Skip to main content

Posts

Showing posts from May, 2026

ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷಮೆಯಿರಲಿ ತಂದೆ"..

ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷಮೆಯಿರಲಿ ತಂದೆ"..   ಈ ಚಿತ್ರದ ಮೂಲಕ ನಿರ್ಮಾಣ ಹಾಗೂ ನಿರ್ದೇಶನಕ್ಕೆ ನಟ ಎಂ.ಎನ್ ಸುರೇಶ್ ಎಂಟ್ರಿ...  ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರಕ್ಕೆ " ಕ್ಷಮೆಯಿರಲಿ ತಂದೆ" ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಜೂನ್ 12ರಂದು ತೆರೆಗೆ ಬರಲು‌ ಸಿದ್ದವಾಗಿರುವ ಈ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ರಾಮಕೃಷ್ಣ (ಮೇಕಪ್) ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಅನಾವರಣ ಮಾಡಿದರು. ಚಿತ್ರದ ಟ್ರೇಲರ್ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ಎಂ ಎನ್ ಸುರೇಶ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಗೆಲ್ಲಲಿ ಎಂದು ಅತಿಥಿಗಳು ಹಾರೈಸಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.   ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಧನ್ಯವಾದ ತಿಳಿಸಿ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಹ...

'ಹಲ್ಕಾ ಡಾನ್' ಅಂಗಳಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟ ಜಾನ್ ವಿಜಯ್..

'ಹಲ್ಕಾ ಡಾನ್' ಅಂಗಳಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟ ಜಾನ್ ವಿಜಯ್.. 'ಟಗರು’, ‘ಸಲಗ’ ಹಾಗೂ ‘ಯುಐ’ ಚಿತ್ರಗಳನ್ನು ನಿರ್ಮಿಸಿರುವ ಕೆ.ಪಿ.ಶ್ರೀಕಾಂತ್ 'ಹಲ್ಕಾ ಡಾನ್' ಎಂಬ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ಸಂಗತಿ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ‌ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಹಲ್ಕಾ ಡಾನ್ ಅಂಗಳಕ್ಕೆ ಬಹುಭಾಷಾ ನಟ ಜಾನ್ ವಿಜಯ್ ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಜಾನ್ ವಿಜಯ್ ಹಲ್ಕಾ ಡಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೇ ಜಾನ್ ಈ‌ ಹಿಂದಿ ಪೃಥ್ವಿ ಹಾಗೂ ಗಜಕೇಸರಿ‌ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಸ್ಪೆಷಲ್ ಪೋಸ್ಟರ್ ಮೂಲಕ ಜಾನ್ ವಿಜಯ್ ಅವರನ್ನು ಚಿತ್ರತಂಡ ಸ್ವಾಗತಿಸಿದೆ. ಕೂಲಿಂಗ್ ಗ್ಲಾಸ್ ಹಾಕಿ, ಸಿಗರೇಟ್ ಸಿದುತ್ತಾ ರಗಡ್ ಆಗಿ ಜಾನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚಲ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸಿನಿಮಾಗೆ ‘ಸಾಯಿ ಕುಮಾರ್‌ ಫ್ಯಾನ್‌’ ಎಂಬ ಅಡಿಬರಹವಿದ್ದು, ಸಾಯಿಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ...

ಬೆಂಗಳೂರಿನಲ್ಲಿ 'ಪೆದ್ದಿ' ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ..

ಬೆಂಗಳೂರಿನಲ್ಲಿ 'ಪೆದ್ದಿ' ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ.. ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ಪೆದ್ದಿ ಸಿನಿಮಾದ ಪ್ರಚಾರ ಜೋರಾಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ ಸಿನಿಮಾದ ಪ್ರಚಾರ ನಡೆದಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಟಿ ನಡೆಯಿತು. ನಟ ರಾಮ್ ಚರಣ್ ತೇಜಾಗೆ ನಟಿ ಜಾಹ್ನವಿ ಕಪೂರ್ ಹಾಗೂ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ಶಿವರಾಜ್ ಕುಮಾರ್ ಸಾಥ್ ನೀಡಿದರು. ನಟ ರಾಮ್ ಚರಣ್ ತೇಜಾ ಮಾತನಾಡಿ, ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಸಾರ್ ನನ್ನ ಗುರು ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ಮಾಡಿದ್ದು ನನಗೆ ಬಹಳ ಖುಷಿಯಾಯಿತು. ಯಾಕೆಂದರೆ ಅವರು ಬಿಟ್ಟು ಬೇರೆಯವರು ಮಾಡಿದ್ರೆ ಅಷ್ಟು ಚೆನ್ನಾಗಿ ಇರ್ತಾ ಇರಲಿಲ್ಲ. ಇವತ್ತು ಈ ಕಾರ್ಯಕ್ರಮಕ್ಕೆ ಶಿವಣ್ಣ ಸರ್ ಬಂದಿರೋದಿಕ್ಕೆ ನನಗೆ ಬಹಳ ಸಂತೋಷ ಆಗುತ್ತಿದೆ. ಅಷ್ಟೇ ಅಲ್ಲದೆ ನಮ್ಮ ಚಿತ್ರದ ನಿರ್ದೇಶಕ ಬುಚ್ಚಬಾಬು, ಜಾಹ್ನವಿ ಕಪೂರ್, ಜಗಪತಿ ಬಾಬು, ಬೊಮ್ಮನ್ ಇರಾನಿ ಸೇರಿದಂತೆ ಸಾಕಷ್ಟು ಕಲಾವಿದರು ಇದ್ದಾರೆ. ಈ ಚಿತ್ರವನ್ನ ಇದೇ ಜೂನ್ 4ಕ್ಕೆ ರಿಲೀಸ್ ಆಗುತ್ತಿದೆ ಅಂತಾ ರಾಮ್ ಚರಣ್ ತೇಜಾ ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು. ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಚಿರಂಜೀವಿ ಸರ್ ಕುಟುಂಬಕ್...

ಲೋ ನವೀನ ತಂಡಕ್ಕೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿನಂದನೆ..

ಲೋ ನವೀನ ತಂಡಕ್ಕೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿನಂದನೆ.. ಬೆಂಗಳೂರು : ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಲೋ ನವೀನ ಸಿನಿಮಾಗೆ ಇದೀಗ ದೊಡ್ಮನೆ ಕುಟುಂಬದಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಚಿತ್ರವನ್ನು ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಿನಿಮಾ ತಂಡದೊಂದಿಗೆ ದೀರ್ಘಕಾಲ ಚರ್ಚೆ ನಡೆಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ ಕಥೆ, ಸಹಜ ಅಭಿನಯ ಹಾಗೂ ಮನರಂಜನಾತ್ಮಕ ನಿರೂಪಣೆಯ ಬಗ್ಗೆ ಮಾತನಾಡಿದ ಅವರು, “ಸರಳ ಕಥೆಯನ್ನು ಜನರ ಮನಸ್ಸಿಗೆ ತಲುಪುವ ರೀತಿಯಲ್ಲಿ ಹೇಳಿರುವುದು ಚಿತ್ರದ ದೊಡ್ಡ ಶಕ್ತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ನವೀನ್ ಸಜ್ಜು ಹಾಗೂ ಚಿತ್ರತಂಡದ ಪರಿಶ್ರಮವನ್ನು ಶ್ಲಾಘಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮುಂದಿನ ದಿನಗಳಲ್ಲಿ ಚಿತ್ರದ ಬೆಳವಣಿಗೆ ಹೇಗಿರಬೇಕು, ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಕುರಿತು ಸಹ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮಂಡ್ಯ ಶೈಲಿಯ ಭಾಷೆ ಮತ್ತು ನೈಜ ಜೀವನಕ್ಕೆ ಹತ್ತಿರವಾಗಿರುವ ಪಾತ್ರಗಳು ಚಿತ್ರದ ವಿಶೇಷತೆ ಎಂದು ಹೇಳಿದ ಅವರು, “ಕನ್ನಡ ಚಿತ್ರರಂಗಕ್ಕೆ ನಿಮ್ಮಂತ ಪ್ರತಿಭಾವಂತ ಯುವ ಕಲಾವಿದರು ಅಗತ್ಯ” ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಸಿನಿಮಾ ಬಿಡುಗಡೆಯಾದ ನಂತರ ದಿನದಿಂದ ದಿನಕ್ಕೆ ಪ್ರೇಕ್ಷಕರ ಮೆಚ್ಚುಗೆ ಹೆಚ್ಚುತ್ತಿರುವ ನಡುವೆ, ದೊಡ್ಮನೆ ಕುಟುಂಬದಿಂದ ಬಂದ ಈ ಪ್ರಶಂಸೆ ಲೋ ನ...

ರಾಯರ ದಯೆಯಿಂದ ಯಶಸ್ವಿಯಾಗಿ ಪೂರ್ಣಗೊಂಡಿದೆ "NH 66" ಚಿತ್ರದ ಚಿತ್ರೀಕರಣ...

ರಾಯರ ದಯೆಯಿಂದ ಯಶಸ್ವಿಯಾಗಿ ಪೂರ್ಣಗೊಂಡಿದೆ "NH 66" ಚಿತ್ರದ ಚಿತ್ರೀಕರಣ... ರಾಯರ ದಯೆಯಿಂದ "NH66" ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ... ಮಂಗಳೂರು ಮತ್ತು ಮುಂಬೈ ನಡುವಿನ ಅನೇಕ ಸ್ಥಳಗಳಲ್ಲಿ ವ್ಯಾಪಿಸಿರುವ ವ್ಯಾಪಕ ಶೂಟಿಂಗ್ ಶೆಡ್ಯೂಲ್ ನಂತರ, ಇಡೀ ಪ್ರಧಾನ ಛಾಯಾಗ್ರಹಣವು ಈಗ ಮುಕ್ತಾಯಗೊಂಡಿದೆ. ಕಳೆದ ತಿಂಗಳು ರಾಯರ ಸನ್ನಿಧಿಯಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿತ್ತು. ಈ ಕಥೆಯನ್ನು ಜೀವಂತಗೊಳಿಸಲು ಅವಿಶ್ರಾಂತವಾಗಿ ಶ್ರಮಿಸಿದ ಪ್ರತಿಭಾನ್ವಿತ ಪಾತ್ರವರ್ಗ ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ಶ್ರುತಿ ಹರಿಹರನ್ ಮತ್ತು ತಂಡವನ್ನು ಈ ಚಿತ್ರವು ಒಟ್ಟುಗೂಡಿಸುತ್ತದೆ. ನಿರ್ದೇಶಕ ಮತ್ತು ನಿರ್ಮಾಪಕ ಮಂಜುನಾಥ ಟಿ ಆರ್ ಅವರ ನಾಯಕತ್ವದಲ್ಲಿ, ಈ ಚಿತ್ರವು ಪ್ರೇಕ್ಷಕರಿಗೆ ಆಕರ್ಷಕವಾದ ಸಿನಿಮೀಯ ರೋಡ್ ಥ್ರಿಲ್ಲರ್ ಕಥಾ ಅನುಭವವನ್ನು ನೀಡುವ ಭರವಸೆ ನೀಡುತ್ತದೆ ಎಂದು ಹೇಳುತ್ತಾರೆ.  "ಈ ಪ್ರಧಾನ ಛಾಯಾಗ್ರಹಣವು ಉತ್ಸಾಹ, ಸಮರ್ಪಣೆ ಮತ್ತು ಒಳಗೊಂಡಿರುವ ಪ್ರತಿಯೊಬ್ಬರ ಕಠಿಣ ಪರಿಶ್ರಮದಿಂದ ತುಂಬಿದ ಅದ್ಭುತ ಪ್ರಯಾಣವಾಗಿದೆ. ಈ ಮೂಲಕ ನಾನು ಅವರಿಗೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ನಿರ್ದೇಶಕ ಮಂಜುನಾಥ ಟಿ ಆರ್. ಪೋಸ್ಟ್-ಪ್ರೊಡಕ್ಷನ್‌ಗೆ ಹೋಗಲು ನಾವು ಉತ್ಸುಕರಾಗಿದ್ದೇವೆ ಮತ...

ಮೇ 30 ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದಂದು ಅದ್ದೂರಿಯಾಗಿ ನೆರವೇರಲಿದೆ ‘ಕ್ರೇಜಿ - ಬ್ರಹ್ಮ’ ರೀಯೂನಿಯನ್ ಮೆಗಾ ಇವೆಂಟ್..

ಮೇ 30 ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದಂದು ಅದ್ದೂರಿಯಾಗಿ ನೆರವೇರಲಿದೆ ‘ಕ್ರೇಜಿ - ಬ್ರಹ್ಮ’ ರೀಯೂನಿಯನ್ ಮೆಗಾ ಇವೆಂಟ್.. ಸಮಾರಂಭದ ಸ್ಥಳದ ಮುಂದೆ ರವಿಚಂದ್ರನ್-ಹಂಸಲೇಖರ 80 ಅಡಿ ಕಟೌಟ್ ಅನಾವರಣ.. ಕನ್ನಡ ಚಿತ್ರರಂಗ ಕಂಡ ಅದ್ಭುತ ಜೋಡಿ ಎಂದರೆ ರವಿಚಂದ್ರನ್‍ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್‍ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಹದಿನಾರು ವರ್ಷಗಳ ಕಾಲ ಒಟ್ಟಾಗಿ ಈ ಜೋಡಿ ಮಾಡಿದ ಮೋಡಿಗೆ ಮನ ಸೋಲದವರಿಲ್ಲ. ಇಂತಹ ದಿಗ್ಗಜ ಜೋಡಿಯ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೆನಾದಲ್ಲಿ "ಕ್ರೇಜಿ - ಬ್ರಹ್ಮ" ರೀಯೂನಿಯನ್ ಮೆಗಾ ಇವೆಂಟ್ ಅನ್ನು ಪ್ರಸ್ತುತತ್‍ ಇನ್ನೋವೇಟಿವ್‍ ಕ್ರಿಯೇಷನ್ಸ್ ಮತ್ತು ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ನ.ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ.ಚೇತನಾ‌ಆರ್. ಎಸ್ ಅವರು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.  ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಹದಿನಾರು ವರ್ಷಗಳ ಕಾಲ ಒಟ್ಟಾಗಿ ಮಾಡಿರುವ ಕಲಾಸೇವೆಯನ್ನು ನೆನಪು ಮಾಡಿಕೊಂಡು, ಆ ಜೋಡಿಯನ್ನು ಗೌರವಿಸುವ ಸಮಾರಂಭವೇ "ಕ್ರೇಜಿ - ಬ್ರಹ್ಮ". ಮೇ.30 ರ ಸಂಜೆ 6 ಗಂಟೆಗೆ ಕೆ...

ಹಾಡುಗಳ ಮುದ್ರಣ ಪೂರ್ಣಗೊಳಿಸಿದ ‘ಡಿಯರ್ ಹಸ್ಬೆಂಡ್’..

ಹಾಡುಗಳ ಮುದ್ರಣ ಪೂರ್ಣಗೊಳಿಸಿದ ‘ಡಿಯರ್ ಹಸ್ಬೆಂಡ್’.. ಸದ್ದಿಲ್ಲದೆ ‘ಡಿಯರ್ ಹಸ್ಬೆಂಡ್’ ಸಾಂಗ್ಸ್ ರೆಕಾರ್ಡಿಂಗ್ ಕಂಪ್ಲೀಟ್.. ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಹೊಸಚಿತ್ರ ‘ಡಿಯರ್ ಹಸ್ಬೆಂಡ್’.. ’ಡಿಯರ್ ಹಸ್ಬೆಂಡ್’ ಹಾಡಿಗೆ ಧ್ವನಿಯಾದ ಗಾಯಕ ನಕಾಶ್.. ಸೂರಜ್-ಶರಣ್ಯಾ-ಪ್ರವೀಣ್ ಹೊಸ ರೊಮ್ಯಾಂಟಿಕ್ ಕ್ರೈಂ-ಥ್ರಿಲ್ಲರ್ ಕಹಾನಿ... ಬೆಂಗಳೂರು, ಮೇ. 23; ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಚಿತ್ರದ ತೆರೆ ಹಿಂದಿನ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಸದ್ದಿಲ್ಲದೆ, ‘ಡಿಯರ್ ಹಸ್ಬೆಂಡ್’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯವನ್ನೂ ಕೂಡ ಮಾಡಿ ಮುಗಿಸಿದೆ.  ಇನ್ನು ‘ಡಿಯರ್ ಹಸ್ಬೆಂಡ್’ ಚಿತ್ರದ ಕೊನೆಯ ಹಾಡಿಗೆ ಬಾಲಿವುಡ್ ನ ಖ್ಯಾತ ಗಾಯಕ ನಕಾಶ್ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಈ ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯಿತು. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಮಾಲಾಶ್ರೀ ಸಿಕ್ಕಳೋ… ಮೆಲ್ಲನೆ ನಕ್ಕಳೋ…’ ಎಂದು ಆರಂಭವಾಗುವ ಟಪೋರಿ ಶೈಲಿಯ ಈ ಹಾಡಿನ ಸಾಲುಗಳಿಗೆ ಪ್ರಮೋದ ಮರವಂತೆ ಸಾಹಿತ್ಯವಿದ್ದು, ಮುಂಬೈನಿಂದ ಬೆಂಗಳೂರಿಗೆ ಬಂದ ಬಾಲಿವುಡ್ ನ ಖ್...

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ "ಟಗರು ಪಲ್ಯ" ಖ್ಯಾತಿಯ ನಿರ್ದೇಶಕ‌ ಉಮೇಶ್ ಕೆ ಕೃಪ ನಿರ್ದೇಶನದ ಎರಡನೇ ಚಿತ್ರಕ್ಕೆ ಚಾಲನೆ...

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ "ಟಗರು ಪಲ್ಯ" ಖ್ಯಾತಿಯ ನಿರ್ದೇಶಕ‌ ಉಮೇಶ್ ಕೆ ಕೃಪ ನಿರ್ದೇಶನದ ಎರಡನೇ ಚಿತ್ರಕ್ಕೆ ಚಾಲನೆ... ನಾಗೇಶ್ ವಾಸ್ಟರ್ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ "ಪುಟ್ಟಕ್ಕನ ಮಕ್ಕಳು" ಧಾರಾವಾಹಿ ಖ್ಯಾತಿಯ ಧನುಷ್...     ಎರಡು ವರ್ಷಗಳ ಹಿಂದೆ ತೆರೆಕಂಡ "ಟಗರು ಪಲ್ಯ" ನೋಡುಗರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡ ಚಿತ್ರ. ಉಮೇಶ್ ಕೆ ಕೃಪ ಈ ಚಿತ್ರದ ನಿರ್ದೇಶಕರು. ಪ್ರಸ್ತುತ ಉಮೇಶ್ ಕೆ ಕೃಪ ನಿರ್ದೇಶಿಸುತ್ತಿರುವ, ಆಕಾಂಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗೇಶ್ ವಾಸ್ಟರ್ ಅವರು ನಿರ್ಮಾಣ ಮಾಡುತ್ತಿರುವ "ಪ್ರೊಡಕ್ಷನ್ ನಂ 2" ನೂತನ ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ಬೆಳಗ್ಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದು ನನ್ನ ಎರಡನೇ ನಿರ್ದೇಶನದ ಚಿತ್ರ. ನನ್ನ ಮೊದಲ ನಿರ್ದೇಶನದ ಚಿತ್ರ "ಟಗರು ಪಲ್ಯ" ಚಿತ್ರಕ್ಕೆ ಎಲ್ಲರೂ ತೋರಿದ ಪ್ರೋತ್ಸಾಹ ಹಾಗೂ ಮೆಚ್ಚುಗೆಗೆ ಧನ್ಯವಾದ. ನನ್ನ ಎರಡನೇ ನಿರ್ದೇಶನದ ಚಿತ್ರಕ್ಕೆ ಚಾಲನೆ ದೊರಕಿದೆ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಇನ್ನೂ ಹೆಸರಿಡದ ಈ ಹೊಸ ಚಿತ್ರಕ್ಕೆ ನಾಗೇಶ್ ವಾಸ್ಟರ್ ಬಂಡವಾಳ ಹೂಡುತ್ತಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ, ಪಳನಿ ಡಿ ಸೇನಾಪತಿ ಸ...

ಅಸುರನ ಕೈಯಲ್ಲಿ ಪಾರಿಜಾತ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿರುವ ನಿಶಾ..

ಅಸುರನ ಕೈಯಲ್ಲಿ ಪಾರಿಜಾತ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿರುವ ನಿಶಾ.. ಹೊಸಬರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದು ಈ ಜಾಗದಲ್ಲಿ ನಿಶಾ ಅವರು ಕೂಡ ಒಬ್ಬರು ಇವರು ಕೂಡ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಈಗ ನಟಿಯಾಗಿ ಕೂಡ ಅಭಿನಯಿಸಿದ್ದಾರೆ . ಅಸುರನ ಕೈಯಲ್ಲಿ ಪಾರಿಜಾತ ಚಿತ್ರದಲ್ಲಿ ಕೂಡ ಅದ್ಭುತವಾಗಿ ಅಭಿನಯಿಸಿದ್ದು ತಮ್ಮ ಬ್ಯೂಟಿಫುಲ್ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .ಈ ಚಿತ್ರವನ್ನು ತೇಜಸ್ವಿ ವಿಘ್ನೇಶ್ ನಿರ್ದೇಶನ ಮಾಡಿದ್ದು ಕಾರ್ತಿಕ್ ಜಿಎನ್ ನಿರ್ಮಾಣ ಮಾಡಿದ್ದಾರೆ. ನಿನ್ನ ಕಲಾವಿದರ ಗುಂಪಿನಲ್ಲಿ  ಯಶ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಕಾರ್ತಿಕ್ ,ಪ್ರದೀಪ್ ಪೂಜಾರಿ ರಜಿನಿ ಗೌಡ ಕೆಎಸ್ ಶ್ರೀಧರ್ ಹಾಗೂ ಇನ್ನೂ ಹಲವಾರು ಕಲಾವಿದರು ಅಭಿನಯಿಸಿದ್ದಾರೆ .ನಿಶಾ ಅವರು ಇನ್ನಷ್ಟು ಕನ್ನಡ ಚಿತ್ರರಂಗದ ಹಲವು ಸಿನಿಮಾಗಳನ್ನು ಮಾಡಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಬೆಳೆಯಲಿ ಎಂಬುದೇ ನಮ್ಮ ಆಶಯ.

ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ "ರಾಯರ ದರ್ಶನ" ಆಲ್ಬಂ ಸಾಂಗ್.. ಆಗಸ್ಟ್ ನಲ್ಲಿ TNIT ಮಾಧ್ಯಮ ಪ್ರಶಸ್ತಿ ಪ್ರದಾನ..

ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ "ರಾಯರ ದರ್ಶನ" ಆಲ್ಬಂ ಸಾಂಗ್..             ಆಗಸ್ಟ್ ನಲ್ಲಿ TNIT ಮಾಧ್ಯಮ ಪ್ರಶಸ್ತಿ ಪ್ರದಾನ..  ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಮಂತ್ರಾಲಯದ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಶೇಷ ವಿಷಯಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಕೊಳ್ಳುವ "ರಾಯರ ದರ್ಶನ" ಆಲ್ಭಂ ಬಿಡುಗಡೆಗೆ ಸಿದ್ದವಾಗಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ನಿರ್ಮಾಣ ಮಾಡಿರುವ ಈ ಆಲ್ಬಂನ ಲೋಕಾರ್ಪಣೆ ಜೂನ್ 20 ರಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಹಾಗೂ ದೇಶದ ವಿವಿಧ ವಿಭಾಗದ ಗಣ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ ಹಾಗೂ ಇದೇ ಸಂಸ್ಥೆಯಿಂದ ಮಾಧ್ಯಮದವರಿಗೆ ನೀಡಲಾಗುವ "TNIT" ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ನಲ್ಲಿ ನೆರವೇರಲಿದೆ. ಈ ಎರಡು ಸಮಾರಂಭಗಳ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಲ...

ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ನಿರ್ಮಾಣ...

ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ನಿರ್ಮಾಣ... ಚಿತ್ರಕ್ಕೆ ‌ಕ್ಲ್ಯಾಪ್ ಮಾಡಿ ಶುಭ ಹಾರೈಸಿದ ಪವನ್ ಕಲ್ಯಾಣ್.. ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾ ನಿರ್ಮಾಣಕ್ಕಿಳಿದ ಕೆವಿಎನ್.. ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್.. ದಕ್ಷಿಣ ಚಿತ್ರರಂಗದಲ್ಲಿ ಕೆವಿಎನ್ ಸಂಸ್ಥೆ ಹೊಸ ಕ್ರಾಂತಿ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ ಹಾಗೂ ವಿಜಯ್ ಜೊತೆ ಜನನಾಯಗನ್ ಸಿನಿಮಾ ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೈ ಜೋಡಿಸಿದೆ. ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಹಣ ಹಾಕ್ತಿದ್ದಾರೆ. ಹೈದ್ರಾಬಾದ್‌ನಲ್ಲಿಂದು ಚಿತ್ರದ ಮುಹೂರ್ತ ನೆರವೇರಿದೆ. ಚಿರು ಸಹೋದರರು ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಕ್ಲ್ಯಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ಬಹುಕೋಟೆ ಬಜೆಟ್ ನಲ್ಲಿ ಕೆವಿಎನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಅಂದಹಾಗೇ ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ...

"ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ಕಿರಣ್ ಶ್ರೀನಿವಾಸ್..

"ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ಕಿರಣ್ ಶ್ರೀನಿವಾಸ್.. ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ಕಿರಣ್ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ. ಮಹಾನ್" ಚಿತ್ರದ ತಮ್ಮ ಪಾತ್ರದ ಬಗ್ಗೆ ಕಿರಣ್ ಶ್ರೀನಿವಾಸ್ ಈ ರೀತಿ ಹೇಳುತ್ತಾರೆ‌.   "ಮಹಾನ್" ಚಿತ್ರದ ನಿರ್ದೇಶಕ ಪಿ‌.ಸಿ.ಶೇಖರ್ ಅವರ ನಿರ್ದೇಶನದ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿತ್ತು. ಅವರ ನಿರ್ದೇಶನದ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ನಾನು ನಟಿಸಿರುವುದಕ್ಕೆ ಖುಷಿಯಾಗಿದೆ. "ಮಹಾನ್" ಚಿತ್ರದಲ್ಲಿ ನಾನು ಈವರೆಗೂ ಮಾಡಿರದ ಪಾತ್ರ ಮಾಡಿದ್ದೇನೆ. ಈ ಪಾತ್ರ ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರವಾಗುತ್ತದೆ ಎಂಬ ಭರವಸೆ ಇದೆ. ನಿರ್ದೇಶಕರು ಕಥೆ ಹೇಳಿದಾಗಲೇ ನನ್ನ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು. ಇನ್ನೂ, ಕೆಲವು ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋನಲ್ಲಿ ನಾನು ನಿರೂಪಕನಾಗಿದ್ದೆ.. ಆಗ ಅವರು ತೋರಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ಈಗ ಅವರ ಜೊತೆಗೆ ನಟಿಸಿರುವುದು ಬಹಳ ಖುಷಿಯಾಗಿ...

ನಂದಿಹೋಯಿತು ನಂದೀಶ್‌ ಎಂಬ ನಂದಾದೀಪ..

ನಂದಿಹೋಯಿತು ನಂದೀಶ್‌ ಎಂಬ ನಂದಾದೀಪ.. ಕನ್ನಡ ಪತ್ರಿಕೋದ್ಯಮದ ಲೋಕಕ್ಕೆ ಮತ್ತೊಂದು ನೋವು ಬೆಳಿಗ್ಗೆ ಎದುರಾಗಿದೆ. ಬದುಕಿನ ಉತ್ಸಾಹ, ಕನಸುಗಳ ಚಿಲುಮೆ ಮತ್ತು ಪ್ರತಿಭೆಯ ಸಂಗಮವಾಗಿದ್ದ ಯುವ ಪತ್ರಕರ್ತ ನಂದೀಶ್‌ ತೀರ್ಥಹಳ್ಳಿ ಇನ್ನು ನೆನಪಾಗಿ ಉಳಿದಿದ್ದಾರೆ ಎಂಬ ಸುದ್ದಿ ಕೇಳಿದ ಕ್ಷಣದಿಂದಲೇ ಪತ್ರಕರ್ತರ ವಲಯದಲ್ಲಿ ಮೌನದ ದುಃಖ ಮನೆಮಾಡಿದೆ. ಕೇವಲ ಮೂವತ್ತೆಂಟು ವರ್ಷ ಎನ್ನುವುದು ಬದುಕನ್ನು ಕಟ್ಟಿಕೊಳ್ಳಬೇಕಾದ ವಯಸ್ಸು. ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಇನ್ನಷ್ಟು ಎತ್ತರಕ್ಕೆ ಹಾರಬೇಕಾದ ಸಮಯ. ಆದರೆ ವಿಧಿಯ ಕ್ರೂರಾಟ ಒಂದೇ ಕ್ಷಣದಲ್ಲಿ ಎಲ್ಲವನ್ನೂ ಕಸಿದುಕೊಂಡಿದೆ. ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂದೀಶ್‌, ತಮ್ಮ ಪರಿಶ್ರಮ, ಸರಳತೆ ಮತ್ತು ಬರವಣಿಗೆಯ ಶೈಲಿಯಿಂದ ಅನೇಕರ ಗಮನ ಸೆಳೆದಿದ್ದರು. ಚಿತ್ತಾರ ಪತ್ರಿಕೆಯಲ್ಲಿ ವರದಿಗಾರನಾಗಿ ಆರಂಭಿಸಿದ ಅವರ ಪಯಣ ಉಪಸಂಪಾದಕರ ಹಂತದವರೆಗೂ ವೇಗವಾಗಿ ಸಾಗಿತ್ತು. ಕೆಲಸದ ಮೇಲಿನ ನಿಷ್ಠೆ ಮತ್ತು ಸ್ನೇಹಪರ ಸ್ವಭಾವದಿಂದ ಅವರು ಸಹೋದ್ಯೋಗಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದ್ದರು. ನಂತರದಲ್ಲಿ ನಗರ ಜೀವನದ ಗದ್ದಲದಿಂದ ದೂರಾಗಿ ತೀರ್ಥಹಳ್ಳಿಯ ಮಣ್ಣಿನ ಜೊತೆ ಬೆಸೆದುಕೊಂಡ ನಂದೀಶ್‌, ಕೃಷಿಯಲ್ಲಿ ತೊಡಗಿಸಿಕೊಂಡು ಕುಟುಂಬದೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಬದುಕಿನ ಅರ್ಥವನ್ನು ಸರಳತೆಯಲ್ಲಿ ಹುಡುಕಿಕೊಂಡಿದ್ದ ಅವರು, ಸಾಹಿತ್ಯ, ಟಿ.ವಿ ...

ಹೊಂಬಾಳೆ ಫಿಲ್ಮ್ಸ್ ಮತ್ತು ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್? ಜನ್ಮದಿನದ ಶುಭಾಶಯಗಳ ಹಿಂದೆ ಅಡಗಿದೆಯೇ ಹೊಸ ಚಿತ್ರದ ಸುಳಿವು?

ಹೊಂಬಾಳೆ ಫಿಲ್ಮ್ಸ್ ಮತ್ತು ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್? ಜನ್ಮದಿನದ ಶುಭಾಶಯಗಳ ಹಿಂದೆ ಅಡಗಿದೆಯೇ ಹೊಸ ಚಿತ್ರದ ಸುಳಿವು? ಚಿತ್ರರಂಗದಲ್ಲಿ ಒಂದು ಸಣ್ಣ ಜನ್ಮದಿನದ ಪೋಸ್ಟ್ ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ! ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮತ್ತು 'ಡ್ರಾಗನ್' ಚಿತ್ರದ ಪವರ್-ಪ್ಯಾಕ್ಡ್ ಗ್ಲಿಂಪ್ಸ್, ಸದ್ಯ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. “A Dragon Rises. A Mass Roars. What an explosive glimpse, Every frame screams MASS and MAGIC. Wishing The Devil, @jrntr a Massive Happy birthday.", ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಖಾತೆಗಳಲ್ಲಿ ಬರೆದುಕೊಂಡಿದೆ. ಆದರೆ, ಈ ಕೇವಲ ಒಂದು ಶುಭಾಶಯದ ಪೋಸ್ಟ್ ಅಲ್ಲ, ಇದರ ಹಿಂದೆ ದೊಡ್ಡದೊಂದು ಸಿನಿಮೀಯ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರಾಗನ್' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಹೀಗಿದ್ದರೂ, ಹೊಂಬಾಳೆ ಫಿಲ್...

"ಅಡಿಕ್ಷನ್" ಚಿತ್ರ ಬಿಡುಗಡೆಗೆ ಸಿದ್ದ..

"ಅಡಿಕ್ಷನ್" ಚಿತ್ರ ಬಿಡುಗಡೆಗೆ ಸಿದ್ದ.. ನೈಜಘಟನೆ ಆಧರಿಸಿರುವ ಈ ಮಕ್ಕಳ ಚಿತ್ರದ ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟನೆ...                                         ಎಸ್ .ಬಿ .ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ಬೃಂದಾ ಎನ್ ಜಯರಾಮ್ ರವರು ನಿರ್ಮಾಣ ಮಾಡಿರುವ "ಅಡಿಕ್ಷನ್" ಎಂಬ ಕನ್ನಡ ಚಲನಚಿತ್ರವು ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಲನಚಿತ್ರ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಇದು ಮಕ್ಕಳಲ್ಲಿನ ಮೊಬೈಲ್ ಚಟದ ಕುರಿತ ಕಥೆಯಾಗಿದ್ದು, ನೈಜ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ರಚಿಸಲಾಗಿದೆ. ಅಜಯ್ ಕುಮಾರ್ ಎ ಜೆ ರವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ನಿರ್ದೇಶಕರಿಗೆ ಎರಡನೇ ಚಿತ್ರ.    ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸುಂದರ ಕೃಷ್ಣ ಅರಸ್ ರವರ ಮೊಮ್ಮಗ, ನಾಗೇಂದ್ರ ಅರಸ್ ರವರ ಮಗ ವಿಧು ಸುಂದರಕೃಷ್ಣ ಅರಸ್ ನಟಿಸಿದ್ದಾರೆ. ಈ ಮೂಲಕ ಸುಂದರಕೃಷ್ಣ ಅರಸ್ ಅವರ ಮೂರನೇ ತಲೆಮಾರಿನ ಕುಡಿ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ .. ಹಾಗೆಯೇ ಅತಿಥಿ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ "ಲವ್ ಯು ಮುದ್ದು" ಖ್ಯಾತಿಯ ಸಿದ್ದು ಮೂ...