Skip to main content

Posts

Showing posts from June, 2026

ಪುಣೆಯಲ್ಲಿ ಕನ್ನಡ ನಟ ಕಮಲ್ ರಾಜ್ (ಕಲೀಂ ಪಾಷಾ) ಅವರ ಅದ್ಭುತ ಸಂಗೀತ ಕಾರ್ಯಕ್ರಮ; ಪ್ರತಿಷ್ಠಿತ “ಮಹಾರಾಷ್ಟ್ರ ಗೌರವ ಸಮ್ಮಾನ್” ಪ್ರಶಸ್ತಿ ಪ್ರದಾನ

ಪುಣೆಯಲ್ಲಿ ಕನ್ನಡ ನಟ ಕಮಲ್ ರಾಜ್ (ಕಲೀಂ ಪಾಷಾ) ಅವರ ಅದ್ಭುತ ಸಂಗೀತ ಕಾರ್ಯಕ್ರಮ; ಪ್ರತಿಷ್ಠಿತ “ಮಹಾರಾಷ್ಟ್ರ ಗೌರವ ಸಮ್ಮಾನ್” ಪ್ರಶಸ್ತಿ ಪ್ರದಾನ ಪುಣೆ | ಜೂನ್ 29, 2026 ಕನ್ನಡ ಚಿತ್ರರಂಗದ ನಟ, ಗಾಯಕ ಹಾಗೂ ವೇದಿಕೆ ಕಲಾವಿದ ಕಮಲ್ ರಾಜ್ (ಕಲೀಂ ಪಾಷಾ) ಅವರು ಪುಣೆಯ ಸಿಂಬಯೋಸಿಸ್ ಇಶಾನ್ಯ ಆಡಿಟೋರಿಯಂನಲ್ಲಿ ನಡೆದ ಭವ್ಯ ಸಂಗೀತ ಕಾರ್ಯಕ್ರಮದಲ್ಲಿ ದಿವಂಗತ ಗಝಲ್ ಸಾಮ್ರಾಟ್ ಪಂಕಜ್ ಉದಾಸ್ ಅವರಿಗೆ ಭಾವಪೂರ್ಣ ಸಂಗೀತ ನಮನ ಸಲ್ಲಿಸಿ ಸಾವಿರಾರು ಸಂಗೀತಾಭಿಮಾನಿಗಳ ಮನ ಗೆದ್ದರು. ತಮ್ಮ ಮಧುರ, ಮೃದುವಾದ ಧ್ವನಿ, ಭಾವಪೂರ್ಣ ಗಾಯನ ಹಾಗೂ ಅದ್ಭುತ ವೇದಿಕೆ ನಿರೂಪಣೆಯ ಮೂಲಕ ಕಲೀಂ ಪಾಷಾ ಅವರು ಪಂಕಜ್ ಉದಾಸ್ ಅವರ ಅಮರ ಗಝಲ್‌ಗಳಿಗೆ ಜೀವ ತುಂಬಿದರು. ಮನಮುಟ್ಟುವ ಶಾಯರಿ, ಹಾಸ್ಯ, ಜೀವನಾನುಭವಗಳು ಮತ್ತು ಅಮರ ಗೀತೆಗಳ ಸುಂದರ ಸಂಗಮವು ಕಾರ್ಯಕ್ರಮವನ್ನು ಸಂಗೀತಾಭಿಮಾನಿಗಳ ಪಾಲಿಗೆ ಮರೆಯಲಾಗದ ಅನುಭವವನ್ನಾಗಿ ಮಾಡಿತು. ಕಾರ್ಯಕ್ರಮದ ಪ್ರತಿಯೊಂದು ಹಾಡಿಗೂ ಪ್ರೇಕ್ಷಕರು ಭರ್ಜರಿ ಕರತಾಡನ, ಎದ್ದು ನಿಂತು ಗೌರವ ಸಲ್ಲಿಸುವ ಮೂಲಕ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಪುಣೆಯಲ್ಲಿ ನಡೆದ ಅತ್ಯಂತ ಯಶಸ್ವಿ ಹಾಗೂ ಸ್ಮರಣೀಯ ಸಂಗೀತ ಸಂಜೆಗಳಲ್ಲಿ ಒಂದಾಗಿ ದಾಖಲೆಯಾಯಿತು. ಈ ವಿಶೇಷ ಸಂದರ್ಭದಲ್ಲಿ ಕಲೀಂ ಪಾಷಾ ಅವರಿಗೆ ಸಂಗೀತ, ಪ್ರದರ್ಶನ ಕಲೆ ಹಾಗೂ ಭಾರತೀಯ ಸಂಗೀತ ಪರಂಪರೆಯನ್ನು ಜೀವಂತವಾಗಿಡುವಲ್...

