Skip to main content

Posts

Showing posts from March, 2026

ಸಮಯದ ಮಹತ್ವ ಸಾರುವ ಚಂದನ್ ಶೆಟ್ಟಿ ಅಭಿನಯದ ಹಾಗೂ ಸುಜಯ್ ಶಾಸ್ತ್ರಿ ನಿರ್ದೇಶನದ "ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರ ಏಪ್ರಿಲ್ 17 ರಂದು ತೆರೆಗೆ"

ಸಮಯದ ಮಹತ್ವ ಸಾರುವ ಚಂದನ್ ಶೆಟ್ಟಿ ಅಭಿನಯದ ಹಾಗೂ ಸುಜಯ್ ಶಾಸ್ತ್ರಿ ನಿರ್ದೇಶನದ "ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರ ಏಪ್ರಿಲ್ 17 ರಂದು ತೆರೆಗೆ" ಹಾಸ್ಯ ನಟನಾಗಿ ಎಲ್ಲರ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ಹಾಗೂ ಖ್ಯಾತ ಗಾಯಕ - ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ "ಎಲ್ರ ಕಾಲೆಳಿಯತ್ತೆ ಕಾಲ" ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಪೂರ್ವದಲ್ಲಿ ಚಿತ್ರತಂಡ "ಮಾತು ಮಧುರ" ಎಂಬ ಹಾಡನ್ನು ಆನಂದ್ ಆಡಿಯೋ ಮೂಲಕ ಅನಾವರಣ ಮಾಡಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  ಕಾರಣಾಂತರದಿಂದ ನಮ್ಮ ಚಿತ್ರ ಬಿಡುಗಡೆ ತಡವಾಗಿದೆ. ಈಗ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿದೆ ಎಂದು ಮಾತನಾಡಿದ ನಿರ್ದೇಶಕ ಸುಜಯ್ ಶಾಸ್ತ್ರಿ, ಇದೊಂದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನಕಪುರದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಸಮಯದ ಮಹತ್ವ ಸಾರುವ ಈ ಚಿತ್ರಕ್ಕೆ ನನ್ನ ಸ್ನೇಹಿತ ರಾಜಗುರು ಹೊಸಕೋಟೆ ಕಥೆ ಬರೆದಿದ್ದಾರೆ. ಕಥೆಗೆ ಈ ಶೀರ್ಷಿಕೆ ಪೂರಕವಾಗಿದೆ. ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿ. ದತ್ತಣ್ಣ, ತಾರಾ ಅನುರಾಧ, ಮಂಜು ಪಾವಗಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರ...

"ಕ್ಯಾಲೆಂಡರ್" ಬಿಡುಗಡೆ ಒಂದು ವಾರ ಮುಂದಕ್ಕೆ..ಏಪ್ರಿಲ್ 3ಕ್ಕೆ ಬರಬೇಕಿದ್ದ ಚಿತ್ರ ಏಪ್ರಿ

"ಕ್ಯಾಲೆಂಡರ್" ಬಿಡುಗಡೆ ಒಂದು ವಾರ ಮುಂದಕ್ಕೆ.. ಏಪ್ರಿಲ್ 3ಕ್ಕೆ ಬರಬೇಕಿದ್ದ ಚಿತ್ರ ಏಪ್ರಿಲ್ 10 ಕ್ಕೆ ಬಿಡುಗಡೆ..  ಈ ಹಿಂದೆ "ಸ್ವಾರ್ಥ ರತ್ನ" ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ "ಕ್ಯಾಲೆಂಡರ್" ಚಿತ್ರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿದೆ. ಮಹಿಳಾ ಪ್ರಧಾನ ಈ ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಪ್ರಸ್ತುತ "ದುರಂಧರ್ 2" ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವುದರಿಂದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಆ ಚಿತ್ರ ಪ್ರದರ್ಶನ ಕಾಣುತ್ತಿದೆ. ಹಾಗಾಗಿ "ಕ್ಯಾಲೆಂಡರ್" ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ. ಆ ಕಾರಣದಿಂದ "ಕ್ಯಾಲೆಂಡರ್" ಚಿತ್ರ ಬಿಡುಗಡೆಯನ್ನು ಒಂದು ವಾರ ತಡವಾಗಿ ಏಪ್ರಿಲ್ 10ರಂದು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರದ ನಿರ್ಮಾಪಕರೂ ಆಗಿರುವ ನಾಯಕ ಆದರ್ಶ ಗುಂಡುರಾಜ್ ತಿಳಿಸಿದ್ದಾರೆ.   ಈ ಚಿತ್ರದ ನಾಯಕಿಯರಾಗಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಟಿಸಿದ್ದಾರೆ.ಕನಸಿನ ರಾಣಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀ...

ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ "ಪುನೀತ್ ನಿವಾಸ" ಬಿಡುಗಡೆ...

ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ  "ಪುನೀತ್ ನಿವಾಸ" ಬಿಡುಗಡೆ...  ಪುನೀತ್ ರಾಜ್ ಕುಮಾರ್ ಕನ್ನಡಿಗರ ಆರಾಧ್ಯ ದೈವ, ಪುನೀತ್ ಅವರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು 'ಪುನೀತ್ ನಿವಾಸ' ಕಟ್ಟಿದ ಬಡ ಅಭಿಮಾನಿಯೊಬ್ಬನ ಕಥೆಯನ್ನು ಹೇಳುವ ಚಿತ್ರ "ಪುನೀತ್ ನಿವಾಸ" ಏಪ್ರಿಲ್ 24ರಂದು ಡಾ|| ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸಾಗುತ್ತಿದೆ.     ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಪುನೀತ್ ಅಪ್ಪಟ ಅಭಿಮಾನಿಯೂ ಆದ ಎಸ್.ಮೋಹನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ರಾಜು ಅವರು ಇಡೀ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.    ಪುನೀತ್ ಅವರ ಅಪ್ಪಟ ಅಭಿಮಾನಿ ಮಲ್ಲು ಅನಾಥ ಹುಡುಗ. ಕಟ್ಟಡ ಕೂಲಿ ಕೆಲಸ ಮಾಡಿಕೊಂಡಿದ್ದ, ಆತ ತನ್ನ ಮಾಲೀಕನ ಮನೆ ಸೇಲ್ ಮಾಡಿಸಿಕೊಡುತ್ತಾನೆ. ಆಗ ಮಾಲೀಕ ನೀಡಿದ 5 ಲಕ್ಷ ಕಮೀಷನ್ ಹಣದಲ್ಲಿ ಕನಸಿನ ಪುನೀತ್ ನಿವಾಸವನ್ನು ನಿರ್ಮಿಸುತ್ತಾನೆ. ನಂತರ ಆ ಪುನೀತ್‌ ನಿವಾಸದ ಒಳಗೆ ಬಂದಾಗ ಅಲ್ಲಿ ಆತನಿಗೆ ಪುನೀತ್ ಅವರೇ ಕಾಣಿಸ್ತಾರೆ. ಹೇಗೆ ಕಾಣಿಸುತ್ತಾರೆ ಅನ್ನೋದೇ ಚಿತ್ರದ ಕುತೂಹಲ.  ಅಲ್ಲೇ ತಾನೊಂದು ಸಿನಿಮಾ ಮಾಡಬೇಕೆಂದು ಹೊರಟ ಆತ ಸಿನಿಮಾ ಮಾಡಿದನೇ, ಇಲ್ಲವೇ, ಪುನೀತ್‌ರ ಆದರ್ಶಗಳನ್ನೇ ಪಾಲಿಸಿಕೊಂಡು ಬಂದ ...

ವಿಶ್ವ ರಂಗಭೂಮಿ ದಿನಾಚರಣೆ-2026 ಪ್ರಯುಕ್ತ ಖ್ಯಾತ ನಟ ಸಿಹಿಕಹಿ ಚಂದ್ರು ಅವರಿಗೆ 'ಸೂರ್ಯ ಪ್ರಶಸ್ತಿ

ವಿಶ್ವ ರಂಗಭೂಮಿ ದಿನಾಚರಣೆ-2026 ಪ್ರಯುಕ್ತ ಖ್ಯಾತ ನಟ   ಸಿಹಿಕಹಿ ಚಂದ್ರು ಅವರಿಗೆ 'ಸೂರ್ಯ ಪ್ರಶಸ್ತಿಯನ್ನು 'ಸೂರ್ಯ ಕಲಾವಿದರು' ಸಂಸ್ಥೆಯಿಂದ 30/3/2026 ರಂದು ಸೋಮವಾರ ಸಂಜೆ ನಾಗರಬಾವಿಯ ಕಲಾಗ್ರಾಮದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.  ಹಿರಿಯ ಕಲಾವಿದರಾದ ಶ್ರೀ ಸಿಹಿಕಹಿ ಚಂದ್ರು ಅವರು ಈ ಸಂಧರ್ಭದಲ್ಲಿ ತಾವು ರಂಗಭೂಮಿಗೆ ಬಂದಾಗ ಮೊಟ್ಟ ಮೊದಲಿಗೆ ಗುರುತಿಸಿದ್ದು ಇದೆ ಸೂರ್ಯ ಕಲಾವಿದರು ಸಂಸ್ಥೆಯ ಸಂಜಯ್ ಸೂರಿ ಅವರು ಎಂದು ಹೇಳುತ್ತಾ ಹಳೆಯ ನೆನಪುಗಳನ್ನು ಹಂಚಿಕೊಂಡರು. ಅಲ್ಲದೇ ರಾಜ್ಯೋತ್ಸವದ ಪ್ರಶಸ್ತಿಗಿಂತ ಸೂರ್ಯ ಕಲಾವಿದರು ಪ್ರಶಸ್ತಿ ನನಗೆ ಲಭಿಸಿರುವುದು ಅತ್ಯಂತ ಖುಷಿಯಾಗಿದೆ ಎಂದರು. ಸೂರ್ಯ ಕಲಾವಿದರು ಹಲವಾರು ದಶಕಗಳಿಂದ,ದೇಶ ವಿದೇಶಗಳಲ್ಲಿ ನೃತ್ಯ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುತ್ತಾರೆ. ಇದೇ ಮೊದಲಬಾರಿಗೆ, ತಮ್ಮ ಸೂರ್ಯ ಕಲೋತ್ಸವ - 2026 ಕಾರ್ಯಕ್ರಮದ ಅಡಿಯಲ್ಲಿ ಕಿರು ನಾಟಕ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಮಾರ್ಚ್ 6 ರಂದು ಈ ಸ್ಪರ್ಧೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿತ್ತು. ಈ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪುರಸ್ಕಾರಗಳ ವಿತರಣೆ ಸಮಾರಂಭ ಮಾರ್ಚ್ 20, ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಶುಕ್ರವಾರ ಜರುಗಿತು.  'ಸೂರ್ಯ ಕಲಾವಿದರು' ಸಂಸ್ಥೆಯ ಸಂಜಯ ಸೂರಿ, ವಿಕ್ರಮ್ ಸೂರಿ, ನಮಿತಾರಾವ್, ಜೊತೆಗೆ ಬಿ. ಆರ್ ಲಕ್ಷ್ಮಣ ರಾವ್ ಖ್ಯಾತ ಕ...

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಟೀಸರ್ ಬಿಡುಗಡೆ..ಏಪ್ರಿಲ್‍ 10ರಂದು ರವಿ ಶ್ರೀವತ್ಸ ನಿರ್ದೇಶನದ ಚಿತ್ರ ತೆರೆಗೆ...

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಟೀಸರ್ ಬಿಡುಗಡೆ.. ಏಪ್ರಿಲ್‍ 10ರಂದು ರವಿ ಶ್ರೀವತ್ಸ ನಿರ್ದೇಶನದ ಚಿತ್ರ ತೆರೆಗೆ... ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಲಿದೆ. ಚಿತ್ರವು ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರ ಕೆಲಸಗಳು ಶುರುವಾಗಿವೆ. ಚಿತ್ರವನ್ನು ಚಂದನ್‍ ಸುರೇಶ್‍ ರಾಜ್ಯಾದ್ಯಂತ ತಮ್ಮ ಚಂದನ್‍ ಫಿಲಂಸ್‍ ಸಂಸ್ಥೆಯ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಶನಿವಾರ ಸಂಜೆ ಮಲ್ಲೇಶ್ವರದ ಎಸ್‍.ಆರ್.ವಿ ಪ್ರಿವ್ಯೂ ಥಿಯೇಟರ್‍ನಲ್ಲಿ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ. ಹಿರಿಯ ವಿತರಕ ಸಂಜೀವ ಮೂರ್ತಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚಂದನ್‍ ಸುರೇಶ್‍, ನಿರ್ಮಾಪಕರಾದ ‘ಸೂರಪ್ಪ’ ಬಾಬು, ಕೆ. ಮಂಜು ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ರವಿ ಶ್ರೀವತ್ಸ ಈ ಚಿತ್ರ ಕೈಗೆತ್ತಿಕೊಂಡ ಕಾರಣವನ್ನು ವಿವರಿಸಿದರು. ‘ಕಥೆಯಲ್ಲಿ ಇರುವ ಪಾತ್ರಧಾರಿಗಳು ಇವತ್ತಿಗೂ ಜೀವಂತವಾಗಿದ್ದಾರೆ ಮತ್ತು ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸಮಾಜ, ವ್ಯವಸ್ಥೆ ಮತ್ತು ಆರಕ್ಷಕರು ಇವರ್ಯಾರ ಸಹಾಯವಿಲ್ಲದೆ ರಕ್ತಕಣ್ಣೀರು ಹಾಕಿಕೊಂಡು ಸುಮ್ಮನಿದ್ದಾರೆ. ನಮ್ಮನ್ನು ಹೊರಕ್ಕೆ ತರಬೇಡಿ, ನೀವೇನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ...

ಪೀಟರ್ ಚಿತ್ರದ ಪ್ರೀ-ವ್ಯೂ... ಏಪ್ರಿಲ್ 10ಕ್ಕೆ ಪೀಟರ್ ಚಿತ್ರ ಬಿಡುಗಡೆ..

ಪೀಟರ್ ಚಿತ್ರದ ಪ್ರೀ-ವ್ಯೂ  ------------------------------- ಏಪ್ರಿಲ್ 10ಕ್ಕೆ ಪೀಟರ್ ಚಿತ್ರ ಬಿಡುಗಡೆ ಲವ್ ಮಾಕ್ಟೇಲ್ ಬೆನ್ನಿಗೆ ಮತ್ತೊಂದು ಒಳ್ಳೆಯ ಕಂಟೆಂಟ್ ಪ್ರೇಕ್ಷಕರೆದುರಿಗೆ ಬರಲು ಸಿದ್ದವಾಗಿದೆ... ----------  ಕಳೆದ ಒಂದು ವಾರದಿಂದ ಚಿತ್ರರಂಗ ತುಂಬಾ ಲವಲವಿಕೆಯಿಂದ ಇದೆ. 'ಲವ್ ಮಾಕ್ಟೇಲ್ 3' ಮತ್ತು 'ಧುರಂಧರ 2' ಸಿನಿಮಾಗಳು ಥಿಯೇಟರ್‌ಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿವೆ. ಇದೇ ಹೊತ್ತಿನಲ್ಲಿ ಕುತೂಹಲ ಮೂಡಿಸಿರುವ ಮತ್ತೊಂದು ಸಿನಿಮಾ ಅಂದ್ರೆ ಅದು "ಪೀಟರ್". ಏಪ್ರಿಲ್ 10 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ವಿತರಣೆ ಮಾಡುತ್ತಿದೆ. ಕೆವಿಎನ್ ಸಂಸ್ಥೆ ಕಂಟೆಂಟ್ ಇರುವ ಸಿನಿಮಾಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಅವರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ಎಂದರೆ ಇದರಲ್ಲಿ ಏನೋ ವಿಶೇಷತೆ ಇರಲೇಬೇಕು. ​ • ​ನಿರ್ದೇಶನ: ಸುಕೇಶ್ ಶೆಟ್ಟಿ. ಇವರು ಈ ಹಿಂದೆ 'ದೂರದರ್ಶನ' ಎಂಬ ಉತ್ತಮ ಸಿನಿಮಾ ಮಾಡಿದ್ದರು.  • ​ನಿರ್ಮಾಣ: ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ (ವೃದ್ಧಿ ಸ್ಟುಡಿಯೋಸ್). ರವಿ ಹಿರೇಮಠ್ ಅವರು ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. • ​ಸಂಗೀತ: ರಿತ್ವಿಕ್ ಮುರಳ...

ಏಪ್ರಿಲ್ 10ರಂದು "ಗೊಗ್ಗಯ್ಯ" ನ ಆಗಮನ..ಚಿಕ್ಕ ಮಕ್ಕಳಿಗೆ ಹೆದರಿಸುವ ಪದವೇ ಈಗ ಸಿನಿಮಾ ಶೀರ್ಷಿಕೆ...

ಏಪ್ರಿಲ್ 10ರಂದು "ಗೊಗ್ಗಯ್ಯ" ನ ಆಗಮನ.. ಚಿಕ್ಕ ಮಕ್ಕಳಿಗೆ ಹೆದರಿಸುವ ಪದವೇ ಈಗ ಸಿನಿಮಾ ಶೀರ್ಷಿಕೆ... ಸಾಮಾನ್ಯವಾಗಿ ಚಿಕ್ಕಮಕ್ಕಳು ಊಟ ಮಾಡದಿದ್ದರೆ, ತಾಯಿ ಹೇಳುವ ಪದವೇ ಊಟ ಮಾಡು ಕಂದ. ಇಲ್ಲದಿದ್ದರೆ "ಗೊಗ್ಗಯ್ಯ" ಬರುತ್ತಾನೆ ಅಂತ. ಈಗ "ಗೊಗ್ಗಯ್ಯ" ಎಂಬ ಶೀರ್ಷಿಕೆಯಲ್ಲೇ ಸಿನಿಮಾ ನಿರ್ಮಾಣವಾಗಿದ್ದು ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಏಪ್ರಿಲ್ 10 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಾಡು ಬಿಡುಗಡೆ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.   ನಾನು ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಹಾಗೂ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ "ಗೊಗ್ಗಯ್ಯ" ಚಿತ್ರವನ್ನು ನಿರ್ದೇಶಿಸಿದ್ದೇನೆ. ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಾ ಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಸಂಗೀತ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ತನ್ಮಯ್ ಎಸ್ ಆನಂದ್ ಕುಮಾರ್ ಅವರು ಚಿತ್ರಕಥೆ, ಗೀತರಚನೆ ಹಾಗೂ ಸಂಭಾಷಣೆ ಬರೆದು ನೃತ್ಯ ನಿರ್ದೇಶನ ಮಾಡಿದ್ದರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ರಾಮನವಮಿಯ ಪ್ರಯುಕ್ತ "ನೀ ಹೆದರದಿರು ಕಂದ" ಎಂಬ ಹನುಮಂತನ ಕುರಿತಾದ ಹಾಡು ಬಿಡುಗಡೆ ಮಾಡಿದ್ದೇವೆ. ...

ತೆರೆಗೆ ಬರಲು ರೆಡಿಯಾದ ಸಿಂಪಲ್ ಸುನಿ 'ಮೋಡ ಕವಿದ ವಾತಾವರಣ' ಸಿನಿಮಾ...

ತೆರೆಗೆ ಬರಲು ರೆಡಿಯಾದ ಸಿಂಪಲ್ ಸುನಿ 'ಮೋಡ ಕವಿದ ವಾತಾವರಣ' ಸಿನಿಮಾ... ಮೋಡ ಕವಿದ ವಾತಾವರಣ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ.. ಜೂನ್ 26ಕ್ಕೆ ಸಿಂಪಲ್ ಸುನಿ ಚಿತ್ರ ರಿಲೀಸ್.. ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ ಸೃಷ್ಟಿಸಿದ್ದಾರೆ. ಅರ್ಥಾತ್ ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಗಾಗಿ ಹೊಸ ಸಿನಿಮಾ ಮಾಡಿದ್ದಾರೆ. ಅದುವೇ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 26ರಂದು ಮೋಡ ಕವಿದ ವಾತಾವರಣ ಸಿನಿಮಾ ತೆರೆಗೆ ಬರ್ತಿದೆ. ಅಶ್ವಿನ್ ಡಿಸೈನ್ ಮಾಡಿರುವ ಚೆಂದದ ಪೋಸ್ಟರ್ ಮೂಲಕ ರಿಲೀಸ್ ಡೇಟ್ ರಿವೀಲ್ ಮಾಡಲಾಗಿದೆ. ಶೀಲಮ್‌ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. 'ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮ...

ಬಿಡುಗಡೆಯಾಯಿತು ನೂರು ಜನುಮ ವಿಡಿಯೋ ಸಾಂಗ್..“

ಬಿಡುಗಡೆಯಾಯಿತು ನೂರು ಜನುಮ ವಿಡಿಯೋ ಸಾಂಗ್.. “ಸಿಂಹಪುರಿಯ ಸಿಂಹ “ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಸಿಂಹಪುರಿಯ ಚಿತ್ರತಂಡ .ಚಿತ್ರದ ನಾಯಕ ನಟರಾಗಿ ಕೆ ವೈ ಮೂರ್ತಿಯವರು ಅಭಿನಯಿಸಿದ್ದು ,ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ ಇನ್ನ ಚಿತ್ರದ ವಿಲನ್ಗಳಾಗಿ ಸುಧೀನ್ ಕುಮ್ಟ & ನಿಲೇಶ್ ಗೌಡ ಅಭಿನಯಿಸಿದ್ದು . ಸಹಕಲಾವಿದರಾಗಿ ಶಂಕರ್ ಭಟ್, ಉಮೇಶ್, ಬ್ಯಾಂಕ್ ಜನಾರ್ಧನ್, ಜೂನಿಯರ್ ದ್ವಾರಕೀಶ್ ,ಪದ್ಮ ವಸಂತಿ, ರೇಖಾದಾಸ್ ,ಪ್ರಸನ್ನ ಹಾಗೂ ಮುತ್ತುರಾಜ್ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ಸಿಂಹಪುರಿಯ ಚಿತ್ರದ ,ಕಥೆಚಿತ್ರಕಥೆ ,ನಿರ್ದೇಶನ ,ನಿರ್ಮಾಪಕರು ಕೆ ವೈ ಮೂರ್ತಿಯವರು ಮಾಡಿದ್ದು. ಛಾಯಾಗ್ರಾಹಣ ಗುರುದತ್ ಮುಸುರಿ ,ಮನೋಹರ್, ಸಿ ಎಸ್ ಸತೀಶ್ ಸಂಗೀತ ಕೃಪಾಕರ್ ,ಸಂಕಲನ ಅರುಣ್ ಬೆಂಗಳೂರು ಮೂವೀಸ್ ಸಾಹಸ ದೃಶ್ಯ ಅಲ್ಟಿಮೇಟ್ ಶಿವು ,ಜಾನಿ ಮಾಸ್ಟರ್ ಸಂಭಾಷಣೆ ಸುದರ್ಶನ್ ಇನ್ನು ಈ ಚಿತ್ರದಲ್ಲಿ ಸಾಂಗುಗಳು ಇರಲಿದ್ದು .ಸಂಗೀತ ಗಾಯಕರು ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ಪ್ರಿಯಾ ಯಾದವ್, ಸ್ನೇಹ ಪ್ರಿಯ ನಾಗರಾಜ್ , ಹಾಗೂ ನೃತ್ಯ ಸಂಯೋಜಕರಾಗಿ ( ಸಂಧನ್ ರಾಜ್ ) ರಾಜದೇವ್ ರವರು ಕಾರ್ಯನಿರ್ವಹಿಸಿದ್ದಾರೆ ‘ಚಿತ್ರ ಇದೆ ಏಪ್ರಿಲ್ 03 ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ …’ ಲಿರಿಕಲ್‍ ಹಾಡು ಬಿಡುಗಡೆ...

