರದ ಶಿವತಾಂಡವದ ಹಾಡು ಬಿಡುಗಡೆ..

ಮಹಾ ಶಿವರಾತ್ರಿ ಸಂದರ್ಭದಲ್ಲಿ "ಸರ್ವಾಂತರ್ಯಾಮಿ”ಚಿತ್ರದ ಶಿವತಾಂಡವದ ಹಾಡು ಬಿಡುಗಡೆ.. ಶಿವನ ಹಾಡಿನ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ ಚಿತ್ರತಂಡ.. ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ. ಚಿತ್ರಕ್ಕೆ ನಿರ್ದೇಶಕ ಹಾಗು ಗೀತರಚನೆಕಾರ ಕೆ.ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವನ ಬಗ್ಗೆ ನಿರ್ದೇಶಕ ರಂಗಸ್ವಾಮಿ ಅವರೆ ಬರೆದಿರುವ ಶಿವನ ಕುರಿತಾದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಶಿವ ತಾಂಡವದ ಈ ಗೀತೆಗೆ ರಮೇಶ್ ಕೃಷ್ಣ ಸಂಗೀತ ನೀಡಿದ್ದು, ರಂಗಸ್ವಾಮಿ ಕಪನಿಪಾಳ್ಯ ಹಾಗೂ ಸಂಜನಾ ಅಭಿನಯಿಸಿದ್ದಾರೆ. ವೇದಸ್ಯ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ ಕಪನಿಪಾಳ್ಯ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಚಿತ್ರರಂಗದಲ್ಲಿದ್ದೆ, ಅಂದಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಹೀಗಾಗಿ ಈ ಚಿತ್ರ ಮಾಡಿದ್ದೇನೆ. ನಿರ್ದೇಶನದ ಜೊತೆಗೆ ಶಿಕ್ಷಕನ ...

20ವರುಷಗಳ ಗೋಲ್ಡನ್ ಸ್ಟಾರ್ ಸಂಭ್ರಮದಲ್ಲಿ ಆರಂಭವಾಯಿತು ಗಣೇಶ್ ನೂತನ ಸಿನಿಮಾ "ತಮ್ಮ ಸುಖಗಮನ ಬಯಸುವ"..

20ವರುಷಗಳ ಗೋಲ್ಡನ್ ಸ್ಟಾರ್ ಸಂಭ್ರಮದಲ್ಲಿ ಆರಂಭವಾಯಿತು ಗಣೇಶ್ ನೂತನ ಸಿನಿಮಾ "ತಮ್ಮ ಸುಖಗಮನ ಬಯಸುವ".. ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಸೆಳೆದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹಾಗೂ "ಹೊಂದಿಸಿ ಬರೆಯಿರಿ", "ತೀರ್ಥರೂಪ ತಂದೆಯವರಿಗೆ" ಅಂತಹ ಉತ್ತಮ ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ "ತಮ್ಮ ಸುಖಾಗಮನ ಬಯಸುವ". ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಹಾಗೂ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ "ತಮ್ಮ ಸುಖಾಗಮನ ಬಯಸುವ" ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣೇಶ್ ಅವರ ಸಾಕಷ್ಟು ಅಭಿಮಾನಿಗಳು ಹಾಗೂ ಸ್ನೇಹಿತರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.  ಇಂದು ನನ್ನ "ಗೋಲ್ಡನ್" ದಿನ ಎಂದು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, 2006 ರಲ್ಲಿ "ಮುಂಗಾರು ಮಳೆ" ತೆರೆ ಕಂಡ...

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಟ್ರೇಲರ್ ರಿಲೀಸ್..

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಟ್ರೇಲರ್ ರಿಲೀಸ್.. ಮತ್ತೊಂದು ಥ್ರಿಲ್ಲಿಂಗ್ ಕಥೆಯೊಂದಿಗೆ ಬಂದ ವಿಜಯ್ ರಾಘವೇಂದ್ರ.. ಕುತೂಹಲ ಹೆಚ್ಚಿಸಿದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಟ್ರೇಲರ್..  ಫೆ.20ಕ್ಕೆ ವಿಜಯ್ ರಾಘವೇಂದ್ರ ಚಿತ್ರ ಬಿಡುಗಡೆ.. ಸಸ್ಪೆನ್ಸ್ ಕಥೆಗಳನ್ನು ಸೊಗಸಾಗಿ ಕಟ್ಟಿಕೊಡುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈಗ ಸೆಕೆಂಡ್ ಕೇಸ್ ಸೀತಾರಾಮ್ ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಅಂದಹಾಗೇ 'ಸೀತಾರಾಮ್ ಬಿನೋಯ್ ಕೇಸ್ ನಂಬರ್ 18’ ಚಿತ್ರದ ಸೀಕ್ವೆಲ್ ಇದಾಗಿದ್ದು, ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರು ಮತ್ತೆ ಖಾಕಿ‌ ತೊಟ್ಟು ಮತ್ತೊಂದು ಥ್ರಿಲ್ಲಿಂಗ್ ಕಥೆ ಭೇದಿಸಲು ಹೊರಟಿದ್ದಾರೆ.‌ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಟ್ರೇಲರ್ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಬಿಡುಗಡೆ ಮಾಡಲಾಯಿತು.  ಈ ವೇಳೆ ನಟ ವಿಜಯ್ ರಾಘವೇಂದ್ರ ಮಾತನಾಡಿ, ಸೀತಾರಾಮ್ ಬಿನೋಯ್ ನನ್ನ ವೃತ್ತಿ ಜೀವನಕ್ಕೆ ವಿಶೇಷ ಬಲ ಕೊಟ್ಟ ಸಿನಿಮಾ. ಆ ಚಿತ್ರದ ಬರವಣಿಗೆ, ಪ್ರೆಸೆಂಟೇಷನ್ ಎಲ್ಲವೂ ಶಕ್ತಿ ನೀಡಿತ್ತು. ನಂತರ ಕೇಸ್ ಆಫ್ ಕೊಂಡಾಣ ಮಾಡಿದೆವು. ಬಳಿಕ ಈ ಇನ್ನೊಂದು ಸೀತಾರಾಮ್ ಮಾಡಿದ್ದೇವೆ. ದೇವಿ ಸರ್ ಒಳ್ಳೆ ಸ್ಕ್ರಿಪ್ಟ್ ಬರೆದಿದ್ದಾರೆ‌. ಸಾತ್ವಿಕ್ ಅದಕ್ಕೆ ಸಪೋರ್ಟ್ ಮಾಡಿದರು. ಇಡೀ ಚಿತ್ರತಂಡ ಸೇರಿಕೊಂಡು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರ ಮಾಡಿದೆವು. ನವನೀತ್ ಶ್ಯಾಮ್ ಸಂಗೀತ ಚ...