Skip to main content

ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ ರಾಕ್ಷಸ ಪ್ರೀಮಿಯರ್ ಶೋ..

ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ ರಾಕ್ಷಸ ಪ್ರೀಮಿಯರ್ ಶೋ..
 ಕ್ರೈಮ್ ಸೈಕಲಾಜಿಕಲ್ ಸರಣಿ ಯಾವಾಗ, ಎಲ್ಲಿ ಸ್ಟ್ರೀಮಿಂಗ್?..
ನಾಳೆಯಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಸ್ಟ್ರೀಮಿಂಗ್...
ಪ್ರತಿಷ್ಟಿತ ಒಟಿಟಿಗಳಲ್ಲಿ ಒಂದಾದ zee5 ಕನ್ನಡದಲ್ಲಿ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ.‌ ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಇದೀಗ ಇದೇ ತಿಂಗಳ 20ರಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಪ್ರಸಾರವಾಗಲಿದೆ.
ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ ಇದಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ರಾಕ್ಷಸ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ Zee5 ಬ್ಯುಸಿನೆಸ್ ಹೆಡ್ ದೀಪಕ್ ತಿಮ್ಮಯ್ಯ ಮಾತನಾಡಿ, zee5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ‌ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಷ್ಟು ಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿಕ್ಷನ್, ಟಿವಿ‌ ಫ್ಲಸ್ ಫ್ಲಸ್ ಸೇರಿದಂತೆ ಹಲವು ಫಾರ್ಮೆಟ್ ಜಾರಿಗೆ ತರುತ್ತೇವೆ. ರಾಕ್ಷಸ ಉತ್ತರ ಕರ್ನಾಟಕ ಭಾಗದ ಕಥೆ. ಕಲಾವಿದರು ಹಾಗೂ ನಿರ್ಮಾಪಕರು ಕೂಡ ಉತ್ತರ ಕರ್ನಾಟಕದವರೇ ಆಗಿದ್ದಾರೆ. 22ರಿಂದ 25 ನಿಮಿಷದ ಏಳು ಎಪಿಸೋಡ್ ಆಗಿ ಪ್ರಸಾರ ಆಗಲಿದೆ.‌ ನಿಮ್ಮ ಸಪೋರ್ಟ್ ಹೀಗೆ ಇರಲಿ. ಏಪ್ರಿಲ್ ನಿಂದ ಬೇರೆ ಬೇರೆ ಪ್ರಾಜೆಕ್ಟ್ ಜೊತೆ ಬರುತ್ತೇವೆ ಎಂದರು.
ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. Zee5 ಇಡೀ ಟೀಂಗೆ ಧನ್ಯವಾದಗಳು. ಸಿನಿಮಾ ಅಂತಾ ಬಂದಾಗ ಥಿಯೇಟರ್ ಗೆ ಹೋಗುತ್ತೇ. ಕಲೆಕ್ಷನ್ ಆಗುತ್ತದೆ. ಅಲ್ಲಿ ಯಾವುದೇ ಚೌಕಟ್ಟು ಇರುವುದಿಲ್ಲ.‌ಆದರೆ ವೆಬ್ ಸಿರೀಸ್ ಮಾಡಿದಾಗ ಫ್ಲಾಟ್ ಫಾರ್ಮ್ ಸಪೋರ್ಟ್ ಬೇಕು. ಅದನ್ನು ರೆಡಿ ಮಾಡಿ ಎಲ್ಲಿ ಪ್ರೆಸೆಂಟ್ ಮಾಡುತ್ತೀರಾ? ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಬೇರೆ ಇಂಡಸ್ಟ್ರಿಯಲ್ಲಿ ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದ್ದಕ್ಕೆ ಅಲ್ಲಿ ವೆಬ್ ಸಿರೀಸ್ ಸಂಪ್ರದಾಯ ಶುರುವಾಗಿದೆ. ಇಲ್ಲಿ ಈಗ ಅದನ್ನು zee5 ಮಾಡುತ್ತಿದೆ. ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ.‌ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ಇರುವ ಕೊಡುಗೆ. ಪ್ರೀತಿ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. ಒಂದೊಳ್ಳೆ ತಂಡ ಈ ಸಿರೀಸ್ ನಲ್ಲಿ ಕೆಲಸ ಮಾಡಿದೆ. 89 ಪಾತ್ರಗಳು ಈ ಸಿರೀಸ್ ನಲ್ಲಿ ಇದ್ದಾರೆ. ‌ಅವರೆಲ್ಲರೂ ಉತ್ತರ ಕರ್ನಾಟಕ ಭಾಗದವರು. ವೆಬ್ ಸಿರೀಸ್ ಗೆ ಒಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ ಅಂದರೆ ಇದು ಗ್ರೇಟ್ ಮೂವ್. ಇದೆಲ್ಲಾ zee5ನಿಂದ ಆಗಿದೆ ಎಂದರು.
ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ,ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್ಸ್‌ನಲ್ಲಿ ಜನಪ್ರಿಯ ನಿರ್ದೇಶಕ ತರುಣ್‌ ಸುಧೀರ್ ನಿರ್ಮಿಸಿದ್ದಾರೆ.

