Skip to main content

ಟ್ರೇಲರ್ ನಲ್ಲೇ ಮೋಡಿ ಮಾಡಿದ ‘ಟೆರರ್’ ಏಪ್ರಿಲ್ 10ರಂದು ತೆರೆಗೆ..

ಟ್ರೇಲರ್ ನಲ್ಲೇ ಮೋಡಿ ಮಾಡಿದ ‘ಟೆರರ್’ ಏಪ್ರಿಲ್ 10ರಂದು ತೆರೆಗೆ.. 
ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಸಮ್ಮುಖದಲ್ಲಿ ಟ್ರೇಲರ್ ಅನಾವರಣ..
 ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರ ನಿರ್ಮಾಣದ, ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ "ಟೆರರ್" ಚಿತ್ರ ಆರಂಭದಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸುಂದರರಾಜ್, ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಲಹರಿ ವೇಲು ಹಾಗೂ ಬ್ರಹ್ಮಾಂಡ ಗುರೂಜಿ "ಟೆರರ್" ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರ ಆರಂಭವಾದ ದಿನದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ಆದಿತ್ಯ, ಚಿತ್ರ ಉತ್ತಮವಾಗಿ ಮೂಡಿಬರಲು ಇಡೀ ಚಿತ್ರತಂಡ ಕಾರಣ. ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ಇನ್ನೂ ನಿರ್ದೇಶಕ ರಂಜನ್ ಅವರು ಮೊದಲ ನಿರ್ದೇಶನದಲ್ಲೇ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಹಾಗೂ ಶ್ರೀನಗರ ಕಿಟ್ಟಿ 21 ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸಿದ್ದೇವೆ. ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ ಹೀಗೆ ಅನೇಕ ಹಿರಿಯ‌ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಡಾ||ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ನಮ್ಮ ಚಿತ್ರ ಇದೇ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. 
ನಿರ್ದೇಶಕರು ಬಂದು ಕಥೆ ಹೇಳಿದಾಗ ನಿರ್ಮಾಪಕರು ಯಾರು ಎಂದು ಕೇಳಿದೆ‌. ಸಿಲ್ಕ್ ಮಂಜು ಅವರು ಅಂತ ಹೇಳಿದರು. ನಾನು ಕಥೆ ಹೇಳಬೇಡಿ. ಮಂಜು ಅವರು ನನ್ನ ಸಾಕಷ್ಟು ವರ್ಷಗಳ ಸ್ನೇಹಿತರು. ಅವರಿಗಾಗಿ ಈ ಸಿನಿಮಾ ಮಾಡುತ್ತೇನೆ ಅಂದೆ. ಇನ್ನೂ ಗೆಳೆಯ ಆದಿತ್ಯ ಅವರ ಜೊತೆಗೆ ಆದಿ ಚಿತ್ರದಲ್ಲಿ ನಟಿಸಿದ್ದೆ. ಬಹಳ ವರ್ಷಗಳ ನಂತರ ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ನಟ ಶ್ರೀನಗರ ಕಿಟ್ಟಿ ಹೇಳಿದರು.
ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಅಮೇರಿಕಾದಲ್ಲಿರುವ ನನ್ನ ಸ್ನೇಹಿತ ರವಿ ಅವರು ಸಹ ನನ್ನ ಜೊತೆ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಚಿತ್ರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ದಯವಿಟ್ಟು ನಮ್ಮ ಚಿತ್ರವನ್ನು ಎಲ್ಲರೂ ನೋಡಿ . ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಿಲ್ಕ್ ಮಂಜು.
 ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಅತಿಥಿಗಳಿಗೆ ನಿರ್ದೇಶಕ ರಂಜನ್ ಶಿವರಾಮ್ ಗೌಡ ಧನ್ಯವಾದ ಹೇಳಿದರು.
ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಕಲಾವಿದರಾದ ಸಿಹಿಕಹಿ ಚಂದ್ರು, ಕೀರ್ತಿ ರಾಜ್, ಕರಿ ಸುಬ್ಬು, ಮುಂಬೈ ನಟಿ ಶಿವಾಂಗಿ, ನಾಗೇಂದ್ರ ಅರಸ್ ಮುಂತಾದವರು "ಟೆರರ್" ಚಿತ್ರದ ಕುರಿತು ಮಾತನಾಡಿದರು. ರವಿಚೇತನ್, ಕೋಟೆ ಪ್ರಭಾಕರ್, ರವಿ ಭಟ್, ಅಶ್ವಿನ್ ಹಾಸನ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಹಾಗೂ ಛಾಯಾಗ್ರಾಹಕ ನವೀನ್ ಅಕ್ಷಿ, ಸಂಕಲನಕಾರ ಶ್ರೀಕಾಂತ್ ಮುಂತಾದ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Comments

Popular posts from this blog

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ.

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ. ಉತ್ತರ ಅಮೇರಿಕಾದ ವೀರಶೈವ ಸಮಾಜದ (ವಿ.ಎಸ್.ಎನ್.ಎ) ಪರವಾಗಿ, ಅಮೇರಿಕಾದ ಟೆಕ್ಸಾಸ್ನ ಡಲ್ಲಾಸ್ನ ಅಲೆನ್ ನಗರದಲ್ಲಿ ಮೇ 3 ಅನ್ನು “ಬಸವ ದಿನ” ಎಂದು ಘೋಷಿಸಲಾಗಿದೆ ಎಂದು ಘೋಷಿಸಲು ನಾವು ಬಯಸುತ್ತೇವೆ. ಇದು ಅಮೇರಿಕಾದ ವೀರಶೈವ ಮತ್ತು ಲಿಂಗಾಯತ ಸಮುದಾಯದ ಅತ್ಯಂತ ಸುಂದರ ಕ್ಷಣವಾಗಿದೆ. ನಗರದ ಮೇಯರ್ ಬೈನ್ ಎಲ್ ಬ್ರೂಕ್ಸ್ ಅವರು ವಿ.ಎಸ್.ಎನ್.ಎ. ಡಲ್ಲಾಸ್ ಶಾಖೆಯಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಘೋಷಿಸಿದರು. ಸಮಾನತೆ ಮತ್ತು ಸಹಾನುಭೂತಿಯನ್ನು ಪ್ರತಿಪಾದಿಸಿದ ಮತ್ತು ಅವರ ಸಂದೇಶವು ಪ್ರಪಂಚದಾದ್ಯAತದ ಜನರಿಗೆ ಸ್ಫೂರ್ತಿ ನೀಡುತ್ತಿರುವ 12ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಜಗದ್ಗುರು ಬಸವಣ್ಣ ಅವರ ಜನ್ಮ ಮತ್ತು ಬೋಧನೆಗಳನ್ನು ಗೌರವಿಸಲು ಇದು. ಲಿಂಗ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವಿಲ್ಲದ ನ್ಯಾಯಯುತ ಸಮಾಜದ ಬಸವಣ್ಣನವರ ದೃಷ್ಟಿಕೋನವು ಏಕತೆ, ಪರಸ್ಪರ ಗೌರವ ಮತ್ತು ನೈತಿಕ ಜೀವನದ ಮಹತ್ವವನ್ನು ಉತ್ತೇಜಿಸುವ ಮೂಲಕ ಇಂದಿಗೂ ಆಳವಾಗಿ ಪ್ರಸ್ತುತವಾಗಿದೆ. 1978 ರಲ್ಲಿ ಸ್ಥಾಪನೆಯಾದ ವಿ.ಎಸ್.ಎನ್.ಎ., ಯು.ಎಸ್.ಎ. ಮತ್ತು ಕೆನಡಾದಲ್ಲಿ 32 ಶಾಖೆಗಳನ್ನು ಹೊಂದಿದೆ. ವಿ.ಎಸ್.ಎನ್.ಎ. ಈ ವರ್ಷ 47ನೇ ಸಮಾವೇ...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...