Skip to main content

ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣ...

ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣ... 
ಜುಲೈ 3 ರಂದು ತೆರೆಗೆ ಬರಲಿದೆ ವಿನಯ್ ರಾಜ್ ಕುಮಾರ್ ಅಭಿನಯದ ಈ ಚಿತ್ರ...              
ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ - ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ - ಮೇಘ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ "ಗ್ರಾಮಾಯಣ" ಚಿತ್ರದ‌ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ದುನಿಯಾ ವಿಜಯ್ ಹಾಗೂ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಅವರಿಂದ "ಗ್ರಾಮಾಯಣ"ದ ಟ್ರೇಲರ್ ಅನಾವರಣವಾಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯವ ರಾಜಕುಮಾರ್, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, " ಗ್ರಾಮಾಯಣ"ಕ್ಕೆ ಶುಭ ಕೋರಿದರು.  
 ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದು‌ ಟ್ರೇಲರ್ ಬಿಡುಗಡೆ ಮಾತನಾಡಿದ ನಟ ದುನಿಯಾ ವಿಜಯ್, ಟ್ರೇಲರ್ ಅದ್ಭುತವಾಗಿದೆ. ದೇವನೂರು ಚಂದ್ರು ಉತ್ತಮ ನಿರ್ದೇಶಕ.‌ ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ.‌ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ‌ ಇಡೀ "ಗ್ರಾಮಾಯಣ" ತಂಡಕ್ಕೆ ಒಳ್ಳೆಯದಾಗಲಿ ಎಂದರು.
 ಅಪರ್ಣ, "ಗ್ರಾಮಾಯಣ" ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ‌ ಮೇಲೆ ಅಲ್ಲಿನ ವಿಷಯಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು. ಇಂದು ಅವರಿಲ್ಲದೆ ಅವರ ಅಭಿನಯದ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು, ಬಹಳ ಬೇಸರವಾಗಿದೆ‌. "ಗ್ರಾಮಾಯಣ" ಯಶಸ್ವಿಯಾಗಲಿ ಎಂದು ನಟಿ ಅಪರ್ಣ ಪತಿ ನಾಗರಾಜ್ ವಸ್ತಾರೆ ಹೇಳಿದರು. 
ಈ ಚಿತ್ರದ ಬಗ್ಗೆ ನಾವು ಹೇಳುದಕ್ಕಿಂತ ಅಭಿಮಾನಿಗಳು ಹೇಳಬೇಕು. ಜುಲೈ 3 ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟ ರಾಘವೇಂದ್ರ ರಾಜಕುಮಾರ್. ಅಣ್ಣನ ಚಿತ್ರ ಯಶಸ್ವಿಯಾಗಲೆಂದು ಯುವ ರಾಜಕುಮಾರ್ ಹಾರೈಸಿದರು. ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಮೊದಲ ಪ್ರದರ್ಶನಕ್ಕೆ ಒಂದು ಆಡಿಯನ್ನೇ ಬುಕ್ ಮಾಡುವುದಾಗಿ ಹೇಳಿದರು. ನಟ ನವೀನ್ ಶಂಕರ್ ಕೂಡ "ಗ್ರಾಮಾಯಣ"ಕ್ಕೆ ಶುಭ ಕೋರಿದರು. "ಗ್ರಾಮಾಯಣ" ಟ್ರೇಲರ್ ಚೆನ್ನಾಗಿ ಬಂದಿದೆ. ಚಿತ್ರ ಇನ್ನೂ ಚೆನ್ನಾಗಿ ಬಂದಿದೆ. ಇದು ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ವಿನಯ್ ರಾಜಕುಮಾರ್ ಅವರ ಅಭಿನಯದ ಒಂಭತ್ತನೇ ಚಿತ್ರವೂ ಹೌದು. ಒಂಭತ್ತು ನಮ್ಮ ಸಂಸ್ಥೆಗೆ ಅದೃಷ್ಟದ ಸಂಖ್ಯೆ.‌ ಇಂದು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು. ನಿರ್ಮಾಪಕ ನವೀನ್ ಮನೋಹರ್ ಅವರು ಸಹ ಎಲ್ಲರಿಗೂ ಧನ್ಯವಾದ ಹೇಳೊದರು. ಲಹರಿ ಸಂಸ್ಥೆಯ ಸ್ಥಾಪಕ ಮನೋಹರ್ ನಾಯ್ಡು ಹಾಗೂ ಅವರ ಸಹೋದರ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.                     
 ಈ ವೇದಿಕೆ ನೋಡುತ್ತಿದ್ದರೆ, ನನಗೆ ಚಿತ್ರದ ಆರಂಭದ ದಿನಗಳು ನೆನಪಾಗುತ್ತಿದೆ. ನಮ್ಮ ಚಿತ್ರ ಶುರುವಾಗಿ ಇಷ್ಟು ವರ್ಷ ಆಯಿತು ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು. ಲಹರಿ ಸಂಸ್ಥೆಯವರು ನಮ್ಮ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅವರಿಗೆ, ನಿರ್ದೇಶಕರಿಗೆ, ಇಡೀ ತಂಡಕ್ಕೆ ಹಾಗೂ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ವಿನಯ್ ರಾಜಕುಮಾರ್, ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಈ ಚಿತ್ರದಲ್ಲಿ ಮಾಡಿರುವುದಾಗಿ ಹೇಳಿದರು.        
ಚಿತ್ರದ ಬಗ್ಗೆ ನಾನು ಹೇಳುವುದೇನು ಇಲ್ಲ. ಒಂದಂತೂ ಹೇಳುತ್ತೇನೆ. ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ,‌ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದು ಹೇಳಿದ ನಿರ್ದೇಶಕ ದೇವನೂರು ಚಂದ್ರು ತುಂಬಾ ಭಾವುಕರಾದರು.
ನಟಿ ಮೇಘ ಶೆಟ್ಟಿ ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಟ ಅರುಣ್ ಸಾಗರ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಮುಂತಾದವರು "ಗ್ರಾಮಾಯಣ" ಚಿತ್ರದ ಕುರಿತು ಮಾತನಾಡಿದರು.  
 ವಿನಯ್ ರಾಜಕುಮಾರ್, ಮೇಘ ಶೆಟ್ಟಿ, ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..  ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ 'ಸೆಪ್ಟೆಂಬರ್ 10' ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.   ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಅವರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಅವರು ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.  ಈ ಚಿತ್ರಕ್ಕೆ ನಮ್ಮ ಕರ್ನಾಟಕ ಸೇನೆಯ ಬಸವರಾಜ ಪಡುಕೋಣೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಸೇರಿ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ೩೧ ಜಿಲ್ಲೆಯಲ್ಲಿರೋ ತಮ್ಮ ಕಾರ್ಯಕರ್ತರಿಗೆ ಈ ಸಿನಿಮಾ ನೋಡಲು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಲ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬುದು ಚಿತ್ರದ ಸಂದೇಶ. ಸಾಯಿ ಪ್ರಕಾಶ್ ಅವರ ನಿರ್ದೇಶನದ 105ನೇ ಚಿತ್ರವಿದು.  ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಸಾಯಿಪ...