ಚಿತ್ರೀಕರಣ ಮುಗಿಸಿದ ಮತ್ತೆ ಮಳೆ ಹೊಯ್ಯುತ್ತಿದೆ.. ತಂತ್ರಜ್ಘರು ಹೊರತುಪಡಿಸಿ, ಕಲಾವಿದರೆಲ್ಲರೂ ಹೊಸಬರಾಗಿರುವ *ಮತ್ತೆ ಮಳೆ ಹೊಯ್ಯುತ್ತಿದೆ* ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದರಿಂದ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ’ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹವಿದೆ. ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್ ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ಪತ್ನಿ *ಸುಮ ಹೆಸರಿನಲ್ಲಿ ಬಂಡವಾಳ ಹೂಡುತ್ತಿದ್ದಾರೆ*. ಶೃತಿ ಅನಿಲ್‌ಕುಮಾರ್ ಸಹ ನಿರ್ಮಾಪಕರು ಹಾಗೂ ಪ್ರಾಧ್ಯಾಪಕರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ *ಪರಮ್‌ಗುಬ್ಬಿ ನಿರ್ದೇಶನ* ಮಾಡಿದ್ದಾರೆ. ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಕಬ್ಬಡಿ ನರೇಂದ್ರಬಾಬು, ಸಂಗೀತ ಅತಿಶಯಜೈನ್ ಅವರದಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ಮಾಪಕರ ಮಗ ಜಿ.ಲಿಖಿತ್ ಮತ್ತು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಂಗಭೂಮಿಯ ಜಯವರ್ಧನ್ ನಾಯಕರ...