Skip to main content

ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಡಾ. ಸಂತೋಷ್ ಹೆಗಡೆಯವರಿಂದ ನಿರ್ಮಾಪಕ - ನಿರ್ದೇಶಕ ವೀರೇಂದ್ರಬಾಬು ನಂಜೇಗೌಡ ರಚಿಸಿರುವ "ಥ್ಯಾಂಕ್ಸ್ ಅಪ್ಪ" ಕನ್ನಡ ಕಾದಂಬರಿ ಲೋಕಾರ್ಪಣೆ...

ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಡಾ. ಸಂತೋಷ್ ಹೆಗಡೆಯವರಿಂದ ನಿರ್ಮಾಪಕ - ನಿರ್ದೇಶಕ ವೀರೇಂದ್ರಬಾಬು ನಂಜೇಗೌಡ ರಚಿಸಿರುವ "ಥ್ಯಾಂಕ್ಸ್ ಅಪ್ಪ" ಕನ್ನಡ ಕಾದಂಬರಿ ಲೋಕಾರ್ಪಣೆ...ನಮ್ಮನ್ನು ಭೂಮಿಗೆ ತಂದ ತಂದೆಗೆ ಸಲ್ಲಿಸಬಹುದಾದ ಕೃತಜ್ಞತೆಯ ಸಹಸ್ರನಾಮವಳಿಯೇ "ಥ್ಯಾಂಕ್ಸ್ ಅಪ್ಪ" ಕಾದಂಬರಿ. ನಿರ್ಮಾಪಕ - ನಿರ್ದೇಶಕ ವೀರೇಂದ್ರ ಬಾಬು ನಂಜೇಗೌಡ ಅವರು ಬರೆದಿರುವ "ಥ್ಯಾಂಕ್ಸ್ ಅಪ್ಪ" ಪುಸ್ತಕವನ್ನು ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್ ನಲ್ಲಿ ಡಾ. ಸಂತೋಷ್ ಹೆಗಡೆ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಜಿ.ಎಸ್.ಟಿ. ಜಂಟಿ ಆಯುಕ್ತರಾದ ಡಾ|| ಸಂಗಮೇಶ್ ಉಪಾಸೆ, ಮಾಜಿ ಶಾಸಕರಾದ ಶ್ರೀ ನೆ.ಲ.ನರೇಂದ್ರಬಾಬು, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಶ್ರೀ ಎಸ್. ಇ. ಸುಧೀಂದ್ರ, AICCಯ ನಾಷನಲ್ ಕಮಿಟಿ ಸದಸ್ಯರು ಕರ್ನಾಟಕ ಉಸ್ತುವಾರಿ ವಹಿಸಿರುವ ಶ್ರೀ ಸುಜೇಂದ್ರ ಶೆಟ್ಟಿ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ, ವಕೀಲರಾದ ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ, ಪೋಲಿಸ್ ಇನ್ಸಪೆಕ್ಟರ್ ಜಗದೀಶ್* ರವರು ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲೇಖಕರಾದ ವೀರೇಂದ್ರಬಾಬು ಅವರ ತಂದೆ ನಂಜೇಗೌಡ ಅವರು "ಥ್ಯಾಂಕ್ಸ್ ಅಪ್ಪ" ಕಾದಂಬರಿ ಬಿಡುಗಡೆಗೆ ಸಾಕ್ಷಿಯಾದರು.
ಡಾ. ಸಂತೋಷ್ ಹೆಗಡೆ ಯವರು ಮಾತನಾಡಿ "ಥ್ಯಾಂಕ್ಸ್ ಅಪ್ಪ" ಕಾದಂಬರಿ ನಾಡಿನ ಪ್ರತಿ ಮನೆಯಲ್ಲು ಇರಬೇಕಾದ ಪುಸ್ತಕ ಎನ್ನುವುದು ನನ್ನ ಅನಿಸಿಕೆ. Screen ಮೇಲೆ ಪ್ರದರ್ಶಿಸಿದ Promo ದಲ್ಲಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ "ಥ್ಯಾಂಕ್ಸ್ ಅಪ್ಪ" ಕಾದಂಬರಿಯನ್ನು ಉಡುಗೊರೆಯಾಗಿ ಪಡೆದ ದೃಶ್ಯದಂತೆ ಇವತ್ತಿನ ಪೀಳಿಗೆಗೆ ಅಪ್ಪನ ಮಹತ್ವ ತಿಳಿಸಲು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ರೂಡಿಸಿಕೊಳ್ಳಬೇಕು ಎಂದು ಲೇಖಕರಾದ ವೀರೇಂದ್ರಬಾಬು ನಂಜೇಗೌಡ ರವರಿಗೆ ಹಾರೈಸಿದರು. 
ಸ್ವತಃ ಲೇಖಕರಾದ ಡಾ|| ಸಂಗಮೇಶ್ ಉಪಾಸೆ ಯವರು ಮತನಾಡಿ ವೀರೇಂದ್ರಬಾಬು ನಂಜೇಗೌಡ ರವರು ಏನೇ ಮಾಡಿದರು ವಿಭಿನ್ನವಾಗಿ ಮಾಡುವವರು. ಸಿನಿಮೆಯ ರೀತಿಯಲ್ಲಿ ಕನ್ನಡದ ಕೃತಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು "ಥ್ಯಾಂಕ್ಸ್ ಅಪ್ಪ" ಕಾದಂಬರಿಯಲ್ಲಿ ಲೇಖಕರು 92 ಅಧ್ಯಯಗಳನ್ನು ಬರೆದಿದ್ದಾರೆ. ಇದರಲ್ಲಿ ಕಾದಂಬರಿ ಪ್ರಕಾರದಲ್ಲಿನ ಜನಪ್ರಿಯ ಶೈಲಿಯ ತಂತ್ರವನ್ನು ತನ್ನ ನಿರೂಪಣೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗ ಅಲ್ಲಿದ್ದ 19 ಸಾವಿರ ಹಳ್ಳಿಗರು KRS Dam ಗಾಗಿ ಹಳ್ಳಿಯನ್ನು ತೊರೆದು, ತ್ಯಾಗ ಮಾಡುವ ಹಿನ್ನಲೆಯಲ್ಲಿ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಕೊನೆಯ ಅಧ್ಯಾಯ ಓದುವಾಗ ಅದು ಲೇಖಕರ ಮಾತಾಗದೆ ನಮ್ಮೆಲ್ಲರ ಬಾವೋದ್ರೇಕವನ್ನ ಉದ್ದೀಪನಗೊಳಿಸಿ ಕಣ್ಣು ತೇವಗೊಳಿಸುವುದಂತು ನಿಜ. ಈ ಕಾರ್ಯಕ್ರಮದಲ್ಲಿ ಲೇಖಕರಾದ ವೀರೇಂದ್ರಬಾಬು ರವರ ತಂದೆ *ನಂಜೇಗೌಡ* ರವರು ಸಾಕ್ಷಿಯಾಗುವುದರಿಂದ ಇದೊಂದು ಅರ್ಥಪೂರ್ಣ ಸಂದರ್ಭ ಈ ಕಾರ್ಯಕ್ರಮದ ಮೂಲಕ ಜಗತ್ತಿನ ಎಲ್ಲಾ ತಂದೆಯರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಪುಸ್ತಕದ ಕುರಿತು ಆಶಯ ನುಡಿಯನ್ನು ಆಡಿದರು. 

ಚಲನಚಿತ್ರ ಕಿರುತೆರೆ ನಟರು, ಶಾಸಕರಾದ ಶ್ರೀ ನೆ.ಲ. ನರೇಂದ್ರಬಾಬು ರವರು ಮಾತಾಡಿ ಈ ಕಾದಂಬರಿಯ ಒಂದಿಷ್ಟು ಪುಟಗಳನ್ನು ಓದುವಾಗ ನನ್ನ ತಂದೆಯ ನೆನಪು ಕಾಡಿಸಲು ಶುರುವಾಯಿತು. ವೀರೇಂದ್ರಬಾಬು ರವರ "ಥ್ಯಾಂಕ್ಸ್ ಅಪ್ಪ" ನಮ್ಮ ಅಪ್ಪನನ್ನು ನೆನೆಯುವಂತೆ ಮಾಡುವುದೆ ಈ ಪುಸ್ತಕದ ಸಾರ್ಥಕತೆ ಎಂದು ಭಾವುಕರಾದರು. ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಎಸ್. ಇ. ಸುಧೀಂದ್ರ ರವರು ಕುಟುಂಬ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಾರುವ ಈ ಪುಸ್ತಕ "ಭಾವ ಭಗವದ್ಗೀತೆ" ಎಂದು ಶ್ಲಾಘಿಸಿದರು. ಕೆ.ಪಿ.ಸಿ.ಸಿ ಇತರೆ ಹಿಂದುಳಿದ ವರ್ಗಗಳ ವಿಭಾಗ ಉಪಾಧ್ಯಕ್ಷರು ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ ಯವರು ಅಪ್ಪನ ಹಾಡು ಹಾಡಿ ವೀಕ್ಷಕರ ಗಮನ ಸೆಳೆದರು.

ಅತಿಥಿ ಗಣ್ಯರು ಶುಭ ನುಡಿಗಳ ನಂತರ *ಬೆಂಗಳೂರು ಲಾ ಹೌಸ್ 2026ನೇ ಸಾಲಿನ ಶ್ರೇಷ್ಠ ಗೌರವ ಪುರಸ್ಕಾರವನ್ನು ಹೆಮ್ಮೆಯಿಂದ ನೀಡಿತು. ಶ್ರೀ ಸಂತೋಷ್ಹೆಗಡೆಯವರಿಗೆ ನ್ಯಾಯ ಶ್ರೇಷ್ಠ ಗೌರವ ಪುರಸ್ಕಾರ, ಡಾ|| ಸಂಗಮೇಶ್ ಉಪಾಸೆ, ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ "ವೃತ್ತಿ ಶ್ರೇಷ್ಠ," ಪಂಡಿತ್ ಅರುಣ್ ರಾಟೆಯವರಿಗೆ *"ಗುರು ಶ್ರೇಷ್ಠೆ" ಶ್ರೀ ಎಸ್.ಇ. ಸುಧೀಂದ್ರ, ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ ರವರಿಗೆ "ಜನ ಶ್ರೇಷ್ಠ" ಶ್ರೀ ನರೇಂದ್ರಬಾಬುರವರಿಗೆ "ಸೇವಾ ಶ್ರೇಷ್ಠ" ಗೌರವ ಪುರಸ್ಕಾರವನ್ನು ನೀಡಿ ಗೌರವಿಸಿದರು. ಇದೇ ಸಂತಸದಲ್ಲಿ ವೀರೇಂದ್ರಬಾಬು ನಂಜೇಗೌಡರವರು, ಪುಸ್ತಕಕ್ಕೆ ಮುನ್ನಡಿ ಬರೆದ ಇತಿಹಾಸ ತಜ್ಞರಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ರವರು ಹಾಗೇ ಪುಸ್ತಕಕ್ಕೆ ಬೆನ್ನುಡಿ ಬರೆದು ಬೆನ್ನು ತಟ್ಟಿ ಆಶಿರ್ವದಿಸಿದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. 

ಪುಸ್ತಕದ ಹಲವಾರು ಹಂತಗಳಲ್ಲಿ ಸಹಕರಿಸಿದ ಚಲನಚಿತ್ರ ನಿರ್ದೇಶಕಾರದ ಶ್ರೀ ರಾಮ್ ಜನಾರ್ಧನ್ ಹಾಗೂ ತನ್ನ ಕನಸಿಗೆ ಅಕ್ಷರ ರೂಪ ಕೊಟ್ಟ ಚಲನಚಿತ್ರ ಸಾಹಿತಿ-ಸಂಗೀತ ನಿರ್ದೇಶಕರಾದ ಶ್ರೀ ಕೆ. ಎಮ್ ಇಂದ್ರ ರವರನ್ನು ವೇದಿಕೆಯಲ್ಲಿ ಸನ್ಮಾಸಿಲಾಯಿತು. ಕಾರ್ಯಕ್ರಮವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದ ಅಂತರಾಷ್ಟ್ರೀಯ ನಿರೂಪಕರಾದ ಶ್ರೀ ಶಂಕರ್ ಪ್ರಕಾಶ್ ರವರು ಭಾವುಕರಾಗಿ ತಮ್ಮ ತಂದೆಯನ್ನು ನೆನೆದು ತನಗೆ ಕಂಚಿನ ಕಂಠ ಎಂದು ಕರೆಯುವುದರ ಹಿಂದೆ ತನ್ನ ತಂದೆಯ ಬಳುವಳಿ ಇದೆ. ಎಂದು ಗದ್ಗಿದಿತರಾದರು. 

"ಥ್ಯಾಂಕ್ಸ್ ಅಪ್ಪ" ಕಾದಂಬರಿಯನ್ನು "ಬೆಂಗಳೂರು ಲಾ ಹೌಸ್" ಪಬ್ಲಿಕೇಷನ್ ಹೊರ ತರುತ್ತಿದ್ದು. ವಿಶೇಷವಾಗಿ 8217215195 whatsapp ನಂಬರ್ ಗೆ "ಹಾಯ್" ಎಂದು ಮೆಸೇಜ್ ಮಾಡುವ ಮೂಲಕ "ಥ್ಯಾಂಕ್ಸ್ ಅಪ್ಪ" ಕಾದಂಬರಿ ಖರೀದಿಸಿದರೆ, ನಿಮ್ಮ ಮನೆಯ ವಿಳಾಸಕ್ಕೆ ಪುಸ್ತಕವನ್ನು ತಲುಪಿಸಲಾಗುವುದೆಂದು ಹೇಳಿದರು.

Comments

Popular posts from this blog

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ.

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ. ಉತ್ತರ ಅಮೇರಿಕಾದ ವೀರಶೈವ ಸಮಾಜದ (ವಿ.ಎಸ್.ಎನ್.ಎ) ಪರವಾಗಿ, ಅಮೇರಿಕಾದ ಟೆಕ್ಸಾಸ್ನ ಡಲ್ಲಾಸ್ನ ಅಲೆನ್ ನಗರದಲ್ಲಿ ಮೇ 3 ಅನ್ನು “ಬಸವ ದಿನ” ಎಂದು ಘೋಷಿಸಲಾಗಿದೆ ಎಂದು ಘೋಷಿಸಲು ನಾವು ಬಯಸುತ್ತೇವೆ. ಇದು ಅಮೇರಿಕಾದ ವೀರಶೈವ ಮತ್ತು ಲಿಂಗಾಯತ ಸಮುದಾಯದ ಅತ್ಯಂತ ಸುಂದರ ಕ್ಷಣವಾಗಿದೆ. ನಗರದ ಮೇಯರ್ ಬೈನ್ ಎಲ್ ಬ್ರೂಕ್ಸ್ ಅವರು ವಿ.ಎಸ್.ಎನ್.ಎ. ಡಲ್ಲಾಸ್ ಶಾಖೆಯಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಘೋಷಿಸಿದರು. ಸಮಾನತೆ ಮತ್ತು ಸಹಾನುಭೂತಿಯನ್ನು ಪ್ರತಿಪಾದಿಸಿದ ಮತ್ತು ಅವರ ಸಂದೇಶವು ಪ್ರಪಂಚದಾದ್ಯAತದ ಜನರಿಗೆ ಸ್ಫೂರ್ತಿ ನೀಡುತ್ತಿರುವ 12ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಜಗದ್ಗುರು ಬಸವಣ್ಣ ಅವರ ಜನ್ಮ ಮತ್ತು ಬೋಧನೆಗಳನ್ನು ಗೌರವಿಸಲು ಇದು. ಲಿಂಗ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವಿಲ್ಲದ ನ್ಯಾಯಯುತ ಸಮಾಜದ ಬಸವಣ್ಣನವರ ದೃಷ್ಟಿಕೋನವು ಏಕತೆ, ಪರಸ್ಪರ ಗೌರವ ಮತ್ತು ನೈತಿಕ ಜೀವನದ ಮಹತ್ವವನ್ನು ಉತ್ತೇಜಿಸುವ ಮೂಲಕ ಇಂದಿಗೂ ಆಳವಾಗಿ ಪ್ರಸ್ತುತವಾಗಿದೆ. 1978 ರಲ್ಲಿ ಸ್ಥಾಪನೆಯಾದ ವಿ.ಎಸ್.ಎನ್.ಎ., ಯು.ಎಸ್.ಎ. ಮತ್ತು ಕೆನಡಾದಲ್ಲಿ 32 ಶಾಖೆಗಳನ್ನು ಹೊಂದಿದೆ. ವಿ.ಎಸ್.ಎನ್.ಎ. ಈ ವರ್ಷ 47ನೇ ಸಮಾವೇ...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...