ಟ್ರೇಲರ್ ನಲ್ಲಿ "ಸರ್ವಾಂತರ್ಯಾಮಿ”..

ಟ್ರೇಲರ್ ನಲ್ಲಿ "ಸರ್ವಾಂತರ್ಯಾಮಿ”.. ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಕುತೂಹಲ ಮೂಡಿಸಿದ್ದು, ಚಿತ್ರ ಜುಲೈ 17 ರಂದು ತೆರೆಗೆ ಬರಲಿದೆ. ಈ ಚಿತ್ರಕ್ಕೆ ನಿರ್ದೇಶಕ ಹಾಗು ಗೀತರಚನೆಕಾರ ಕೆ.ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ. ಟ್ರೇಲರ್ ಅನಾವರಣ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ ಕಪನಿಪಾಳ್ಯ ಮಾತನಾಡಿ, "ಸರ್ವಾಂತರ್ಯಾಮಿ", ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಮೊಬೈಲ್ ನಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಜನರ ಮುಂದೆ ತಂದಿಡುವ ಚಿತ್ರವೂ ಹೌದು. ಸಿನಿಮಾಗಳಿಗಾದರೆ ಸೆನ್ಸಾರ್ ಇದೆ. ಈ ಚಿತ್ರ ಮಕ್ಕಳು ನೋಡಬಹುದು. ನೋಡಬಾರದು ಅಂತ ಸೆನ್ಸಾರ್ ಮಂಡಳಿಯವರು ತೀರ್ಮಾನ ಮಾಡುತ್ತಾರೆ. ಆದರೆ ಈ ನಿರ್ಬಂಧ ಮೊಬೈಲ್ ಗಿಲ್ಲ. ಅದರಿಂದ ಹೆಚ್ಚಿನ ಮಕ್ಕಳ ಜೀವನ ಹಾಳಾಗುತ್ತಿದೆ. ಮಕ್ಕಳು ಮಾತ್ರವಲ್ಲದೆ, ದೊಡ್ಡವರ ಮೇಲೂ ಇದರ ಪರಿಣಾಮ ಸಾಕಷ್ಟಿದೆ. ಹಾಗಾಗಿ ಕೆಲವು ಕಡೆ ಸ್ಮಾರ್ಟ್ ಫೋನ್ ಬಳಸದೆ, ಕೀ ಪ್ಯಾಡ್ ಮೊಬೈಲ್ ಬಳಸಲು ನಿರ್ಧಾರ ಮಾಡಿದ್ದಾರೆ. ಇನ್ನೂ, ಕೆಲವು ಕಡೆ ಮೊಬೈಲ್ ನೋಡಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರಗಳು ಎಲ್ಲಾ ಕಡೆ ಜಾರಿಯಾಗಲಿ...

ಮತ್ತೆ ಒಂದಾದ 'ಪ್ರೇಮಂ' ಜೋಡಿ..ನಿವಿನ್ ಪೌಲಿ 50ನೇ ಸಿನಿಮಾ 'ವಿಜಯಂ'..ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್..

ಮತ್ತೆ ಒಂದಾದ 'ಪ್ರೇಮಂ' ಜೋಡಿ.. ನಿವಿನ್ ಪೌಲಿ 50ನೇ ಸಿನಿಮಾ 'ವಿಜಯಂ'.. ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್.. ಮಲಯಾಳಂ ಸಿನಿಮಾ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಹೊರ ಬಿದ್ದಿದೆ. 12 ವರ್ಷಗಳ ನಂತರ, ಬ್ಲಾಕ್ಬಸ್ಟರ್ ಜೋಡಿ ಎನಿಸಿಕೊಂಡಿರುವ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಅವರ "ವಿಜಯಂ" ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ನೇರಂ ಮತ್ತು ಪ್ರೇಮಂ ಚಿತ್ರದ ಅದ್ಭುತ ಯಶಸ್ಸಿನ ನಂತರ, ಈ ಜೋಡಿ ಮತ್ತೊಮ್ಮೆ ರೋಮಾಂಚಕಾರಿ ಪ್ರಾಜೆಕ್ಟ್ ಗೆ ಕೈಜೋಡಿಸಿದ್ದಾರೆ. "ವಿಜಯಂ", ನಿವಿನ್ ಪೌಲಿ ಅವರ 50 ನೇ ಸಿನಿಮಾ. ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳು ಸಮ್ಮುಖದಲ್ಲಿ ಶೀರ್ಷಿಕೆ ವೀಡಿಯೊವನ್ನು ಅನಾವರಣಗೊಳಿಸಲಾಯಿತು. ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವನ್ನು ಆಲ್ಫೋನ್ಸ್ ಪುತ್ರೇನ್ ಬರೆದು, ನಿರ್ದೇಶಿಸುವುದರ ಜೊತೆಗೆ ಸಂಕಲನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪೌಲಿ ಜೂನಿಯರ್ ಪಿಕ್ಚರ್ಸ್ ಜೊತೆಗೆ ಸಿನೆಹೋಲಿಕ್ಸ್ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ನಿರ್ಮಾಣ ಮಾಡುತ್ತಿದ್ದಾರೆ. ವಿಜಯಂ ಚಿತ್ರದ ಹಿನ್ನೆಲೆ ಸಂಗೀತವನ್ನು ಕೇರಳ ಮೂಲದ ಸ್ಟೀವ್ ಕೊಟ್ಟೂರ್ ಸಂಯೋಜಿಸಿದ್ದಾರೆ, ಅವರು ಈ ಹಿಂದೆ ಬ್ಲಾಕ್...

ಜಾಗತಿಕ ಮಹಿಳಾ ನಾಯಕರಾದ ಕಿರಣ್ ಮಜುಂದಾರ್ ಶಾ ಮತ್ತು ಗೀತಾ ಗೋಪಿನಾಥ್ ಅವರಿಗೆ ನಟ ಹಾಗೂ ರಾಜಕಾರಣಿ ಅನಿಲ್ ಶೆಟ್ಟಿ ಅಭಿನಂದನೆ; ಮಹಿಳೆಯರಿಗೆ ಸಮಾನ ಅವಕಾಶಗಳಿಗಾಗಿ ಕರೆ..

ಜಾಗತಿಕ ಮಹಿಳಾ ನಾಯಕರಾದ ಕಿರಣ್ ಮಜುಂದಾರ್ ಶಾ ಮತ್ತು ಗೀತಾ ಗೋಪಿನಾಥ್ ಅವರಿಗೆ ನಟ ಹಾಗೂ ರಾಜಕಾರಣಿ ಅನಿಲ್ ಶೆಟ್ಟಿ ಅಭಿನಂದನೆ; ಮಹಿಳೆಯರಿಗೆ ಸಮಾನ ಅವಕಾಶಗಳಿಗಾಗಿ ಕರೆ .. ಲಂಡನ್, ಯುಕೆ: ನಟ, ನಿರ್ಮಾಪಕ ಹಾಗೂ ರಾಜಕಾರಣಿ ಅನಿಲ್ ಶೆಟ್ಟಿ, ಭಾರತದ ಹೆಮ್ಮೆಯ ಜಾಗತಿಕ ಮಹಿಳಾ ನಾಯಕರಾದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹಾಗೂ ಐಎಂಎಫ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್ ಅವರನ್ನು ಅಭಿನಂದಿಸಿ ಭಾವಪೂರ್ಣ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಆಯೋಜಿಸಿದ್ದ ಯುಕೆ ಇಂಡಿಯಾ ಅವಾರ್ಡ್ಸ್ ಸಮಾರಂಭದಲ್ಲಿ ಕಿರಣ್ ಮಜುಂದಾರ್ ಶಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನಿಲ್ ಶೆಟ್ಟಿ ಇಬ್ಬರು ನಾಯಕರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು. ತಮ್ಮ ಪೋಸ್ಟ್‌ನಲ್ಲಿ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆಯಿಂದ ಪ್ರತಿನಿಧಿಸಿರುವ ಈ ಇಬ್ಬರು ಸ್ವಯಂ ನಿರ್ಮಿತ ಮಹಿಳಾ ಸಾಧಕರಿಗೆ ಅನಿಲ್ ಗೌರವ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಸಮಾಜವು ಕಾಣದ ಮಿತಿಗಳನ್ನು ವಿಧಿಸದೆ, ಸಮಾನ ಅವಕಾಶಗಳನ್ನು ನೀಡಿದರೆ ಅವರು ವಿಶ್ವವನ್ನು ಇನ್ನಷ್ಟು ಉತ್ತಮ ಭವಿಷ್ಯದತ್ತ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವಕಾಶಗಳು ಲಿಂಗದ ಆಧಾರದ ಮೇಲೆ ಅಲ್ಲ, ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯ ಆಧಾರ...

"ಮಹಾನ್" ಚಿತ್ರದಲ್ಲಿ ಡಾ||ಶಿವರಾಜಕುಮಾರ್... ‌ವಿಜಯ ರಾಘವೇಂದ್ರ ಅಭಿನಯದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಕರುನಾಡ ಚಕ್ರವರ್ತಿ...

"ಮಹಾನ್" ಚಿತ್ರದಲ್ಲಿ ಡಾ||ಶಿವರಾಜಕುಮಾರ್... ‌ವಿಜಯ ರಾಘವೇಂದ್ರ ಅಭಿನಯದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಕರುನಾಡ ಚಕ್ರವರ್ತಿ... ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ "ಮಹಾನ್" ಚಿತ್ರದ ವಿಶೇಷಪಾತ್ರದಲ್ಲಿ ಕರುನಾಡ ಚಕ್ರವರ್ತಿ ಡಾ||ಶಿವರಾಜಕುಮಾರ್ ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಬಹಳ ವರ್ಷಗಳ ನಂತರ ಶಿವರಾಜಕುಮಾರ್ ಹಾಗೂ ವಿಜಯ ರಾಘವೇಂದ್ರ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   "ಮಹಾನ್" ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಮುಖ್ಯ ಪಾತ್ರಗಳಾಗಿರುತ್ತದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ, ನಮಗೆ ಬುದ್ದಿ ಹೇಳಲು ತಂದೆ - ತಾಯಿ ಇರುತ್ತಾರೆ. ಅಂತಹುದೇ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ ಅಲ್ಲಿನ ತೊಂದರೆಗಳನ್ನು ತಿದ್ದಲು "ಮಹಾನ್" ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ "ಮಹಾನ್" ವ್ಯಕ್ತಿಯ ಪಾತ್ರದಲ್ಲಿ ಡಾ||ಶಿವರಾಜಕುಮಾರ್ ಅಭಿನಯಿಸಿದ್ದಾರೆ. "ಮಹಾನ್" ಚಿತ್ರದಲ್ಲಿ ಹಿರಿಯ ವಕೀಲರಾಗಿ ಶಿವರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಈ ಪಾತ್ರ ತುಂಬಾ ಪ್ರಮುಖವಾದದ್ದು. ಎಲ್ಲಾ ...

ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಸಂಚಲನ: ಹೊಂಬಾಳೆ ಫಿಲ್ಮ್ಸ್, ನಟ ಸೂರ್ಯ ಹಾಗೂ ‘ಜೈ ಭೀಮ್’ ನಿರ್ದೇಶಕ ಜ್ಞಾನವೇಲ್ ಅಪೂರ್ವ ಸಂಯೋಜನೆ ಘೋಷಣೆ!

ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಸಂಚಲನ: ಹೊಂಬಾಳೆ ಫಿಲ್ಮ್ಸ್, ನಟ ಸೂರ್ಯ ಹಾಗೂ ‘ಜೈ ಭೀಮ್’ ನಿರ್ದೇಶಕ ಜ್ಞಾನವೇಲ್ ಅಪೂರ್ವ ಸಂಯೋಜನೆ ಘೋಷಣೆ! ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಚಿತ್ರಕ್ಕಾಗಿ ಜನಪ್ರಿಯ ನಟ ಸೂರ್ಯ, ನಟಿ ಕಾಯಾದು ಲೋಹರ್ ಮತ್ತು ಖ್ಯಾತ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದು, ಪ್ರಭಾವಶಾಲಿ ಕಥಾಹಂದರ ಹಾಗೂ ಭವ್ಯ ದೃಶ್ಯವೈಭವದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದ ಯಶಸ್ವಿ ನಟರಲ್ಲಿ ಒಬ್ಬರಾದ ಸೂರ್ಯ, ಕಳೆದ ಎರಡು ದಶಕಗಳಿಂದ ತಮ್ಮ ವೈವಿಧ್ಯಮಯ ನಟನೆ ಮತ್ತು ಧೀಮಂತ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿಗಳು ಹಾಗೂ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು, ಕೇವಲ ನಟನೆಯಷ್ಟೇ ಅಲ್ಲದೆ ಉತ್ತಮ ಸಂದೇಶವಿರುವ ಸಿನಿಮಾಗಳನ್ನು ನಿರ್ಮಿಸುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ಕೈಜೋಡಿಸಿರುವ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಅವರು ತಮ್ಮ ‘ಜೈ ಭೀಮ್’ ಚಿತ್ರದ ಮೂಲಕ ದೇಶಾದ್ಯಂತ ಅಪಾರ ಪ್ರಶಂಸೆ ಗಳಿಸಿದವರು. ಸಾಮಾಜಿಕ ಕಳಕಳಿ, ಭಾವನಾತ್ಮಕ ಆಳ ಮತ್ತು ದಿಟ್ಟ ಕಥಾಹಂದರಕ್ಕೆ ಹೆಸರಾಗಿರುವ ಜ್ಞಾನವೇಲ್, ಇಂದಿನ ಭಾರತೀಯ ಚಿತ್ರರಂಗದ ವಿಶಿಷ್ಟ ನಿರ್ದೇಶಕರಲ್ಲಿ...

ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ "ರಕ್ಕಿ" ಚಿತ್ರದ ಟ್ರೇಲರ್ ಅನಾವರಣ...

ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ "ರಕ್ಕಿ" ಚಿತ್ರದ ಟ್ರೇಲರ್ ಅನಾವರಣ... ಅಶ್ವಿನಿ ಪುನೀತ್ ರಾಜಕುಮಾರ್ ಅವರ ಆಶೀರ್ವಾದದೊಂದಿಗೆ, ಎಸ್ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಲಿಗ್ರಾಮ ಸುರೇಶ್ ಅವರು ನಿರ್ಮಿಸಿರುವ, ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ರಕ್ಕಿ ನಾಯಕನಾಗಿ ನಟಿಸಿರುವ "ರಕ್ಕಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪಿ.ಆರ್.ಕೆ ಆಡಿಯೋದಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಈ ಟ್ರೇಲರ್ ಲಭ್ಯವಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. .  ಜರ್ಮನಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಾಲಿಗ್ರಾಮ ಮೂಲದ ಸುರೇಶ್ ಅವರು ನನಗೆ ಇಪ್ಪತ್ತು ವರ್ಷಗಳ ಸ್ನೇಹಿತರು. ಅವರ ಮಗ ರಕ್ಕಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾನು ಸುರೇಶ್ ಅವರ ಬಳಿ ಎರಡು ಕಥೆ ಹೇಳಿದ್ದೆ. ಅವರು ಈ ಕಥೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿ. ಅವರು ಒಪ್ಪುವ ಕಥೆಯನ್ನು ಸಿನಿಮಾ ಮಾಡೋಣ ಎಂದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಕಥೆ ಕೇಳಿ ಚೆನ್ನಾಗಿದೆ ಅಂತ ಹೇಳಿದರು. ನಂತರ ಚಿತ್ರ ಆರಂಭವಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಹೂರ್ತದ ದಿನ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ ಅವ...

ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣ...

ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣ...  ಜುಲೈ 3 ರಂದು ತೆರೆಗೆ ಬರಲಿದೆ ವಿನಯ್ ರಾಜ್ ಕುಮಾರ್ ಅಭಿನಯದ ಈ ಚಿತ್ರ...               ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ - ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ - ಮೇಘ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ "ಗ್ರಾಮಾಯಣ" ಚಿತ್ರದ‌ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ದುನಿಯಾ ವಿಜಯ್ ಹಾಗೂ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣವಾಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯವ ರಾಜಕುಮಾರ್, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, " ಗ್ರಾಮಾಯಣ"ಕ್ಕೆ ಶುಭ ಕೋರಿದರು.    ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದು‌ ಟ್ರೇಲರ್ ಬಿಡುಗಡೆ ಮಾತನಾಡಿದ ನಟ ದುನಿಯಾ ವಿಜಯ್, ಟ್ರೇಲರ್ ಅದ್ಭುತವಾಗಿದೆ. ದೇವನೂರು ಚಂದ್ರು ಉತ್ತಮ ನಿರ್ದೇಶಕ.‌ ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ.‌ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ‌ ಇಡೀ "ಗ್ರಾಮಾಯಣ" ತಂಡಕ್ಕೆ ಒಳ್ಳೆಯದಾಗಲಿ ಎಂದರು....

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ಚಿತ್ರ ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥ..

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ಚಿತ್ರ ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥ.. ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರು ತಮ್ಮ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಆಪ್ತ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಸರಳ ಹಾಗೂ ಅತ್ಯಂತ ಸುಂದರ ಸಮಾರಂಭದಲ್ಲಿ ಉಭಯ ಕುಶಲೋಪರಿಗಳೊಂದಿಗೆ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಿನಿಮಾ ಹಾಗೂ ಸಾಂಪ್ರದಾಯಿಕ ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿರುವ ಈ ಜೋಡಿಯ ನಿಶ್ಚಿತಾರ್ಥದ ವೇದಿಕೆಯು ಬಿಳಿ ಹೂವುಗಳ ಅಲಂಕಾರ ಹಾಗೂ ಅತ್ಯಾಧುನಿಕ ಶೈಲಿಯ ವಿನ್ಯಾಸದಿಂದ ಕಂಗೊಳಿಸುತ್ತಿತ್ತು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಈ ಇಬ್ಬರು ಪ್ರಭಾವಿ ವ್ಯಕ್ತಿಗಳು ಬಾಳ ಬಂಧನಕ್ಕೆ ಬಲಗಾಲಿಡಲು ಅಣಿಯಾಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ ಬ್ಯೂಟಿ ಶರ್ಮಿಳಾ ಮಾಂಡ್ರೆ.. ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಶರ್ಮಿಳಾ ಮಾಂಡ್ರೆ ಅವರು 2007ರಲ್ಲಿ ಬಿಡುಗಡೆಯಾದ ‘ಸಜನಿ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆನಂತರ ‘ಕೃಷ್ಣ’, ‘ನವಗ್ರಹ’, ‘ಸ್ವಯಂವರ’, ‘ಆಕೆ’, ‘ಗಾಳಿಪಟ 2’, ‘ಪೌಡರ್’ ಹಾಗೂ ಇತ್ತೀಚಿನ ‘ಡೆವಿಲ್’ ಸೇರಿದಂತೆ ಹಲವು ಯಶಸ್ವಿ ಚ...

ಮಂತ್ರಾಲಯದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು 'ರಾಯರ ದರ್ಶನ' ಅಲ್ಬಮ್ ಸಾಂಗ್...

ಮಂತ್ರಾಲಯದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು 'ರಾಯರ ದರ್ಶನ' ಅಲ್ಬಮ್ ಸಾಂಗ್... ಈ ವರ್ಷದ ಟಿ.ಎನ್.ಐ.ಟಿ ಮೊದಲ ಮೀಡಿಯಾ ಅವಾರ್ಡ್ ಶ್ರೀಸುಬುಧೇಂದ್ರ ತೀರ್ಥರಿಗೆ ಪ್ರದಾನ... ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ ಅರ್ಪಿಸುವ 'ರಾಯರ ದರ್ಶನ' ಅಲ್ಬಮ್ ಸಾಂಗ್ ಅನಾವರಣ ಸಮಾರಂಭ ಇತ್ತೀಚೆಗೆ ಮಂತ್ರಾಲಯದಲ್ಲಿ ನಡೆದ ಅದ್ದೂರಿ ನೆರವೇರಿತು. ಈ ಹಾಡನ್ನು ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಬಿಡುಗಡೆ ಮಾಡಿ ಅನುಗ್ರಹ ಸಂದೇಶ ನೀಡಿದರು.  ಜಾತ್ಯತೀತವಾಗಿ ಎಲ್ಲಾ ರಾಯರ ಭಕ್ತರ ಸಹಕಾರದಿಂದ "ರಾಯರ ದರ್ಶನ" ಆಲ್ಬಂ ಸಾಂಗ್ ಬಹಳ ಚೆನ್ನಾಗಿ ಮೂಡಿಬಂದಿದೆ. ರಘು ಭಟ್ ನಿರ್ದೇಶನದಲ್ಲಿ ಹಾಗೂ ಸುಗುಣ ಭಟ್ ಅವರ ನಿರ್ಮಾಣದಲ್ಲಿ, ಅಜನೀಶ್ ಲೋಕನಾಥ್ ಅವರ ಸ್ವರ ಸಂಯೋಜನೆಯಲ್ಲಿ ಹಾಗೂ ಅಬ್ಬಿ ವಿ ಅವರ ಗಾಯನದಲ್ಲಿ ಅದ್ಭುತವಾಗಿ ಮೂಡಿಬಂದಿರುವ ಈ ಆಲ್ಬಂನಲ್ಲಿ ಬರೀ ಹಾಡನ್ನು ಮಾತ್ರ ತೋರಿಸದೆ, ಮಠದಲ್ಲಿ ನಡೆಯುವ ಪೂಜೆ, ದೈನಂದಿನ ಉತ್ಸವ ಹಾಗೂ ವಾರ್ಷಿಕ ಉತ್ಸವಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಈ ಆಲ್ಬಂ ಸಾಂಗ್ ಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ರಾಯರ ಭಕ್ತರಿಗೆ ಗುರುರಾಯರ ಅನುಗ್ರಹ ಸದಾ ಇರಲಿ ಎಂದು ಶ್ರೀಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು.   ...

ಬಾಹುಬಲಿ’ ದಿನಗಳ ಕಠಿಣ ಜರ್ನಿ ನೆನೆದು ಭಾವುಕರಾದ ರೆಬೆಲ್ ಸ್ಟಾರ್ ಪ್ರಭಾಸ್: ‘ಅದೊಂದು ಯುದ್ಧದಂತಿತ್ತು’!

ಬಾಹುಬಲಿ’ ದಿನಗಳ ಕಠಿಣ ಜರ್ನಿ ನೆನೆದು ಭಾವುಕರಾದ ರೆಬೆಲ್ ಸ್ಟಾರ್ ಪ್ರಭಾಸ್: ‘ಅದೊಂದು ಯುದ್ಧದಂತಿತ್ತು’! ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಬಾಹುಬಲಿ' ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ 'BaahubaliTheTorchbearer' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಆ ದಿನಗಳಲ್ಲಿ ಇಡೀ ಚಿತ್ರತಂಡ ಮತ್ತು ನಿರ್ಮಾಪಕರು ಎದುರಿಸಿದ ಅತಿ ದೊಡ್ಡ ರಿಸ್ಕ್ ಹಾಗೂ ಕಠಿಣ ಜರ್ನಿಯನ್ನು ನೆನೆದು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ಬಾಹುಬಲಿ ಸಿನಿಮಾದ ದಿನಗಳನ್ನು ಮೆಲುಕು ಹಾಕಿದ ಅವರು, ಆ ಇಡೀ ಪ್ರಯಾಣ ತಮಗೆ ಒಂದು ಭೀಕರ ಯುದ್ಧದಂತೆ ಭಾಸವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ​ಚಿತ್ರ ಬಿಡುಗಡೆಯಾದ ಮೊದಲ ದಿನ ಎದುರಾದ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಪ್ರಭಾಸ್, ಅಂದು ಚಿತ್ರದ ನಿರ್ಮಾಪಕರು ತಮ್ಮ ಇಡೀ ಜೀವನವನ್ನೇ ಪಣಕ್ಕಿಟ್ಟಿದ್ದರು ಎಂದು ಹೇಳಿದ್ದಾರೆ. "ಒಂದೊಮ್ಮೆ ಅಂದು ಏನಾದರೂ ಹೆಚ್ಚುಕಮ್ಮಿ ಆಗಿ ಸಿನಿಮಾ ಸೋತಿದ್ದರೆ, ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಮತ್ತು ನಿರ್ದೇಶಕ ರಾಜಮೌಳಿ ಬೀದಿಗೆ ಬರಬೇಕಾಗುತ್ತಿತ್ತು. ಅವರ ಇಡೀ ಜೀವನವೇ ತಲೆಕೆಳಗಾಗುತ್ತಿತ್ತು" ಎಂದು ಹೇಳುವ ಮೂಲಕ, ಸಿನಿಮಾಕ್ಕಾಗಿ ಅವರು ತೆಗೆದುಕೊಂಡಿದ್ದ ಅ...

ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ನಿಂದ ‘ಕೆಂಪಾಂಬುಧಿ’; ಟೀಸರ್ ಬಿಡುಗಡೆ..

ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ನಿಂದ ‘ಕೆಂಪಾಂಬುಧಿ’; ಟೀಸರ್ ಬಿಡುಗಡೆ .. ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಪರಂಪರೆಯನ್ನು ತೆರೆ ಮೇಲೆ ಅನಾವರಣಗೊಳಿಸುವ ‘ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೋಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ. ದೂರದೃಷ್ಟಿಯ ಆಡಳಿತಗಾರ, ಜನಪರ ನಾಯಕ ಹಾಗೂ ಪರಿಸರದ ಮಹತ್ವವನ್ನು ಬಹಳ ಹಿಂದೆಯೇ ಅರಿತು ಅನುಷ್ಠಾನಗೊಳಿಸಿದ್ದ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿದೆ. ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಮೂಡಿಬಂದಿರುವ ‘ಕೆಂಪಾಂಬುಧಿ’, ಇತಿಹಾಸ, ಜನಪದ, ದಂತಕಥೆಗಳು ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ರೂಪುಗೊಂಡ ವಿಶಿಷ್ಟ ಚಿತ್ರವಾಗಿದೆ. ಇದು ಕೇವಲ ಐತಿಹಾಸಿಕ ಕಥನವಾಗಿಯೇ ಉಳಿಯದೆ, ಅಂದಿನ ಮತ್ತು ಇಂದಿನ ಬೆಂಗಳೂರನ್ನು ಜೋಡಿಸುವ ಪ್ರಯತ್ನವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ **‘ಗಾರ್ಡನ್ ಸಿಟಿ’**ಯ ಹಸಿರು ವೈಭವವನ್ನು ಮತ್ತೆ ನೆನಪಿಸುವುದರ ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ನಗರವನ್ನು ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಚಿತ್ರ ಮಾಡುತ್ತದೆ...