Skip to main content

ಫೆಬ್ರವರಿ 27 ರಂದು ಧನ್ವೀರ್ ಅಭಿನಯದ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ತೆರೆಗೆ..

ಫೆಬ್ರವರಿ 27 ರಂದು ಧನ್ವೀರ್ ಅಭಿನಯದ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ತೆರೆಗೆ.. 
ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘುಕುಮಾರ್ ಓ.ಆರ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ಫೆಬ್ರವರಿ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರರಂಗದ ಸದಸ್ಯರು ಮಾತನಾಡಿದರು.  
"ಹಯಗ್ರೀವ" ನಮ್ಮ ಸಂಸ್ಥೆಯ ಮೂರನೇ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಸಮೃದ್ಧಿ ಮಂಜುನಾಥ್, ನಾನು ಚಿತ್ರಪ್ರೇಮಿ. ಹೆಚ್ಚು ಚಿತ್ರಗಳನ್ನು ನೋಡುತ್ತಿರುತ್ತೇನೆ.‌ ರಘುಕುಮಾರ್ ಅವರು ನಿರ್ದೇಶಿಸಿದ್ದ ಕಿರುಚಿತ್ರ ನೋಡಿದ್ದೆ. ಬಹಳ ಇಷ್ಟವಾಗಿತ್ತು. ಅವರನ್ನು ಕರೆದು ಒಂದೊಳ್ಳೆ ಕಥೆ ಇದ್ದರೆ ಸಿನಿಮಾ ಮಾಡೋಣ ಅಂತ ಹೇಳಿದೆ. ಅವರು ಈ ಚಿತ್ರದ ಕಥೆ ಹೇಳಿದರು. ದರ್ಶನ್ ಅವರ ಮೂಲಕ ಧನ್ವೀರ್ ಅವರ ಪರಿಚಯವಾಯಿತು. ಧನ್ವೀರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಕನ್ನಡದಲ್ಲಿ ತೀರ ಅಪರೂಪದ ಕಥೆ ಇದು. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಇದೇ ಫೆಬ್ರವರಿ 27 ರಂದು "ಹಯಗ್ರೀವ" ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. 
ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ರಘುಕುಮಾರ್, ನಮ್ಮ ಚಿತ್ರದ ಕಥೆಯನ್ನು ಇಂಡಿಯನ್ ಮೈಥಾಲಜಿನ್ನು ಪ್ರಮುಖವಾಗಿಟ್ಟುಕೊಂಡು ಹೆಣೆಯಲಾಗಿದೆ. ಈ ರೀತಿಯ ಕಥೆ ಕನ್ನಡದಲ್ಲಿ ಅಪರೂಪ ಎನ್ನಬಹುದು. ಧನ್ವೀರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಶೈಲೇಶ್ ಕುಮಾರ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ ಎಂದರು. ‌       
ನಿರ್ಮಾಪಕರಾದ ಸಮೃದ್ಧಿ ಮಂಜುನಾಥ್ ಅವರಿಗೆ ಧನ್ಯವಾದ. ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ದರ್ಶನ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದರು. ಅವರಿಗೂ ಧನ್ಯವಾದ ಹೇಳುತ್ತೇನೆ. ನಿರ್ದೇಶಕ ರಘುಕುಮಾರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ರಘುಕುಮಾರ್ ಅವರು ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನು ತೆರೆಯ ಮೇಲೂ ತಂದಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಂದು ಪೊಲೀಸ್ ಅಧಿಕಾರಿ ಪಾತ್ರ. ಮತ್ತೊಂದು ಏನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ನಾಯಕಿ ಸಂಜನಾ ಆನಂದ್ ಅವರು ಚೆನ್ನಾಗಿ ನಟಿಸಿದ್ದಾರೆ. ಹಿರಿಯ ಕಲಾವಿದರ ಜೊತೆಗೆ ಅಭಿನಯಿದ್ದು ಬಹಳ ಖುಷಿಯಾಯಿತು. ಮೊದಲಿನಿಂದಲೂ ನಾವೆಲ್ಲರೂ ನೀಡುತ್ತಾ ಬಂದಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ ಎಂದರು.
 ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ ನಾಯಕಿ ಸಂಜನಾ ಆನಂದ್, ಚಿತ್ರತಂಡಕ್ಕೆ ಧನ್ಯವಾದ ಹೇಳಿದರು‌. ಚಿತ್ರದಲ್ಲಿ ನಟಿಸಿರುವ ನಟ ಅಶ್ವಿನ್ ಹಾಸನ್ ಹಾಗೂ ನಟಿ ಆಶಾರಾಣಿ ಅವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

Comments

Popular posts from this blog

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ.

ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನ ಅಲೆನ್ ಸಿಟಿಯಲ್ಲಿ ಬಸವ ದಿನ ಘೋಷಣೆ ಮತ್ತು ಅಮೇರಿಕಾದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ವಿ.ಎಸ್.ಎನ್.ಎ. 47ನೇ ಸಮಾವೇಶ. ಉತ್ತರ ಅಮೇರಿಕಾದ ವೀರಶೈವ ಸಮಾಜದ (ವಿ.ಎಸ್.ಎನ್.ಎ) ಪರವಾಗಿ, ಅಮೇರಿಕಾದ ಟೆಕ್ಸಾಸ್ನ ಡಲ್ಲಾಸ್ನ ಅಲೆನ್ ನಗರದಲ್ಲಿ ಮೇ 3 ಅನ್ನು “ಬಸವ ದಿನ” ಎಂದು ಘೋಷಿಸಲಾಗಿದೆ ಎಂದು ಘೋಷಿಸಲು ನಾವು ಬಯಸುತ್ತೇವೆ. ಇದು ಅಮೇರಿಕಾದ ವೀರಶೈವ ಮತ್ತು ಲಿಂಗಾಯತ ಸಮುದಾಯದ ಅತ್ಯಂತ ಸುಂದರ ಕ್ಷಣವಾಗಿದೆ. ನಗರದ ಮೇಯರ್ ಬೈನ್ ಎಲ್ ಬ್ರೂಕ್ಸ್ ಅವರು ವಿ.ಎಸ್.ಎನ್.ಎ. ಡಲ್ಲಾಸ್ ಶಾಖೆಯಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಘೋಷಿಸಿದರು. ಸಮಾನತೆ ಮತ್ತು ಸಹಾನುಭೂತಿಯನ್ನು ಪ್ರತಿಪಾದಿಸಿದ ಮತ್ತು ಅವರ ಸಂದೇಶವು ಪ್ರಪಂಚದಾದ್ಯAತದ ಜನರಿಗೆ ಸ್ಫೂರ್ತಿ ನೀಡುತ್ತಿರುವ 12ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಜಗದ್ಗುರು ಬಸವಣ್ಣ ಅವರ ಜನ್ಮ ಮತ್ತು ಬೋಧನೆಗಳನ್ನು ಗೌರವಿಸಲು ಇದು. ಲಿಂಗ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವಿಲ್ಲದ ನ್ಯಾಯಯುತ ಸಮಾಜದ ಬಸವಣ್ಣನವರ ದೃಷ್ಟಿಕೋನವು ಏಕತೆ, ಪರಸ್ಪರ ಗೌರವ ಮತ್ತು ನೈತಿಕ ಜೀವನದ ಮಹತ್ವವನ್ನು ಉತ್ತೇಜಿಸುವ ಮೂಲಕ ಇಂದಿಗೂ ಆಳವಾಗಿ ಪ್ರಸ್ತುತವಾಗಿದೆ. 1978 ರಲ್ಲಿ ಸ್ಥಾಪನೆಯಾದ ವಿ.ಎಸ್.ಎನ್.ಎ., ಯು.ಎಸ್.ಎ. ಮತ್ತು ಕೆನಡಾದಲ್ಲಿ 32 ಶಾಖೆಗಳನ್ನು ಹೊಂದಿದೆ. ವಿ.ಎಸ್.ಎನ್.ಎ. ಈ ವರ್ಷ 47ನೇ ಸಮಾವೇ...

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’..

ಜುಲೈ 25 ರಂದು ತೆರೆಗೆ ಬರಲಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’.. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ.‌ ರಂಜನಿ ರಾಘವನ್ ನಾಯಕಿ .. ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ,‌‌ ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ "ಸ್ವಪ್ನ ಮಂಟಪ" ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ.  ಮೈಸೂರಿನ ಎ.ಎಂ.ಬಾಬು ನಿರ್ಮಾಣದ  ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು "ಸ್ವಪ್ನ ಮಂಟಪ" ಎಂದು ಕರೆಯುತ್ತಿದ್ದರು.  ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ...

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...