Skip to main content

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ "ರಾ.. ರಾ.. RX"..

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ "ರಾ.. ರಾ.. RX"..
ಅದ್ದೂರಿಯಾಗಿ ಆರಂಭವಾಯಿತು ಯತಿರಾಜ್ ನಿರ್ದೇಶನದ ಹಾಗೂ ಕಾರ್ತೀಕೇಯ ಎಂಟರ್ ಪ್ರೈಸಸ್ ನಿರ್ಮಾಣದ ಈ ಚಿತ್ರ..                         
ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕ ಯತಿರಾಜ್ ನಿರ್ದೇಶನದ ಮತ್ತು ಕಾರ್ತಿಕೇಯ ಎಂಟರ್ ಪ್ರೈಸಸ್ ಲಾಂಛನದಲ್ಲಿ ವೃದ್ಧಿ ಸುನೀಲ್, ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಎಸ್ ಎಂ ನಿರ್ಮಿಸುತ್ತಿರುವ "ರಾ.. ರಾ..RX" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಹಿರಿಯ ಛಾಯಾಗ್ರಾಹಕ ಕೆ.ಎನ್ ನಾಗೇಶ್ ಕುಮಾರ್, ಪತ್ರಕರ್ತ ವಿ.ಸಿ.ಎನ್ ಮಂಜು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ವೃದ್ಧಿ ಸುನೀಲ್ ಅವರ ಪತ್ನಿ ಪ್ರಿಯ ಕ್ಯಾಮೆರಾ ಚಾಲನೆ ಮಾಡಿದರು. ಸಮಾರಂಭಕ್ಕೆ ಆಗಮಿಸಿದ ಅಮ್ಮಂದರಿಂದ ಚಿತ್ರದ ಟೈಟಲ್ ಟೀಸರ್ ಅನಾವರಣವಾಗಿದ್ದು ವಿಶೇಷವಾಗಿತ್ತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.                           
ಇದು, ನಾನು ಬರೆದಿರುವ ಕಥೆ. ಪುಸ್ತಕರೂಪದಲ್ಲಿ ಹೊರತರೋಣ ಅಂದುಕೊಂಡೆ. ಆದರೆ ಈಗ ಅದು ಚಿತ್ರವಾಗುತ್ತಿದೆ. ಈ ಕಥೆಯನ್ನು ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಅವರ ಹತ್ತಿರ ಹೇಳಿದ್ದೆ. ಅವರು ಅವರ ಸ್ನೇಹಿತರಾದ ವೃದ್ಧಿ ಸುನೀಲ್ ಅವರ ಬಳಿ ಕಥೆ ಚೆನ್ನಾಗಿದೆ ಎಂದು ಹೇಳಿದರಂತೆ. ಸುನೀಲ್ ಅವರು ನನ್ನ ಕರೆಸಿ ಕಥೆ ಕೇಳಿ,‌ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದರು. ವೃದ್ಧಿ ಸುನೀಲ್ ಅವರ ಜೊತೆಗೆ ಚೇತನ್ ಹಾಗೂ ಚಂದ್ರಶೇಖರ್ ಅವರು ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. "ರಾ.. ರಾ.. RX", ರಾಜೀವ ಹಾಗೂ ರಾಕೇಶ‌ ಎಂಬ ಸ್ನೇಹಿತರು RX ಬೈಕ್ ನಲ್ಲಿ ಪಯಣಿಸುವಾಗ ನಡೆಯುವ ಕಥೆ. ತಾಯಿ - ಮಗನ ಬಾಂಧವ್ಯದ ಕಥೆಯೂ ಹೌದು. ಈ ಚಿತ್ರದಲ್ಲಿ RX ಬೈಕ್ ಸಹ ಪ್ರಮುಖ ಪಾತ್ರಧಾರಿ. ಕಥೆಯೇ ಈ ಚಿತ್ರದ ನಾಯಕ. ಅನೇಕ ನೂತನ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದ್ದೇವೆ. ಈ ಚಿತ್ರದಲ್ಲಿ ನಟಿಸುತ್ತಿರುವ ಬಹುತೇಕರಿಗೆ ಇದು ಮೊದಲ ಸಿನಿಮಾ. ಇದೇ ಇಪ್ಪತ್ತನೇ ತಾರೀಖಿನಿಂದ ಮದ್ದೂರಿನಲ್ಲಿ ಚಿತ್ರೀಕರಣ ಆರಂಭ. ಎಲ್ಲಾ ಅಂದುಕೊಂಡಂತೆ ಆದರೆ ಮೂವತ್ತೈದು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ. ವಿಜಯ್ ಹರಿತ್ಸ ಅವರ ಸಂಗೀತ ನಿರ್ದೇಶನ ಹಾಗೂ ದೀಪಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರ ಅದ್ದೂರಿಯಾಗಿ ಮೂಡಿ ಬರಲಿದೆ. ಅದಕ್ಕೆ ನಿರ್ಮಾಪಕರ ಸಹಕಾರ ಅಪಾರವಾಗಿದೆ. ನಾನು ನಿರ್ದೇಶನದ ಜೊತೆಗೆ ಒಂದು ಸಣ್ಣ ಪಾತ್ರದಲ್ಲಿ ಅಭಿನಯ ಕೂಡ ಮಾಡುತ್ತಿದ್ದೇನೆ‌ ಎಂದು ನಿರ್ದೇಶಕ ಯತಿರಾಜ್ ಹೇಳಿದರು.                            
ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಅವರ ಮೂಲಕ ಯತಿರಾಜ್ ಅವರ ಪರಿಚಯವಾಯಿತು. ಮೊದಲಿನಿಂದಲೂ ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವ ಆಸೆ ಇತ್ತು. ಯತಿರಾಜ್ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ವೃದ್ಧಿ ಸುನೀಲ್ ತಿಳಿಸಿದರು. ಮತ್ತಿಬ್ಬರು ನಿರ್ಮಾಪಕರಾದ ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಅವರು ಸಹ ಕಥೆಯ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.                               
ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಆರ್ ಎಕ್ಸ್ ಬೈಕ್ ನ ಕುರಿತಾಗಿಯೇ ಇದೆ ಎಂದು ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಹೇಳಿದರು.     "ವಸುದೈವ ಕುಟುಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಾಜೀವ ನನ್ನ ಪಾತ್ರದ ಹೆಸರು ಎಂದರು ನಟ ಅನೂಪ್ ಬೆಳ್ಳಾವಿ. ಆಡಿಷನ್ ಮೂಲಕ ಆಯ್ಕೆಯಾದೆ. ನನ್ನ ಪಾತ್ರ ಚೆನ್ನಾಗಿದೆ ಎಂದು ರಾಕೇಶ್ ಪಾತ್ರಧಾರಿ ನಟ ಭರತ್ ತಿಳಿಸಿದರು. ನಾಯಕಿಯರಾಗಿ ಆಭಿನಯಿಸುತ್ತಿರುವ ಕೀರ್ತನ, ಐಶ್ವರ್ಯ, ನಟ ಭರತ್, ನಟಿ ಸಹನಾ ಶ್ರೀ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ದೀಪಕ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಅಲೋಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments

Popular posts from this blog

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ. ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ   ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.   ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.  ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು. BIG BO...

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ..

OTT ನಲ್ಲಿ ಧೂಳೆಬ್ಬಿಸುತ್ತಿದೆ “ರಾನಿ “ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ “ರಾನಿ”ಸಿನಿಮಾ Z-5 OTT platform ನಲ್ಲಿ ಬಿಡುಗೆಯಾಗಿ ಬಾರಿ ಜನ ಮೆಚ್ಚುಗೆ ಪಡೆಯುತ್ತಿದೆ.. ಬಿಡುಗಡೆಯಾದ ಎರಡೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಯಾಗಿ ದಾಖಲೆ ಬರೆದಿದೆ,ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ರಾಜ್ ಗೆ ರಾಧ್ಯ, ಸಮೀಕ್ಷಾ, ಅಪೂರ್ವ ಮೂವರು ನಾಯಕಿಯರಿದ್ದು ರವಿ ಶಂಕರ್,ಬಿ ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ,ಉಗ್ರಂ ಮಂಜು,ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್, ಮುಂತಾದ ದೊಡ್ಡ ತಾರಾಗಣ ವಿದ್ದು ಮಣಿಕಾಂತ್ ಕದ್ರಿ ಸಂಗೀತ ರಾಘವೇಂದ್ರ ಕೋಲರ್ ಛಾಯಾಗ್ರಹಣ,ಸತೀಶ್ ಕಲಾ ನಿರ್ದೇಶನ ಉಮೇಶ್ ಸಂಕಲನ ವಿದೆ,ಈ ಚಿತ್ರವು ಕಳೆದ ವರ್ಷ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಿಕರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಈಗ OTT ನಲ್ಲೂ ಧೂಳೆಬ್ಬಿಸುತ್ತಿದೆ.

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..

'ಸೆಪ್ಟೆಂಬರ್ 10' ಸೆ. 12ರಂದು ಬಿಡುಗಡೆ..  ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ 'ಸೆಪ್ಟೆಂಬರ್ 10' ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.   ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಅವರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಅವರು ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.  ಈ ಚಿತ್ರಕ್ಕೆ ನಮ್ಮ ಕರ್ನಾಟಕ ಸೇನೆಯ ಬಸವರಾಜ ಪಡುಕೋಣೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಸೇರಿ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ೩೧ ಜಿಲ್ಲೆಯಲ್ಲಿರೋ ತಮ್ಮ ಕಾರ್ಯಕರ್ತರಿಗೆ ಈ ಸಿನಿಮಾ ನೋಡಲು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಲ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬುದು ಚಿತ್ರದ ಸಂದೇಶ. ಸಾಯಿ ಪ್ರಕಾಶ್ ಅವರ ನಿರ್ದೇಶನದ 105ನೇ ಚಿತ್ರವಿದು.  ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಸಾಯಿಪ...