Skip to main content

"ಜೈ" ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ.

"ಜೈ" ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ.
 ಗೌರಿ ಗಣೇಶ ಹಬ್ಬದ ವಿಶೇಷ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರತಿಭೆ ಬಿಗ್ ಬಾಸ್ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ತುಳು ಹಾಗೂ ಕನ್ನಡ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಆಯೋಜನೆ ಮಾಡಿದ್ದು , ವಿಶೇಷವಾಗಿ ಕರಾವಳಿ ಚಂಡೆ ವಾದ್ಯದ ಮೂಲಕ ರೋರಿಂಗ್ ಸ್ಟಾರ್ ಶ್ರೀ ಮುರಳಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು ದೀಪವನ್ನು ಬೆಳಗುವುದರ ಮೂಲಕ ಚಾಲನೆ ನೀಡಿದರು. ಇನ್ನು ವಿಶೇಷವಾಗಿ ಮೈಸೂರು ಮೂಲದ ರಾಪ್ ಗಾಯಕರು ಜೈ ಚಿತ್ರಕ್ಕೆ ಸೈ ಎಂಬ ಹಿಪಪ್ ರಾಪ್ ಸಾಂಗ್ ಮೂಲಕ ಗಮನ ಸೆಳೆದರು. ಇನ್ನು ಈ ಚಿತ್ರದ ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಶ್ರೀಮುರಳಿ ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿದರು. 
ನಂತರ ಅತಿಥಿ ರೋರಿಂಗ್ ಸ್ಟಾರ್ ನಟ ಶ್ರೀಮುರಳಿ ಮಾತನಾಡುತ್ತಾ ಚಿತ್ರದ ಟೀಸರ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ತಂಡದ ಶ್ರಮ ಕಾಣುತ್ತದೆ. ನಟ ರೂಪೇಶ್ ಶೆಟ್ಟಿ ಬಹಳ ಸುಂದರವಾದ ನಾಯಕ. ತುಳು ಭಾಷೆಯ ಸಂಸ್ಕೃತಿ , ಆಚಾರ ವಿಚಾರದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ. ನಾನು ಅವರನ್ನ ಬಿಗ್ ಬಾಸ್ ನಿಂದ ನೋಡುತ್ತಾ ಬಂದಿದ್ದೇನೆ. ಈ ಚಿತ್ರದಲ್ಲಿ ನಾಯಕನಾಗಿ ಜೊತೆಗೆ ನಿರ್ದೇಶನವನ್ನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅದರಲ್ಲೂ ವಿಶೇಷವಾಗಿ ಸುನಿಲ್ ಶೆಟ್ಟಿ ಅಣ್ಣನ ತುಳು ಸಿನಿಮಾಗೆ ಕರೆ ತಂದಿದ್ದಾರೆ. ನಮಗೂ ಸ್ವಲ್ಪ ಹೇಳಿ ಅವರನ್ನ ಹೇಗೆ ಕರೆತರಬೇಕೆಂದು ಹೇಳುತ್ತಾ , ಚಿತ್ರದ ಸಂಗೀತ , ಛಾಯಾಗ್ರಹಣ ಹಾಗೂ ನಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಶುಭವಾಗಲಿ ಎಂದು ಹಾರೈಸಿದರು. ಹಾಗೆ ತಂಡದ ಜೊತೆ ಸೇರಿ ಹುಲಿ ವೇಷದ ಕುಣಿತಕ್ಕೆ ಹೆಜ್ಜೆ ಹಾಕಿ , ಚಿತ್ರ ತಂಡದ ಪ್ರೀತಿಯ ಸನ್ಮಾನವನ್ನು ಸ್ವೀಕರಿಸಿದರು.
ಈ ಚಿತ್ರದ ನಟ , ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡುತ್ತಾ , ಇದು ನನ್ನ ಮೂರನೆಯ ನಿರ್ದೇಶನದ ಚಿತ್ರ. ಈ ಹಿಂದೆ ನಾನು ಗಿರ್ಗಿಟ್, ಸರ್ಕಸ್ ಎಂಬ ಚಿತ್ರ ಮಾಡಿದ್ದೆ ಅದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿದ್ದು , ಈಗ ಜೈ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಹಾಗೆ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಇದೊಂದು ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಇರುವ ಚಿತ್ರ. ಇದು ತುಳು ಭಾಷೆಯಲ್ಲಿ ಸಿದ್ಧವಾಗಿದ್ದು , ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದೇವೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುನಿಲ್ ಶೆಟ್ಟಿ ಸರ್ ಅಭಿನಯಿಸಿದ್ದಾರೆ. ತಮ್ಮ ಭಾಷೆಯ ಅಭಿಮಾನದಿಂದ ಒಂದು ರೂಪಾಯಿಯನ್ನು ಪಡೆಯದೆ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬರೀ ಗೆಸ್ಟ್ ರೋಲ್ ಅಲ್ಲದೆ , ಸುಮಾರು 18 ನಿಮಿಷಗಳ ಕಾಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವು ಶ್ರಮಪಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತೆ , ಬೆಂಬಲ ಇರುತ್ತೆ ಎನ್ನುವುದಕ್ಕೆ ಸುನಿಲ್ ಶೆಟ್ಟಿ ಸರ್ ಸಾಕ್ಷಿ , ನಮ್ಮ ನಿರ್ಮಾಪಕರು ನನಗೆ ಏನು ಬೇಕೋ ಅದನ್ನ ನೀಡಿದ್ದಾರೆ. ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೆ ಇದೆ. ಅಂದುಕೊಂಡಂತೆ ಚಿತ್ರ ಮುಗಿದಿದ್ದು , ನವೆಂಬರ್‌ 14ರಂದು ಎರಡು ಭಾಷೆಯಲ್ಲಿ ನಮ್ಮ ಚಿತ್ರವನ್ನ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ , ಬೆಂಬಲ ಇರಲಿ ಎಂದು ಕೇಳಿಕೊಂಡರು.
ನಟಿ ಅದ್ವಿತಿ ಶೆಟ್ಟಿ ಮಾತನಾಡುತ್ತಾ ಇದು ನನ್ನ ಮೊದಲ ತುಳು ಚಿತ್ರ. ನನ್ನ ಮಾತೃಭಾಷೆ ತುಳು , ನನ್ನ ಅಪ್ಪನಿಗೆ ನಾನು ತುಳು ಸಿನಿಮಾದಲ್ಲಿ ನಡೆಸಬೇಕೆಂಬ ಆಸೆ ಇತ್ತು. ಅದರಂತೆ ನನ್ನ ಮೊದಲ ಚಿತ್ರ ಈಗ ಸಿದ್ಧವಾಗಿದೆ. ಆದರೆ ಎರಡು ವರ್ಷವಾಯಿತು ನನ್ನ ಅಪ್ಪ ನಮ್ಮನ್ನು ಅಗಲಿ. ಹಾಗೆ ಇಂದು ನನ್ನೊಂದಿಗೆ ನನ್ನ ತಾಯಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. 13ವರ್ಷ ಕನಸು ಈಗ ನೆರವೇರಿತಿದೆ. ನನ್ನ ಈ ತುಳು ಭಾಷೆಯ ಈ ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ. ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದೇನೆ. ಇಡೀ ಚಿತ್ರ ತಂಡ ಬಹಳ ಹಾರ್ಡ್ ವರ್ಕ್ ಮಾಡಿದೆ. ನಿಮ್ಮೆಲ್ಲರ ಸಪೋರ್ಟ್ ನಮ್ಮ ಟೀಮ್ ಗೆ ಬೇಕು ಎಂದರು.
ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರಕಥೆಯನ್ನ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ 'ಜೈʼ ಸಿನಿಮಾದಲ್ಲಿ ನಾಯಕನಾಗಿ ರೂಪೇಶ್‌ ಶೆಟ್ಟಿ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ದೇವದಾಸ್ ಕಾಪಿಕಾಡ್, ರಾಜ್‌ ದೀಪಕ್‌ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ಡೈಲಾಗ್‌ ರೈಟರ್ ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ. ರೂಪೇಶ್‌ ಶೆಟ್ಟಿ ಸಾರಥ್ಯದ ಈ ಚಿತ್ರ ತುಳು ಮತ್ತು ಕನ್ನಡ ಭಾಷೆಗಳಲ್ಲಿ ನವೆಂಬರ್‌ 14ರಂದು ತೆರೆಯ ಮೇಲೆ ಬರಲಿದೆ.

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.