Skip to main content

ರುಕ್ಮಿಣಿ ರಾಧಾಕೃಷ್ಣ 2 ಹಾಡುಗಳ ಬಿಡುಗಡೆ..

ರುಕ್ಮಿಣಿ ರಾಧಾಕೃಷ್ಣ 2 ಹಾಡುಗಳ ಬಿಡುಗಡೆ.. 
  ಉಮೇಶ್ ಫಿಲಂಸ್ ಲಾಂಛನದಲ್ಲಿ ಎನ್. ಹನುಮಂತರಾಜು, ಎನ್.ಹೆಚ್.ಉಮೇಶ್ ನಿರ್ಮಿಸುತ್ತಿರುವ 'ರುಕ್ಮಿಣಿ ರಾಧಾಕೃಷ್ಣ ಚಿತ್ರಕ್ಕೆ ಪ್ರಾಣ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ. ಸುನಾದ್ ಗೌತಂ ಅವರ ಸಂಗೀತ ನಿರ್ದೇಶನವಿರುವ ೨ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್, ಪಾರು ಖ್ಯಾತಿಯ ಮೋಕ್ಷಿತಾ ಪೈ, ರಿಯಾ ಸಚ್ ದೇವ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
ಆಡಿಯೋ ರಿಲೀಸ್ ಮಾಡಿದ ಲಹರಿ ವೇಲು ಮಾತನಾಡುತ್ತ ಈ ಚಿತ್ರದಲ್ಲಿ ೫ ಸುಂದರ ಹಾಡುಗಳಿದ್ದು, ಅವುಗಳನ್ನು ಅಷ್ಟೇ ಅದ್ಭುತವಾಗಿ ಪಿಚ್ಚರೈಜೇಷನ್ ಮಾಡಿದ್ದಾರೆ. ನಾನು ಕೂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದರು.
ಸಾಹಿತಿ ಕೆ.ಕಲ್ಯಾಣ್ ಮಾತನಾಡಿ ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ ಎಂದರು.      
      ನಾಯಕ ಭರತ್ ಕುಮಾರ್ ಮಾತನಾಡುತ್ತ ಲಹರಿ ವೇಲು ಅವರ ಬಳಿ ಹೋದಾಗ ಬಹಳ ಅರ್ಥ ಪೂರ್ಣವಾದ ಸಾಲುಗಳನ್ನು ಹಾಕಿದ್ದೀರಿ ಎಂದು ಪ್ರಶಂಸಿಸಿದರು. ಅಲ್ಲದೆ ಒಳ್ಳೆಯ ಮೊತ್ತಕ್ಕೆ ಆಡಿಯೋ ಮಾಡಿಕೊಟ್ಟರು. ೨ ಭಾಷೆಯ ಸಾಂಗ್ ಬೇಕು ಎಂದಾಗ ಕೆ.ಕಲ್ಯಾಣ್ ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ಇನ್ನು ಪ್ರೊಡ್ಯೂಸರ್ ಇಬ್ಬರೂ ನನ್ನ ಬ್ರದರ್ಸ್ ಇದ್ದಹಾಗೆ. ರುಕ್ಮಿಣಿಗೂ ಕೃಷ್ಣನಿಗೂ ಮಧ್ಯೆ ಇರುವ ಆತ್ಮವೇ ರಾಧಾ. ಈ ಹಾಡುಗಳು ಇಷ್ಟು ಚೆನ್ನಾಗಿ ಬರಲು ಸುನಾದ್ ಗೌತಂ ಅವರೇ ಕಾರಣ ಎಂದರು.
 ನಾಯಕಿ ಮೋಕ್ಷಿತಾ ಪೈ ಮಾತನಾಡುತ್ತ ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ, ಆ ಪಾತ್ರದ ಇನ್ಟೆನ್ಸ್ ನನಗೆ ತುಂಬಾ ಇಷ್ಟವಾಯ್ತು. ರುಕ್ಮಿಣಿ ಇಲ್ಲದೆ ರಾಧಾ ಇಲ್ಲ, ಕುಂಭ ಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದರು. ನಟಿ, ಮಾಡೆಲ್ ಕೂಡ ಆದ ರಿಯಾ ಸಚ್ ದೇವ್ ಮಾತನಾಡುತ್ತ ನಾನಿಲ್ಲಿ ರುಕ್ಮಿಣಿ ಪಾತ್ರ ಮಾಡಿದ್ದೇನೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರ ಕೊಟ್ಟಿದ್ದಾರೆ ಎಂದರು.