Comments

Popular posts from this blog

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ.

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ. ಉತ್ತರ ಅಮೇರಿಕಾದ ವೀರಶೈವ ಸಮಾಜದ (ವಿ.ಎಸ್.ಎನ್.ಎ) ಪರವಾಗಿ, ಅಮೇರಿಕಾದ ಟೆಕ್ಸಾಸ್ನ ಡಲ್ಲಾಸ್ನ ಅಲೆನ್ ನಗರದಲ್ಲಿ ಮೇ 3 ಅನ್ನು “ಬಸವ ದಿನ” ಎಂದು ಘೋಷಿಸಲಾಗಿದೆ ಎಂದು ಘೋಷಿಸಲು ನಾವು ಬಯಸುತ್ತೇವೆ. ಇದು ಅಮೇರಿಕಾದ ವೀರಶೈವ ಮತ್ತು ಲಿಂಗಾಯತ ಸಮುದಾಯದ ಅತ್ಯಂತ ಸುಂದರ ಕ್ಷಣವಾಗಿದೆ. ನಗರದ ಮೇಯರ್ ಬೈನ್ ಎಲ್ ಬ್ರೂಕ್ಸ್ ಅವರು ವಿ.ಎಸ್.ಎನ್.ಎ. ಡಲ್ಲಾಸ್ ಶಾಖೆಯಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಘೋಷಿಸಿದರು. ಸಮಾನತೆ ಮತ್ತು ಸಹಾನುಭೂತಿಯನ್ನು ಪ್ರತಿಪಾದಿಸಿದ ಮತ್ತು ಅವರ ಸಂದೇಶವು ಪ್ರಪಂಚದಾದ್ಯAತದ ಜನರಿಗೆ ಸ್ಫೂರ್ತಿ ನೀಡುತ್ತಿರುವ 12ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಜಗದ್ಗುರು ಬಸವಣ್ಣ ಅವರ ಜನ್ಮ ಮತ್ತು ಬೋಧನೆಗಳನ್ನು ಗೌರವಿಸಲು ಇದು. ಲಿಂಗ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವಿಲ್ಲದ ನ್ಯಾಯಯುತ ಸಮಾಜದ ಬಸವಣ್ಣನವರ ದೃಷ್ಟಿಕೋನವು ಏಕತೆ, ಪರಸ್ಪರ ಗೌರವ ಮತ್ತು ನೈತಿಕ ಜೀವನದ ಮಹತ್ವವನ್ನು ಉತ್ತೇಜಿಸುವ ಮೂಲಕ ಇಂದಿಗೂ ಆಳವಾಗಿ ಪ್ರಸ್ತುತವಾಗಿದೆ. 1978 ರಲ್ಲಿ ಸ್ಥಾಪನೆಯಾದ ವಿ.ಎಸ್.ಎನ್.ಎ., ಯು.ಎಸ್.ಎ. ಮತ್ತು ಕೆನಡಾದಲ್ಲಿ 32 ಶಾಖೆಗಳನ್ನು ಹೊಂದಿದೆ. ವಿ.ಎಸ್.ಎನ್.ಎ. ಈ ವರ್ಷ 47ನೇ ಸಮಾವೇ...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...