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ …’ ಲಿರಿಕಲ್‍ ಹಾಡು ಬಿಡುಗಡೆ... https://youtu.be/j957KPYR3xU?si=5dQ1kLI-l6AIndpw ಶಂಕರ್‍ ರಾಜ ವರ್ಮ ಅಭಿನಯದ, ನಿರ್ದೇಶನದ, ನಿರ್ಮಾಣದ ಹೊಸ ಚಿತ್ರ ಈ ಹಿಂದೆ ‘ಬ್ರಹ್ಮರಾಕ್ಷಸ’ ಎಂಬ ಚಿತ್ರ ಮಾಡಿದ್ದ ಶಂಕರ್‍ ರಾಜ ವರ್ಮ, ಇದೀಗ ಸದ್ದಿಲ್ಲದೆ ‘ಶ್ರೀಕೃಷ್ಣ’ ಎಂಬ ಇನ್ನೊಂದು ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ‘ಉಧೋ ಉಧೋ ಯಲ್ಲವ್ವ …’ ಎಂದು ಸಾಗುವ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ, ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಸಹ ಹಾಡಿದ್ದಾರೆ. ಈ ಲಿರಿಕಲ್‍ ಹಾಡು, ಇದೀಗ ಯೂಟ್ಯೂಬ್‍ನ ಸಿರಿ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ. ಶುಕ್ರವಾರ ಉತ್ಸವ್‍ ಲೆಗೆಸಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರತಂಡದವರು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್‍ ಅಡಿ ಶಂಕರ್‍ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ.ಎಂ. ಜಂಟಿಯಾಗಿ ನಿರ್ಮಿಸಿರುವ ‘ಶ್ರೀಕೃಷ್ಣ’ ಚಿತ್ರಕ್ಕೆ ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್‍ ಕೆ.ಸಿ.ಎಸ್, ಚಾಣುಕ್...

ಹೊಸ ಪ್ರತಿಭೆಗಳ ಬೆನ್ನಲುಬಾಗಿ ನಿಂತ 'ಜೋಗಿ' ಪ್ರೇಮ್.

ಹೊಸ ಪ್ರತಿಭೆಗಳ ಬೆನ್ನಲುಬಾಗಿ ನಿಂತ 'ಜೋಗಿ' ಪ್ರೇಮ್. "ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್"..  ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ.. ​ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಈಗ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ಶ್ರೀರಾಮನವಮಿ ಹಬ್ಬದ ಸುದಿನದಂದು ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ "ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್" (Phoenix Prems Studios) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ​ ಹೊಸ ಪ್ರತಿಭೆಗಳಿಗೆ ವೇದಿಕೆ.. ​ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ. ​ ಶಿಷ್ಯನ ಚಿತ್ರಕ್ಕೆ ಗುರುವಿನ ಬಂಡವಾಳ.. ​ಈ ನೂತನ ಬ್ಯಾನರ್‌ನ ಮೊದಲ ಚಿತ್ರವನ್ನು ಪ್ರೇಮ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮಂಜುನಾಥ್ ಬಿ.ಎಸ್. ನಿರ್ದೇಶಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರ...

ರಾಮ್ ಚರಣ್ ಬರ್ತಡೇಗೆ ಪೆದ್ದಿ ಗ್ಲಿಂಪ್ಸ್ ರಿಲೀಸ್... ಪೈಲ್ವಾನ್ ಅವತಾರದಲ್ಲಿ ಗ್ಲೋಬಲ್ ಸ್ಟಾರ್..

ರಾಮ್ ಚರಣ್ ಬರ್ತಡೇಗೆ ಪೆದ್ದಿ ಗ್ಲಿಂಪ್ಸ್ ರಿಲೀಸ್... ಪೈಲ್ವಾನ್ ಅವತಾರದಲ್ಲಿ ಗ್ಲೋಬಲ್ ಸ್ಟಾರ್.. https://youtu.be/n4RYUGfYGU0?si=NuNVZLnrqdGrJwEZ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪೆದ್ದಿ. ಈ ಚಿತ್ರದ ಸ್ಪೆಷಲ್ ಗ್ಲಿಂಪ್ಸ್ ಇಂದು ರಾಮ್ ಚರಣ್ ಬರ್ತಡೇ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ದೇಹ ಹುರಿಗೊಳಿಸಿ ಖಡಕ್ ಪೈಲ್ವಾನ್ ಅವತಾರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಅವರು ತಮ್ಮ ಭುಜ ಬಲದ ಪರಾಕ್ರಮ ಪ್ರದರ್ಶಿಸಿದ್ದು, ಕನ್ನಡದ ಟೀಸರ್ ಗೆ ಶಿವಣ್ಣ ಧ್ವನಿಯಾಗಿದ್ದಾರೆ. ಕುಸ್ತಿ ಅಂದರೆ ಏನೂ ಅನ್ನೋದನ್ನ ಶಿವಣ್ಣ ವಿವರಿಸಿದ್ದಾರೆ.   ಪೆದ್ದಿ ಪೈಲ್ವಾನ್ ಗೆಟಪ್ ನಲ್ಲಿ ರಾಮ್ ಚರಣ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 'ಉಪ್ಪೆನ' ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಕುಮಾರ್ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೆದ್ದಿ ಸ್ಪೋರ್ಟ್ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು...

ಹನುಮ ಜಯಂತಿಯಂದು ʻರಾಮʼನ ದರ್ಶನ: ಏಪ್ರಿಲ್ 2ರಂದು ಬಿಡುಗಡೆಯಾಗಲಿದೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದ ವಿಶೇಷ ತುಣುಕು!

ಹನುಮ ಜಯಂತಿಯಂದು ʻರಾಮʼನ ದರ್ಶನ: ಏಪ್ರಿಲ್ 2ರಂದು ಬಿಡುಗಡೆಯಾಗಲಿದೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದ ವಿಶೇಷ ತುಣುಕು! ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ರಾಮಾಯಣ’ ಚಿತ್ರದ ಬಗ್ಗೆ ಈಗ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಈ ದೃಶ್ಯಕಾವ್ಯವು 2026ರ ಬಹುನಿರೀಕ್ಷಿತ ಸಿನಿಮಾವಾಗಿದ್ದು, ಜಾಗತಿಕ ಮಟ್ಟದ ತಾಂತ್ರಿಕತೆಯಲ್ಲಿ ಮೂಡಿಬರುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ, ಭಾರತೀಯ ಪುರಾಣವನ್ನು ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ತೆರೆಮೇಲೆ ತರುವ ಸಾಹಸಕ್ಕೆ ಕೈಹಾಕಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ರಾಮನವಮಿಯ ಶುಭ ಸಂದರ್ಭದಲ್ಲಿ ಈ ಚಿತ್ರದ ಕುರಿತು ದೊಡ್ಡ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 2ರಂದು ಆಚರಿಸಲಾಗುವ ಹನುಮ ಜಯಂತಿಯ ಪವಿತ್ರ ದಿನದಂದು ‘ರಾಮ’ನ ವಿಶೇಷ ತುಣುಕನ್ನು ವಿಶ್ವಾದ್ಯಂತ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಈ ಮೂಲಕ ಕಳೆದ ಹಲವು ವರ್ಷಗಳ ಸತತ ಪರಿಶ್ರಮದ ಮೊದಲ ನೋಟವನ್ನು ಜಗತ್ತಿಗೆ ಪರಿಚಯಿಸಲು ಚಿತ್ರತಂಡ ಸಜ್ಜಾಗಿದೆ. ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ನಮಿತ್, "ರಾಮಾಯಣವು ನಮ್ಮೆಲ್ಲರ ಪರಂಪರೆಯಾಗಿದೆ. ಅತ್ಯಂತ ಜವಾಬ್ದಾರಿ ಮತ್ತು ಭಕ್ತಿಯಿಂದ ಈ ಮಹಾಕಾವ್ಯಕ್ಕೆ ಜೀವ ತುಂಬುತ್ತಿ...

‘ರಾಮರಸ’ದಲ್ಲಿ "ಗುರು ಸಿದ್ದ" ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್..

‘ರಾಮರಸ’ದಲ್ಲಿ "ಗುರು ಸಿದ್ದ" ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್.. ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರಿಂದ ಕ್ಯಾರೆಕ್ಟರ್ ಟೀಸರ್ ಅನಾವರಣ...  ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ.ಎಂ.ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗುರು ಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ ಪರಂಪರೆಯಾದ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಇತ್ತೀಚೆಗೆ ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರು "ಗುರು ಸಿದ್ದ" ಪಾತ್ರದ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ "ರಾಮರಸ" ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.     "ರಾಮರಸ" ಆರಂಭವಾದ್ದುದ್ದರ ಬಗ್ಗೆ ತಿಳಿಸಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ. "ಜಂಟಲ್ ಮ್ಯಾನ್" ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರ...

ರಾಮನವಮಿ ಸಂದರ್ಭದಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ "ಬೃಂದಾವಿಹಾರಿ" ಚಿತ್ರದ "ಹೇ ರಾಮ ರಾಮ" ಹಾಡು ಬಿಡುಗಡೆ...

ರಾಮನವಮಿ ಸಂದರ್ಭದಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ "ಬೃಂದಾವಿಹಾರಿ" ಚಿತ್ರದ "ಹೇ ರಾಮ ರಾಮ" ಹಾಡು ಬಿಡುಗಡೆ...   ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ, ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ "ಬೃಂದಾ ವಿಹಾರಿ" ಚಿತ್ರದ ಮೊದಲ ಹಾಡು ರಾಮನವಮಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ " ಹೇ ರಾಮ ರಾಮ" ಎಂಬ ಸುಮಧುರ ಗೀತೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ‌. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.  ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ "ಕೃಷ್ಣಂ ಪ್ರಣಯ ಸಖಿ" ಚಿತ್ರದ ಹಾಡುಗಳು ಬಹಳ ಜನಪ್ರಿಯವಾಗಿತ್ತು. ಆ ಚಿತ್ರದ ನಂತರ ಇವರ ಕಾಂಬಿನೇಶನ್ ನಲ್ಲಿ ಬರುತ್ತಿರುವ "ಬೃಂದಾ ವಿಹಾರಿ" ಚಿತ್ರದ ಹಾಡುಗಳು ಸಹ ಜನರ ಮೆಚ್ಚುಗೆ ಪಡೆದುಕೊಳ್ಳಲಿದೆ. ಅದಕ್ಕೆ ಈಗ ಬಿಡುಗಡೆಯಾಗಿರುವ ಮೊದಲ ಹಾಡೇ ಸಾಕ್ಷಿಯಾಗಿದೆ.           ವಿರಾಟ್...

ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ: ಪುರಾಣ ಮತ್ತು ತಂತ್ರಜ್ಞಾನದ ಅಪೂರ್ವ ಸಂಗಮ!..

ಹೊಂಬಾಳೆ ಮ್ಯೂಸಿಕ್‌ನಿಂದ 'ಕೃಷ್ಣ ಎನಬಾರದೆ' ಬಿಡುಗಡೆ: ಪುರಾಣ ಮತ್ತು ತಂತ್ರಜ್ಞಾನದ ಅಪೂರ್ವ ಸಂಗಮ!.. ಹೊಂಬಾಳೆ ಸಂಸ್ಥೆಯು ರಾಮನವಮಿಯ, ಶುಭ ಸಂದರ್ಭದಲ್ಲಿ "ಕೃಷ್ಣ ಎನಬಾರದೇ" ಎಂಬ ಅದ್ಭುತ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದು ಕೇವಲ ಹಾಡಲ್ಲ, ನಮ್ಮ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ. ಈ ಹಾಡಿನ ವಿಶೇಷತೆಗಳು ಇಲ್ಲಿವೆ: _ಕಲ್ಪನೆ ಮತ್ತು ದೃಶ್ಯ ವೈಭವ_ ಸಾಂಪ್ರದಾಯಿಕ ಪುರಾಣ ಕಥೆಗಳಿಗೆ ಕಲ್ಪನಾತೀತ 'ಫ್ಯೂಚರಿಸ್ಟಿಕ್' (Futuristic) ಸ್ಪರ್ಶ ನೀಡಲಾಗಿದೆ. ಇದರಲ್ಲಿ ಕಲ್ಕಿ ಅವತಾರದ ಕೃಷ್ಣ ಹಾಗೂ ಪ್ರಸಿದ್ಧ ಕಾಳಿಂಗ ಮರ್ದನ ಪ್ರಸಂಗಗಳನ್ನು ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ತರಲಾಗಿದೆ. ಹಳೆಯ ಬೇರು ಹೊಸ ಚಿಗುರು ಎಂಬಂತೆ, ನಮ್ಮ ಪುರಾಣಗಳನ್ನು ಇಂದಿನ ಪೀಳಿಗೆಗೆ ಹತ್ತಿರವಾಗುವಂತೆ ಇಲ್ಲಿ ಚಿತ್ರಿಸಲಾಗಿದೆ. ಸಮಯದ ನಂಟು: ಹಾಡನ್ನು ಮಧ್ಯಾಹ್ನ 12:05ಕ್ಕೆ ಬಿಡುಗಡೆ ಮಾಡಿರುವುದು ವಿಶೇಷ. ಇದು ಕೃಷ್ಣ ಭೂಮಿಯ ಮೇಲೆ ಕಳೆದ 125 ವರ್ಷಗಳ ಸಂಕೇತ ಹಾಗೂ ಶ್ರೀರಾಮನ ಜನ್ಮ ಸಮಯವಾದ ಮಧ್ಯಾಹ್ನದ ಮುಹೂರ್ತಕ್ಕೆ ಹೊಂದಿಕೆಯಾಗುವಂತೆ ಯೋಜಿಸಲಾಗಿದೆ. _ತಾಂತ್ರಿಕ ತಂಡ_ ಪರಿಕಲ್ಪನೆ: ಹೊಂಬಾಳೆ ಮ್ಯೂಸಿಕ್. ಸಂಗೀತ ಮತ್ತು ಸಾಹಿತ್ಯ: ಅನಿರುದ್ಧ ಶಾಸ್ತ್ರಿ (ಇವರೇ ಸಂಗೀತ ಸಂಯೋಜನೆ ಮತ್ತು ನಿರ್ವಹಣೆ ಮಾಡಿದ್ದಾರೆ). ಗಾಯನ: ಖ್ಯಾತ ಗಾಯಕ ವಿಜಯ್...

ಟೀಸರ್ ನಲ್ಲೇ ಕುತೂಹಲ ಮೂಡಿಸಿರುವ "ಬಾಸ್" ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ...

ಟೀಸರ್ ನಲ್ಲೇ ಕುತೂಹಲ ಮೂಡಿಸಿರುವ "ಬಾಸ್" ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ... ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆ... ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ "ಬಾಸ್" ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿದಿರುವ "ಏನಿದೆಯೊ ನಿನ್ನ ಮಾಯೆ" ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ "ಬಾಸ್" ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಡೆವಿ ಸುರೇಶ್ ಸಂಗೀತ ನೀಡಿದ್ದಾರೆ. ನವೀನ್ ಸಜ್ಜು ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇನ್ನೂ ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿದ್ದು, ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು ನಿರ್ದೇಶಕ ವಿ.ಲವ.   ಆರಂಭದಿಂದಲೂ ಪ್ರೋತ್ಸಾಹ ನೋಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಹಾಗೂ "ಬಾಸ್" ಚಿತ್ರತಂಡಕ್ಕೆ ನಾಯಕ ತನುಷ್ ಶಿವಣ್ಣ ಧನ್ಯವಾದ ಹೇಳಿದರು...