ಸಂಗೀತ ನಿರ್ದೇಶಕ ಸುನಾದ್ ಗೌತಂ ಮಾತನಾಡುತ್ತ ಕಥೆ ತುಂಬಾ ಯೂನಿಕ್ ಆಗಿದೆ. ದೊಡ್ಡದಾಗಿ ಪ್ರೊಜೆಕ್ಟ್ ಮಾಡಬೇಕು ಅಂತ ಕನಸಿಟ್ಟುಕೊಂಡಿದ್ದಾರೆ ಎಂದರು.
ನಿರ್ದೇಶಕ ಪ್ರಾಣ್ ಸುವರ್ಣ ಮಾತನಾಡಿ ಕಲ್ಯಾಣ್ ಅವರು ಟ್ಯೂನ್ ಕೊಟ್ಟ ಮಾರನೇ ದಿನವೇ ಲಿರಿಕ್ ಕೊಟ್ಟರು. ಪಿನಾಕಾ ಸಮಯದಲ್ಲಿ ನನಗೆ ಭರತ್ ಪರಿಚಯವಾದರು. ನನ್ನ ಕೆಲಸ ಇಷ್ಟಪಟ್ಟು ಸಿನಿಮಾ ಮಾಡೋಣ ಅಂತ ಹೇಳಿ ನಿರ್ಮಾಪಕರ ಬಳಿ ಕರೆದುಕೊಂಡು ಹೋದರು. ಭರತ್ ಹೇಳಿದ ಒಂದು ಲೈನ್ ಇಟ್ಡುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಕೃಷ್ಣನಿಗೆ ಆತ್ಮ ಅಂತ ಇರೋದು ರಾಧ, ರುಕ್ಮಿಣಿ ಕೃಷ್ಣನ ಸಂಗಾತಿಯಾಗಿ ಉಳಿದರೂ ರಾಧ ಆತನ ಆತ್ಮವಾಗಿ ಉಳಿದುಕೊಳ್ತಾಳೆ.ಕುಂಭಕೋಣಂನಲ್ಲಿ ಚಿತ್ರದ ಮೇಜರ್ ಪೋರ್ಷನ್ ನಡೆಯುತ್ತದೆ ಎಂದರು. ನಿರ್ಮಾಪಕ ಉಮೇಶ್ ಮಾತನಾಡಿ ೯೦ರಷ್ಟು ಶೀ
ಶೂಟಿಂಗ್ ಮುಕ್ತಾಯವಾಗಿದ್ದು ಒಂದು ಸಾಂಗ್ ಮಾತ್ರ ಬಾಕಿಯಿದೆ ಎಂದರು.

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..  ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ 'ಸೆಪ್ಟೆಂಬರ್ 10' ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.   ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಅವರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಅವರು ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.  ಈ ಚಿತ್ರಕ್ಕೆ ನಮ್ಮ ಕರ್ನಾಟಕ ಸೇನೆಯ ಬಸವರಾಜ ಪಡುಕೋಣೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಸೇರಿ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ೩೧ ಜಿಲ್ಲೆಯಲ್ಲಿರೋ ತಮ್ಮ ಕಾರ್ಯಕರ್ತರಿಗೆ ಈ ಸಿನಿಮಾ ನೋಡಲು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಲ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬುದು ಚಿತ್ರದ ಸಂದೇಶ. ಸಾಯಿ ಪ್ರಕಾಶ್ ಅವರ ನಿರ್ದೇಶನದ 105ನೇ ಚಿತ್ರವಿದು.  ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಸಾಯಿಪ...